ಸರ್ಕಾರ ತನ್ನ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸುತ್ತಾ ಬಂದಿದೆ: ಗೃಹ ಸಚಿವ ಬೊಮ್ಮಾಯಿ
ಶಿಗ್ಗಾವಿ 03: ಕೊರೋನಾದಂತಹ ಸಂಧಿಗ್ದ ಪರಿಸ್ಥಿತಿಯಲ್ಲಿಯೂ ಬಿಜೆಪಿ ಸರ್ಕಾರದಲ್ಲಿ ಅಭಿವೃದ್ದಿ ಕಾರ್ಯಗಳು ಹರಿಯುವ ನೀರಿನಂತೆ ನಿರಂತರ ನಡೆಯುತ್ತಲೇ ಇರುತ್ತವೆ, ಈ ಸಮಯದಲ್ಲಿ ನಮ್ಮ ಸರ್ಕಾರ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾ ಬಂದಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ವಾಲ್ಮೀಕಿ ಸಭಾಭವನದಲ್ಲಿ ಕಾರ್ಮಿಕ ಇಲಾಖೆಯ ಆಶ್ರಯದಲ್ಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಕೊರೊನಾ 2 ನೇ ಅಲೆಯಲ್ಲಿ ಹಗಲಿರುಳು ತಮ್ಮ ಪ್ರಾಣದ ಹಂಗನ್ನು ತೊರೆದು ಸಾವಿರಾರು ಪ್ರಾಣಗಳನ್ನು ಕಾಪಾಡಿದ ಆರೋಗ್ಯ ಇಲಾಖೆಯ ವೈದ್ಯರು, ಸಹಾಯಕರು, ನೌಕರರು, ಕಂದಾಯ ಇಲಾಖೆಯ ಅಧಿಕಾರಿಗಳು ತಾಲೂಕಿನ ಎಲ್ಲ ಅಧಿಕಾರಿ ವರ್ಗದವರು ಆಶಾ ಕಾರ್ಯಕರ್ತೆಯರು ಎಲ್ಲರ ಸೇವೆ ಶ್ಲಾಘನಿಯ ಅವರ ಶ್ರಮದಿಂದ ಇಂದು ನಾವು 2ನೇ ಅಲೆಯನ್ನು ಎದುರಿಸಿದ್ದೆವೆ ಅವರೆಲ್ಲರೂ ಧನ್ಯವಾದಗಳನ್ನು ಅರ್ಿಸುತ್ತೆನೆ ಮತ್ತು ರಾಷ್ಟ್ರೀಯ ವೈದರ ದಿನಾಚಾರಣೆಯ ಹಾಗೂ ತಾಲೂಕಿನ ಎಲ್ಲ ವರದಿಗಾರರಿಗೆ ಪತ್ರಿಕಾ ದಿನಾಚರಣೆಯ ಶುಭಾಷಯಗಳನ್ನು ತಿಳಿಸುತ್ತೆನೆ ಎಂದರು.
ಕೊರೊನಾ 3 ನೇ ಅಲೆ ಎದುರಿಸಲು ಪ್ರತಿ ತಾಲೂಕಿನಲ್ಲಿ ಮಕ್ಕಳಿಗೆ 10 ಬೆಡ್ಗಳ ವ್ಯವಸ್ಥೆಯನ್ನು ಕಲ್ಪಿಸಲು ಸೂಚಿಸಲಾಗಿದೆ, ಮಕ್ಕಳ ಆರೋಗ್ಯ ಶಿಬಿರಗಳನ್ನು ಮಾಡಲಾಗುತ್ತಿದೆ, ಮಕ್ಕಳ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆಗೆ ಸೂಚಿಸಲಾಗಿಗೆ ಮತ್ತು ಮಕ್ಕಳಲ್ಲಿ ಅಪೌಷ್ಠಿಕತೆ ಕಂಡು ಬರುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ಸೂಚಿಸಲಾಗಿದೆ, ಮಕ್ಕಳ ರಕ್ಷಣೆಗೆ ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡಿದೆ.
ಕೃಷಿ ಮತ್ತು ತೋಟಗಾರಿಗೆ ಬೆಳೆಗಳನ್ನು ಸಂಗ್ರಹಿಸಲು ಕ್ಷೇತ್ರದಲ್ಲಿ ಕೊಲ್ಡ್ ಸ್ಟೋರೆಜ್ ಸ್ಥಾಪಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವದು, ಬಂಕಾಪೂರ ಆಸ್ಪತ್ರೆಗೆ ಬೆಡ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವದು, ಮುಂಜಾಗೃತವಾಗಿ ಹೆಚ್ಚು ಆಕ್ಸಿಜನ್ ಕಾನ್ಸಂಟ್ರೆಟರಗಳನ್ನು ಸಂಗ್ರಹಿಸಲಾಗುವದು ತಾಲೂಕಿನಲ್ಲಿ ಸಿಟಿ ಸ್ಕಾನಿಂಗ ಸೆಂಟರ್ ಮಾಡಲು ತಿರ್ಮಾನಿಸಲಾಗಿದೆ, ಕ್ಷೇತ್ರದ ಜನತೆಯ ಆಶೀರ್ವಾದದಿಂದ ಇಂದು ಉನ್ನತ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು, ಕ್ಷೇತ್ರದ ಘನತೆಯನ್ನು ಎತ್ತಿ ಹಿಡಿದು ಚ್ಯುತಿ ಬರದ ಹಾಗೆ ಕಾರ್ಯ ನಿರ್ವಹಣೆ ಮಾಡತ್ತೆನೆ, ಅವಶ್ಯಕತೆ ಬಿದ್ದರೆ ನನ್ನ ಮನೆಯನ್ನು ಇನ್ನೂ ವ್ಯವಸ್ಥಿತವಾಗಿ ಕೋವಿಡ್ ಸೆಂಟರ ಮಾಡುತ್ತೆನೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ವರ್ಗದವರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು, ವೈದ್ಯರ ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ ತಾಲೂಕಿನ ವೈದ್ಯರನ್ನು ಹಾಗೂ ಎಲ್ಲ ವರದಿಗಾರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸದರ್ಭದಲ್ಲಿ ಸವಣೂರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ, ಭಾಜಪ ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ತಾಪಂ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಮುಂದಿನಮನಿ, ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಉಪಾದ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಮುಖಂಡರಾದ ವಿರೇಶ ಆಜೂರ, ನಿಂಗಣ್ಣ ಹರಿಜನ ಸೇರಿದಂತೆ ತಾಲೂಕಿನ ಅಧಿಕಾರಿಗಳು ಜನಪ್ರತಿನಿಧಿಗಳು, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಇದ್ದರು.