ನಾಲ್ಕನೇ ದಿನದ ದೇವಿ ಪ್ರವಚನ ಕಾರ್ಯಕ್ರಮ
ಶಿಗ್ಗಾವಿ 19: ವನಹಳ್ಳಿ ನನ್ನ ಜನ್ಮಭೂಮಿ, ಶಿಗ್ಗಾವಿ ಕರ್ಮಭೂಮಿ. ತಾಲೂಕಿನವನಹಳ್ಳಿ ಗ್ರಾಮದಮಣ್ಣಿನ ಶಕ್ತಿ ಇಡಿ ನಾಡಿಗೆ ಪರಿಚಯಿಸಿತು ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.
ಶಿಗ್ಗಾವಿತಾಲೂಕಿನ ವನಹಳ್ಳಿ ಗ್ರಾಮದಲ್ಲಿ ನವರಾತ್ರಿ ನಿಮಿತ್ತ ಆಯೋಜಿಸಿದ ನಾಲ್ಕನೇ ದಿನದ ಶ್ರೀ ದೇವಿಯ ಪ್ರವಚನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಹೆತ್ತವರ ಆಶೀರ್ವಾದಿಂದ ಒಬ್ಬ ಸಾಮಾನ್ಯ ಶಿಕ್ಷಕನ ಮಗನಾಗಿ ಎರಡು ಬಾರಿ ಶಾಸಕನಾಗಿ, ಒಂದು ಬಾರಿ ಲೋಕಸಭಾ ಸದಸ್ಯನಾಗುವ ಮೂಲಕ ಹಳ್ಳಿಯಿಂದ ದಿಲ್ಲಿಯವರೆಗೆ ಸಾಗಿ ಸಂಸತ್ತು ಪ್ರವೇಶಿಸಿದ ಸೌಭಾಗ್ಯ ನನ್ನದಾಗಿದೆಎಂದು ಸ್ವಗ್ರಾಮದ ಅಭಿಮಾನ ಬಗೆಗಿನ ಭಾವನಾತ್ಮಕ ಸಂಬಂಧವನ್ನು ಸ್ಮರಿಸಿದರು.
ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿದ್ದ ಹತ್ತಿಮತ್ತೂರು ವಿರಕ್ತಮಠದ ನಿಜಗುಣ ಶಿವಯೋಗಿ ಮಹಾಸ್ವಾಮಿಗಳವರ ದರ್ಶನ ಆಶೀರ್ವಾದ ಪಡೆದರು. ಹಾವೇರಿ ತಾಲೂಕಿನ ಬೂದಗಟ್ಟಿಯ ಶ್ರೀ ಶಾಂತಯ್ಯಶಾಸ್ತ್ರೀಗಳು ಹಿರೇಮಠ ಅವರು ದೇವಿಯ ಪ್ರವಚನ ನೀಡಿದರು. ಕಲಾವಿದ ವೀರೇಶ ಸಂಗೀತ ಸುಧೆಗೆ ಬಸವರಾಜ ಬಾಗೇವಾಡಿ ತಬಲಾ ಸಾಥ್ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ಗಂಗಾಧರ ಕಲ್ಮಠ, ರುದ್ರಣ್ಣ ಮೂಲಿಮನಿ, ಯಲ್ಲಪ್ಪ ಸಾತಪ್ಪನವರ, ಸಹದೇವಪ್ಪ ಮೂಲಿಮನಿ, ಸುಭಾಷ್ಕತ್ತಿ, ಫಕ್ಕೀರಯ್ಯ ಹರ್ತಿಮಠ, ಉಜ್ಜನಗೌಡ ಪಾಟೀಲ, ಷಣ್ಮುಖಪ್ಪ ಹೂವಪ್ಪನವರ, ರವಿ ಬಡಿಗೇರ, ಗದಿಗಯ್ಯ ಹಿರೇಮಠ, ಶಂಭಣ್ಣ ದೊಡ್ಡಮನಿ, ರುದ್ರ್ಪ ಮೆಳ್ಳಳ್ಳಿ, ನಾಗಪ್ಪ ಅಣ್ಣಿಗೇರಿ, ಶಿವನಗೌಡ ಪಾಟೀಲ, ಫಕೀರ್ಪ ದೊಡ್ಡಮನಿ, ಶಿವಪುತ್ರ್ಪ ಜಕ್ಕಣ್ಣವರ ಹಾಗೂ ಗ್ರಾಮದಗುರು ಹಿರಿಯರು ಇದ್ದರು.