ಹೂವಿನ ಹಡಗಲಿ

ಚೆನ್ನಮ್ಮ ಅವರ ಆದರ್ಶಗಳ ಅನುಕರಣೆ ಅತ್ಯಗತ್ಯ: ರೆಡ್ಡಿ

ಚೆನ್ನಮ್ಮ ಅವರ ಆದರ್ಶಗಳ ಅನುಕರಣೆ ಅತ್ಯಗತ್ಯ: ರೆಡ್ಡಿ

ಹೂವಿನಹಡಗಲಿ 28: ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ಅಪ್ರತಿಮ ಹೋರಾಟ ನಡೆಸಿದ ಚೆನ್ನಮ್ಮ ಅವರ ಆದರ್ಶಗಳ ಅನುಕರಣೆ ಅತ್ಯಗತ್ಯ ಎಂದು ಚಿತ್ರಕಲಾ ಶಿಕ್ಷಕ ದ್ವಾರಕೀಶ್ ರೆಡ್ಡಿ ಎಸ್ ಹೇಳಿದರು. 

ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಶನಿವಾರಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ವೀರಮಹಿಳೆ ಅವರ ದಿಟ್ಟತನ ಶೌರ್ಯ ದೇಶಭಕ್ತಿ  ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.ಶಿಕ್ಷಕಿ ವೈ ಜಯಮ್ಮ ಪುಟ್ಟ ರಾಜ್ಯದ ರಕ್ಷಣೆಗೆ ಬ್ರಿಟೀಷರ ವಿರುದ್ಧ ಹೋರಾಟಕ್ಕಾಗಿ ಸಂಗೊಳ್ಳಿ ರಾಯಣ್ಣಮೊದಲಾದ ಯುವಕರನ್ನು ಬೆಳಸಿದ ಕೀರ್ತಿ ಇವರದು ಎಂದರು. 

ಮುಖ್ಯ ಗುರುಗಳಾದ ಸುರೇಶ ಅಂಗಡಿ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ  ಸ್ವಾತಂತ್ರ್ಯ ಹೋರಾಟಗಾರ ಸ್ಮರಣೆ ಇಂದಿನ ದಿನಗಳಲ್ಲಿ ಮಹತ್ವದಾಗಿದೆ ಎಂದು ತಿಳಿಸಿದರು.ಶಿಕ್ಷಕರಾದ ಸ್ವಾಮಿನಾಥ ರಾಮಸ್ವಾಮಿ, ಕೆ ಬಸವರಾಜ, ಪ್ರತಿಮಾ ಎನ್, ಗೀತಾ ಪುರಾಣಿಮಠದ ಲಂಬಾಣಿ ಗಿಡ್ಡಾನಾಯ್ಕ್‌, ಲಾವಣ್ಯ ಜಿ,ರೇಖಾ ಅಕ್ಷರ ದಾಸೋಹದ ಗಂಗಮ್ಮ ಹಮ್ಳಿಗಿಲಲಿತಾ ಕೆ, ಸಕ್ರವ್ಶ ನಂದಿಹಳ್ಳಿ,ಪಿಂಜಾರ ಮಹಾಬುನ್ನಿ ಹಾಜರಿದ್ದರು.ಜಯಂತಿ ಆಚರಣೆ ಸವಿನೆನಪಿಗಾಗಿ ಶಾಲಾ ಆವರಣದಲ್ಲಿ ಸಸಿ ನೆಡುಲಿಯಿತು. 


ಸುದ್ದಿ ಓದಿ