ಕಾರವಾರ

ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ಧಿಷ್ಟಾವಧಿ ಧರಣಿ 3 ನೇ ದಿನಕ್ಕೆ

ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ಧಿಷ್ಟಾವಧಿ ಧರಣಿ 3 ನೇ ದಿನಕ್ಕೆ

ಮೆಡಿಕಲ್ ಕಾಲೇಜು ಅಧೀನ ಆಸ್ಪತ್ರೆಯಲ್ಲಿ ಗೀತಾ ಬಾನಾವಳಿ ಸಾವು ಪ್ರಕರಣ  :

ಕಾರವಾರ 16: ನಗರದ ಸರ್ವೋದಯ ನಗರದ ಬಾಣಂತಿ ನಿವಾಸಿ ಗೀತಾ ಶಿವನಾಥ ಬಾನಾವಳಿ ಅವರು ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಸಾವನ್ನಪ್ಪಿದ್ದು, ಸಾವಿಗೆ ನಿಖರ ಕಾರಣ ತಿಳಿಸಿ ಎಂದು ಗೀತಾ ಸಾವಿನ ತನಿಖಾ ಹೋರಾಟ ಸಮಿತಿ  ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ಆರಂಭಿಸಿದ್ದು, 2ನೇ ದಿನ ಮುಗಿಸಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಧರಣಿ ನಿರತರು ಮಂಗಳವಾರ  ಸ್ಥಳದಲ್ಲೇ ಅಡುಗೆ ಮಾಡಿ ಮಧ್ಯಾಹ್ನದ ಊಟ ಮಾಡಿ ಸಂಜೆತನಕ ಧರಣಿ ಮುಂದುವರಿಸಿದರು. 

ಗೀತಾ  ಸಾವಿನ ತನಿಖಾ ಸಮಿತಿ ವರದಿ ಬಹಿರಂಗಪಡಿಸಿ, ಪೋಸ್ಟಮಾರ್ಟಂ ರಿಪೋರ್ಟ ಬಹಿರಂಗ ಮಾಡಿ ಎಂದು ಗೀತಾ ಸಾವಿಗೆ ನ್ಯಾಯ ಕೇಳುವವರು ಆಗ್ರಹಿಸುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡುತ್ತಿದ್ದೇವೆ. ಹೋರಾಟವನ್ನು ಹಗುರವಾಗಿ ಪರಿಗಣಿಸಬೇಡಿ. ತಪ್ಪಿತಸ್ಥ ವೈದ್ಯ ಅಧಿಕಾರಿಗಳನ್ನು  ರಕ್ಷಿಸಬೇಡಿ. ಆಡಳಿತ ಮಾಡುವವರು ಜನರ ಪರ ಇರಬೇಕು. ಇಲ್ಲದೇ ಹೋದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಧರಣಿ ನಿರತರು ಎಚ್ಚರಿಸಿದ್ದಾರೆ. 

ಗೀತಾ ಬಾನಾವಳಿ ಸಾವಿಗೆ ಕಾರಣ ಎಂದು ಶಂಕಿಸಲಾದ ವೈದ್ಯರ ಅಮಾನತ್ ಆಗಿಲ್ಲ. ವರ್ಗಾವಣೆ ಆಗಿಲ್ಲ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು. ಪೋಸ್ಟ ಮಾರ್ಟ ರಿಪೋರ್ಟ ಬಹಿರಂಗ ಮಾಡಿಲ್ಲ ಎಂಬುದು ಧರಣಿ ನಿರತರು ಇಂದು ಸಹ ಅಪರೇಶನ್ ಥೇಟರ್‍ನಲ್ಲಿದ್ದ ವೈದ್ಯರಿಗೆ ಧಿಕ್ಕಾರ ಕೂಗಿದರು.  ಇದೇ ತಿಂಗಳ ಆರಂಭದಲ್ಲಿ ಜಿಲ್ಲಾಡಳಿತಕ್ಕೆ ಸಾವಿಗೆ ನಿಖರ ಕಾರಣ ತಿಳಿಸಿ ಎಂದು ಗೀತಾ ಸಾವಿಗೆ ನ್ಯಾಯ ಕೇಳುವ ಹೋರಾಟಗಾರರು ಆಗ್ರಹಿಸಿ ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಸರ್ಕಾರಕ್ಕಿಂತ ವೈದ್ಯರು ಪ್ರಬಲ ಎಂಬುದು ಈ ಪ್ರಕರಣದಲ್ಲಿ ಸಾಬೀತಾಗಿದೆ. ಯಾವ ಕಾರಣಕ್ಕೂ ಜನಪ್ರತಿನಿಧಿಗಳು, ವೈದ್ಯಕೀಯ ಮಂತ್ರಿಗಳು , ಜಿಲ್ಲಾ ಉಸ್ತುವಾರಿ ಸಚಿವರು ಮೌನ ವಹಿಸಿದ್ದಾರೆಂದು ಅರ್ಥವಾಗುತ್ತಿಲ್ಲ.  ಆದರೆ ಹೋರಾಟದ ಬಿಸಿ ತಟ್ಟಿಸಿದೇ ಬಿಡುವುದಿಲ್ಲ ಎಂದು ಹೋರಾಟದ ನೇತೃತ್ವವಹಿಸಿದರು ಹೇಳುತ್ತಿದ್ದಾರೆ. ಗೀತಾ ಸಾವಿನ ಪ್ರಕರಣ ಮಾತ್ರ ದಿನದಿಂದ ದಿನಕ್ಕೆ ಕಠೋರ ಹಾದಿ ಹಿಡಿದಿದೆ. 

ನ್ಯಾಯ ಸಿಗುವವರೆಗೆ ಧರಣಿ ನಡೆಯಲಿದೆ. ಸರ್ಕಾರ, ಮೆಡಿಕಲ್ ಕಾಲೇಜು ನಮ್ಮ ಹೋರಾಟಕ್ಕೆ ಮಣಿಯದಿದ್ದರೆ, ಕಾರವಾರ ಬಂದ್ ಮಾಡಿ ಬೃಹತ್ ಪ್ರಮಾಣದಲ್ಲಿ ಹೋರಾಟ ರೂಪಿಸುತ್ತೇವೆ.

 -ರಾಜು ತಾಂಡೇಲ. ಮೀನುಗಾರರ ಧುರೀಣ. ಉತ್ತರ ಕನ್ನಡ .

ಸುದ್ದಿ ಓದಿ