ಶಿಗ್ಗಾವ್

ಆಂಗ್ಲ ಮಾಧ್ಯಮ ಒಂದನೆಯ ತರಗತಿ ಕೊಠಡಿ ಉದ್ಘಾಟನೆ

ಆಂಗ್ಲ ಮಾಧ್ಯಮ ಒಂದನೆಯ ತರಗತಿ ಕೊಠಡಿ ಉದ್ಘಾಟನೆ

ಶಿಗ್ಗಾವಿ 08: ಇಂದಿನ ಮಕ್ಕಳು ಎಲ್ಲ ತರಹದ ಶಿಕ್ಷಣ ವ್ಯವಸ್ಥೆಯಿದ್ದರೂ ಸಹಿತ ಅದರ ಸದುಪಯೋಗ ಪಡೆದುಕೊಳ್ಳದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಉರ್ದು ಶಾಲೆಯ ಎಸ್‌.ಡಿ.ಎಂ.ಸಿ ಅಧ್ಯಕ್ಷ ಅತ್ತಾವುಲ್ಲಾ ಖಾಜೇಖಾನವರ ಹೇಳಿದರು. 

ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಹೆಣ್ಣು ಮಕ್ಕಳ ಶಾಲೆ ಆಂಗ್ಲ ಮಾಧ್ಯಮ 1 ನೇ ತರಗತಿ ಕೊಠಡಿ ಉದ್ಘಾಟನೆ ಮಾಡಿ ಮಾತನಾಡಿದ ಅವರು ಸರಕಾರವು ಮಕ್ಕಳ ವಿದ್ಯಾಬ್ಯಾಸಕ್ಕೋಸ್ಕರ ಕನ್ನಡ ಹಾಗೂ ಉರ್ದು ಶಾಲೆಯಲ್ಲಿ ಆಂಗ್ಲ ಮಾಧ್ಯಮದ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಸಾಕ್ಷಿಯಾಗಿದೆ ಆದ್ದರಿಂದ ಸರಕಾರದ ಈ ಕ್ರಮಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಹಾಗೂ ಸರಕಾರದ ಕಾರ್ಯವೈಖರಿಯನ್ನು ಶ್ಲಾಘಿಸುತ್ತೇನೆ ಎಂದರು.  

ಡೈಟ್ ಉಪನ್ಯಾಸಕ ಝಡ್‌.ಎಮ್‌.ಖಾಜಿ ಮಾತನಾಡಿ ನಾವು ಶಾಲೆಹೆ ಹೋಗುವಾಗ ಕಷ್ಟ ಪಟ್ಟಿದ್ದು ನಮಗೆ ಗೊತ್ತು ಆ ಕಷ್ಟವನ್ನು ನೀವು ಅನುಭವಿಸುತ್ತಿಲ್ಲ ಇಂದು ಖಾಸಗಿ ಶಾಲೆಗಳಲ್ಲಿ ದೊರೆಯದ ವ್ಯವಸ್ಥೆ ಕನ್ನಡ ಹಾಗೂ ಉರ್ದು ಮಾಧ್ಯಮ ಶಾಲೆಗಳಲ್ಲಿ ದೊರೆಯುತ್ತಿದೆ ಆದ್ದರಿಂದ ಅದರ ಸದುಪಯೋಗ ಪಡಿಸಿಕೊಂಡು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿರಿ ಎಂದರು. 

ಅಂಬುಜಾ ವ್ಯವಸ್ಥಾಪಕ ಸುರೇಶ ಕೊರವರ ಮಾತನಾಡಿ ನನಗೆ ಬಾಲ್ಯದ ನೆನಪಾಗುತ್ತಿದೆ ನಾವು ಸಹಿತ ಶಿಕ್ಷಣಕ್ಕಾಗಿ ಅನೇಕ ತರಹದ ಕಷ್ಟಗಳನ್ನು ಅನುಭವಿಸಿದ್ದು ಇಂದು ಸರಕಾರಿ ಶಾಲೆಗಳು ಇತರ ಎಲ್ಲ ಶಾಲೆಗಳಿಗಿಂತ ಮಾದರಿಯಾಗಿವೆ ಆದ್ದರಿಂದ ಸರಕಾರಿ ಶಾಲೆಗಳನ್ನು ಕಡೇಗಣಿಸದೇ ಅದರ ಸದುಪಯೋಗ ಪಡೆದುಕೊಂಡು ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿಮ್ಮ ಶಾಲೆಗೆ ಕೀರ್ತಿ ತನ್ನಿರಿ ಎಂದರು. 

ಈ ಸಂದರ್ಭದಲ್ಲಿ ಮುಖ್ಯೋಪಾದ್ಯಾಯ ಅಬ್ದುಲಖಾದರ ನೀರಮನಿ, ಅಬ್ದುಲಖಾದರ ಕಡೇಮನಿ, ಜಬೀವುಲ್ಲಾ ಗಂಗನಕೋಟಿ, ನವೀದಇಕ್ಬಾಲ್ ಬಂಕಾಪುರ, ಶಾಲಾ ಶಿಕ್ಷಣ ಸಮಿತಿ ಉಪಾಧ್ಯಕ್ಷೆ ನಗೀನಾ ನೀರಮನಿ, ಸದಸ್ಯರಾದ ಅಬ್ದುಲಖಾದರ ಆದಂಬಾಯಿ, ಅಬ್ದುಲರಶೀದ ಚಾಕಾಪೂರ, ದಾವಲಸಾಬ ಹಾವೇರಿ, ಮೌಲಾಲಿ ದಖನಿ, ಶಬನಮ್ಮ ಮಿರ್ಜಾ, ರೇಶ್ಮಾ ಮಿರ್ಜಾ, ಶಮಶಾದ ಚಾಕಾಪೂರ, ಪಠಾಣ ಹಾಗೂ ಸೌದಾಗರ ಸೇರಿದಂತೆ ಶಿಕ್ಷಕರು ಹಾಗೂ ಪಾಲಕರು ಮತ್ತು ಮಕ್ಕಳು ಉಪಸ್ಥಿತರಿದ್ದರು. 

ಶಿಕ್ಷಕಿ ಶಿಗುಪ್ತಾ ಸೌದಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರಾರ್ಥನೆ ಆಯಿಷಾ ಸರಬಾಜಿ, ಭಕ್ತಿಗೀತೆ ನಾಜೀಯಾ ಮತ್ತು ಸಲ್ಮಾ, ಶಿಕ್ಷಕಿ ಎಸ್‌.ಬಿ.ಕೊಂಚನೂರ ಸ್ವಾಗತಿಸಿದರು, ಶಿಕ್ಷಕಿ ಶೀರೀನಬಾನು ಜಾಗೀರದಾರ ವಂದಿಸಿದರು. ಶಿಕ್ಷಕಿ ಪಾತೀಮಾ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ