ವೈಷ್ಣೋದೇವಿಯಲ್ಲಿ ಋತುವಿನ ಮೊದಲ ಹಿಮಪಾತ
ಜಮ್ಮು, ಡಿ 28: ವಿಶ್ವಪ್ರಸಿದ್ಧ ಶ್ರೀ ಮಾತಾ
ವೈಷ್ಣೋ ದೇವಿಯ ಗುಹಾಂತರ ದೇವಾಲಯವಿರುವ ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯ ಕತ್ರಾ ಪಟ್ಟಣದ ತ್ರಿಕೂಟಾಚಲದಲ್ಲಿ,
ಋತುವಿನ ಮೊದಲ ಹಿಮಪಾತವಾಗಿದ್ದು, ಭಕ್ತಾದಿಗಳು ಹಿಮಪಾತದ ದೃಶ್ಯವನ್ನು ವೀಕ್ಷಿಸಿ ಆನಂದಗೊಂಡಿದ್ದಾರೆ.
ತ್ರಿಕೂಟಾ ಬೆಟ್ಟದಲ್ಲಿ ಹಿಮಪಾತವು ಭಾನುವಾರ ರಾತ್ರಿ ಪ್ರಾರಂಭವಾಗಿ ಸುಮಾರು ಅರ್ಧ ಘಂಟೆಯವರೆಗೆ ಮುಂದುವರೆಯಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹಿಮಪಾತದಿಂದ ಭಕ್ತರ ಯಾತ್ರೆಯಲ್ಲಿ ಯಾವುದೇ ಅಡೆತಡೆಗಳು ಕಂಡುಬಂದಿಲ್ಲ, "ಕೇಂದ್ರಾಡಳಿತ ಪ್ರದೇಶದಲ್ಲಿನ ಅನೇಕ ಎತ್ತರದ ಪ್ರದೇಶಗಳು ಹಿಮಪಾತಕ್ಕೆ ಸಾಕ್ಷಿಯಾದವು, ಆದರೆ ಜಮ್ಮು ನಗರ ಸೇರಿದಂತೆ ಬಯಲು ಪ್ರದೇಶಗಳಲ್ಲಿ ಭಾರಿ ಮೋಡ ಕವಿದು ಮಧ್ಯಂತರ ಪ್ರಮಾಣದ ಮಳೆಯಾಗುತ್ತಿದ್ದವು ಎಂದಿದ್ದಾರೆ.
ವೈಷ್ಣೋದೇವಿ ದೇವಾಲಯಕ್ಕೆ ತೀರ್ಥಯಾತ್ರೆ ಮುಂದುವರಿದು, ಭಕ್ತರು ಸಹ ಹಿಮಪಾತವನ್ನು ಆನಂದಿಸುತ್ತಿದ್ದರು. ಏತನ್ಮಧ್ಯೆ, ಹವಾಮಾನ ವೈಪರೀತ್ಯ ಮತ್ತು ಮಂಜಿನಿಂದಾಗಿ ಸ್ಥಗಿತಗೊಂಡಿದ್ದ ಹೆಲಿಕಾಪ್ಟರ್ ಸೇವೆಗಳು ಸೋಮವಾರ ಪುನಾರಂಭಗೊಂಡಿವೆ.