ಯರಗಟ್ಟಿ

ರೋಗಿಗಳ ಜೀವ ಉಳಿಸುವ ರಕ್ತದಾನಿಗಳೇ ಶ್ರೇಷ್ಠ: ವಿನಯಕುಮಾರ

ರೋಗಿಗಳ ಜೀವ ಉಳಿಸುವ ರಕ್ತದಾನಿಗಳೇ ಶ್ರೇಷ್ಠ: ವಿನಯಕುಮಾರ

ಯರಗಟ್ಟಿ 28: ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದೆ ತಮ್ಮ ರಕ್ತವನ್ನು ದಾನ ಮಾಡಿ, ರೋಗಿಗಳ ಜೀವ ಉಳಿಸುವ ರಕ್ತದಾನಿಗಳು ದಾನಗಳಲ್ಲೇ ಅತಿ ಶ್ರೇಷ್ಠ ದಾನಿಗಳಾಗಿದ್ದಾರೆ ಎಂದು ತಾಪಂ ಮಾಜಿ ಅದ್ಯಕ್ಷ ವಿನಯಕುಮಾರ ದೇಸಾಯಿ ಹೇಳಿದರು. 

ತಲ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಕ್ತದಾನಿಗಳ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಒಬ್ಬರು ರಕ್ತದಾನ ಮಾಡಿದ್ದಲ್ಲಿ 3ಜನರ ಪ್ರಾಣ ಉಳಿಯುತ್ತದೆ. ಎಲ್ಲರೂ ರಕ್ತದಾನ ಮಾಡಿದರೆ ತುರ್ತು ಸಂದರ್ಭ ಆ ರಕ್ತವು ಪ್ರಯೋಜನವಾಗಲಿದೆ ಎಂದರು. ವೈದ್ಯಾಧಿಕಾರಿ ಪ್ರಮೋದ ಸಿಂದಗಿ ಮಾತನಾಡಿ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಹಾಗಾಗಿ ಆರೋಗ್ಯವಂತ ಯುವ ಸಮೂಹ ರಕ್ತದಾನಕ್ಕೆ ಮುಂದಾಗಬೇಕು ಹಾಗೂ ಪ್ರಾಣಾಪಾಯದಲ್ಲಿ ಇರುವವರ ಜೀವ ಉಳಿಸುವ ಕಾರ್ಯ ಮಾಡಬೇಕು ಎಂದರು. 

ಗ್ರಾಪಂ ಅಧ್ಯಕ್ಷ ಬಸವರಾಜ ಕಡಬಿ, ಡಾ. ಮಲ್ಲಮ್ಮ ನೇಸರಗಿ, ಸದಸ್ಯ ಪಾತಿಮಾ ಕುದರಿ, ಪ್ರದಾನ ಗುರು ಡಿ.ಡಿ.ಭೋವಿ, ನಿವೃತ್ತ ಪ್ರದಾನ ಗುರು ಎ.ವಿ.ಇಂಗಳೆ, ಆರ.ಬಿ.ಅಣ್ಣಿಗೇರಿ, ಎಸ್‌.ಎಸ್‌.ಉಪ್ಪಿನ, ಹನಮಂತ ಪಚ್ಚಿನ್ನವರ, ನೀಲವ್ವ ಹೋಳಿ, ನಿರ್ಮಾಲ ಭಜಂತ್ರಿ, ಶೈಲಾ ಜೋಲಾಪೂರಿ, ಆರತಿ ಹೋಳ್ಳಿಕೇರಿ, ಎಸ್‌.ಬಿ. ಬೆಂಡಿಗೇರಿ, ಮಹಾವೀರ ಜೋಡಟ್ಟಿ, ಶಂಕರ ಲಮಾಣಿ ಇದ್ದರು. 


ಸುದ್ದಿ ಓದಿ