ಋತುಚಕ್ರ ನೈಸರ್ಗಿಕ ಪ್ರಕ್ರಿಯೆಯಾಗಿದ್ದು: ಅಂಬಲಗಿ
ಇಂಡಿ06: ಋತುಚಕ್ರ ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಕಿಶೋರಿಯರು ಯಾವುದಕ್ಕು ಭಯಪಡದೆ ಜಾಗೃತಿ ವಹಿಸಬೇಕು. 28-35 ದಿನಗಳಿಗೊಮ್ಮೆ ಪ್ರತಿ ಹೆಣ್ಣಿನಲ್ಲಿ 3 ರಿಂದ 5 ದಿನಗಳ ಕಾಲ ನಡೆಯುವ ಸಹಜ ಪ್ರಕ್ರಿಯೆ ಎಂದು ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಅಂಬಲಗಿ ಹೇಳಿದರು.
ಅವರು ಸೋಮವಾರ ತಾಲೂಕಿನ ಬೋಳೆಗಾಂವ ಗ್ರಾಮದ ಸಂಗನಬಸವೇಶ್ವರ ಕಾಲೇಜಿನಲ್ಲಿ ಹಮ್ಮಿಕೊಂಡ ಋತುಚಕ್ರ ಅಧಿಯಲ್ಲಿ ನೈರ್ಮಲ್ಯದ ಕುರಿತು ಅರಿವು ಮೂಡಿಸುವ ಕಾರ‌್ಯಕ್ರಮದಲ್ಲಿ ಮಾತನಾಡಿದರು. ಮಹಿಳೆ ದೈಹಿಕವಾಗಿ, ಮಾನಸಿಕವಾಗಿ ಹಲವಾರು ಬದಲಾವಣೆಗಳಾಗುತ್ತವೆ. ವೈಯಕ್ತಿಕವಾಗಿ ಮನುಷ್ಯ ತನ್ನ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛೆತೆಯಿಂದ ಇರಬೇಕು. ತಾನು ಸೇವಿಸುವ ಆಹಾರ ಪದಾರ್ಥಗಳು ಒಳೆಯ ಗುಣಮಟ್ಟದಿಂದ ಸೇವಿಸಬೇಕು. ಮಹಿಳೆಯರು ಸುಚಿಯಾದ ಶೌಚಗ್ರಹ ಬಳಕೆ ಮಾಡಬೇಕು. ಒಳೆಯ ಗುಣಮಟ್ಟದ ಸ್ಯಾನಿಟರಿ ಪ್ಯಾಡಗಳು ಬಳಿಸಿದ ನಂತರ ಸೂಕ್ತ ವಿಲೇವಾರಿ ಮಾಡುವುದರ ಜೋತೆಗೆ ನಿಮ್ಮ ಆರೋಗ್ಯದ ಬಗ್ಗೆ ಹೇಚ್ಚಿನ ಕಾಳಜಿ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕೆ.ಆರ್. ಕಾಪ್ಸೆ, ಎಸ್.ಜಿ. ರಾಯಣವರ್, ಭುವನೇಶ್ವರಿ ಬಂಗಲಿ ಸೇರಿದಂತೆ ಅನೇಕ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.