ರಾಣೆಬೆನ್ನೂರ

ಲೋಕಕಲ್ಯಾಣಾರ್ಥ ಉಜ್ಜಯನಿಂದ ತಂದ ನಂದಾ ದೀಪಕ್ಕೆ ಚಾಲನೆ

ಲೋಕಕಲ್ಯಾಣಾರ್ಥ ಉಜ್ಜಯನಿಂದ ತಂದ ನಂದಾ ದೀಪಕ್ಕೆ ಚಾಲನೆ

ರಾಣೇಬೆನ್ನೂರು 12: ರಾಷ್ಟ್ರದ ಎರಡನೇ ಹಾಗೂ ರಾಜ್ಯದ ಮೊದಲನೇ ಬಯಲು ಆಲಯವಾಗಿರುವ ನಗರದ ಹೊರವಲಯದ  ಶನೇಶ್ಚರ ಮಂದಿರದಲ್ಲಿ ಲೋಕ ಕಲ್ಯಾಣಾರ್ಥ ಮತ್ತು ದೇಶದ ಅಭಿವೃದ್ಧಿಗಾಗಿ ಎರಡು ಮಹಾ ಮಂಡಲಗಳ 384 ದಿನಗಳ ಕಾಲ ಜರುಗಲಿರುವ ಮಹಾನ ಮೃತ್ಯುಂಜಯ ಜಪಯಾಗ, ದುರ್ಗಾಜಪ, ಹವನ ಮತ್ತು ದೀಪದುರ್ಗಾ ನಮಸ್ಕಾರ ಪೂಜೆಯ ಧಾರ್ಮಿಕ ಕಾರ್ಯಕ್ರಮಗಳಿಗೆ ಉಜ್ಜಯಿನಿಯಿಂದ ತರಲಾದ ನಂದಾ ದೀಪದಿಂದ ಸ್ಥಳೀಯ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿ ಗಳು ಜ್ಯೋತಿ ಬೆಳಗುವ ಮೂಲಕ ಬುಧವಾರದಂದು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. 

ಪಂಚಪೀಠಗಳಲ್ಲಿ ಒಂದಾಗಿರುವ ಉಜ್ಜಯನಿ ಮಹಾಸಂಸ್ಥಾನಪೀಠದ ಲಿಂಗೈಕ್ಯ ಜಗದ್ಗುರು ಸಿದ್ದಲಿಂಗ ಶಿವಾ ಚಾರ್ಯ ಮಹಾಸ್ವಾಮಿಗಳವರ ಗದ್ದಿಗೆ ಯಿಂದ ನಂದಾ ದೀಪವನ್ನು ಶನೇಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಈ ಜ್ಯೋತಿ ಯನ್ನು ತರಲಾಯಿತು. ಆ ನಂತರ ಕುದರಿ ಹಾಳ ಗ್ರಾಮದ ಬಳಿ ಇರುವ ತುಂಗಭದ್ರಾ ನದಿಯಿಂದ ಗಂಗಾಪೂಜೆ ನೆರವೇರಿಸಿ ಪಾದ ಯಾತ್ರೆಯ ಮೂಲಕ ಹಾಗೂ ಪೂರ್ಣ ಕುಂಭೋತ್ಸವದೊಂದಿಗೆ ಮಂದಿರಕ್ಕೆ ತರಲಾ ಯಿತು. ನಂತರ ಸಂಜೆ ಯಾಗಮಂಟಪ ಪ್ರವೇಶಿಸಿ ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಹೆ ರಸಾ ಯನ ಪೂಜೆಗಳು ನಡೆದವು. 

ಹೇರೂರಿನ ಗುಬ್ಬಿ ನಂಜುಂಡೇಶ್ವರ ಮಹಾಸ್ವಾಮಿಗಳು, ಎ.ಪಿಎಂ.ಸಿ. ಅಧ್ಯಕ್ಷ ಬಸವರಾಜ ಸವಣೂರ, ಶಿವಯೋಗಿ ರೊಡ್ಡನವರ, ಧರ್ಮರಾಜ ಕುಪ್ಪೇಲೂರ, ಮಂಜಣ್ಣ, ಪುನೀತ ಸೇರಿ ದಂತೆ ಶಾಸ್ತ್ರಿಗಳು, ಭಕ್ತರು ಕಾರ್ಯಕ್ರವ ುದಲ್ಲಿ ಪಾಲ್ಗೊಂಡಿದ್ದರು.  ಗುರುವಾರ ದಂದು  ಬ್ರಾಹ್ಮೀ ಮಹೋತ್ಸವದಲ್ಲಿ ಮಹಾಮೃತ್ಯುಂಜಯ ಮತ್ತು ದುರ್ಗಾಮೂರ್ತಿ ಪ್ರತಿಷ್ಠಾಪನೆ ಹಾಗೂ ಆಗಮ ಶಾಸ್ತ್ರಾನುಸಾರ ಪೂಜೆಗಳು ಜರುಗಲಿವೆ. ಸಂಜೆ 6ಕ್ಕೆ ಸಿದ್ದಾಂತ ಶಿಕಾಮಣಿ ಪ್ರವಚನ ಉದ್ಘಾಟನೆಗೊಳ್ಳುವುದು.

ಸುದ್ದಿ ಓದಿ