ಕಲಾವಿದ ವಿರುಪಾಕ್ಷಪ್ಪ ಕೊರವರ ಪ್ರಥಮ ಪರಿನಿರ್ವಾಣ ಕಾರ್ಯಕ್ರಮ
ರಾಣಿಬೆನ್ನೂರ 22: ಕಲೆ, ಸಾಹಿತ್ಯ, ಸಂಗೀತದಿಂದ ವ್ಯಕ್ತಿತ್ವ ನಿರ್ಮಾಣದ ಜೊತೆಗೆ ಸಂಸ್ಕೃತಿಯ ಪರಂಪರೆ ಉಳಿಸಿ ಬೆಳೆಸಲು ಸಾಧ್ಯವಾಗಲಿದೆ. ಬಡ ಕುಟುಂಬದಲ್ಲಿ ಜನಿಸಿ ಅನೇಕ ಕಷ್ಟ -ನಷ್ಟಗಳನ್ನು ಎದುರಿಸಿ ಸಮಸ್ಯೆಗಳ ಮಧ್ಯೆಯೇ ಕಲೆಯನ್ನು ಅಳವಡಿಸಿಕೊಂಡು ಕಲಾ ಕ್ಷೇತ್ರಕ್ಕೆ ತನ್ನದೆಯಾದ ಕೊಡುಗೆಯನ್ನು ನೀಡುವುದರ ಮೂಲಕ ಕಲಾವಿದ ದಿ.ವಿರುಪಾಕ್ಷಪ್ಪ ಕೊರವರ ಅವರು ಇಂದು ನಮ್ಮ ಮಧ್ಯೆ ಭೌತಿಕವಾಗಿ ಇರದೆ ಇದ್ದರೂ ಅವರು ತಮ್ಮ ಕಲೆಯ ಮೂಲಕ ಸದಾ ಸ್ಮರಣೀಯರಾಗಿದ್ದಾರೆ ಎಂದು ಹಲಗೇರಿ ಹಾಲಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಶಾರದಾ ಪಾಟೀಲ ಹೇಳಿದರು.
ದಿವಂಗತರ ಪತ್ನಿ ಗೌರವ್ವ ಕೊರವರ ಅವರು ಪ್ರಥಮ ವರ್ಷದ ಪರಿನಿರ್ವಾಣ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಕವಿಗೋಷ್ಠಿ ಉದ್ಘಾಟಿಸಿ ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಸೃಜನಶೀಲಾ ಕನ್ನಡ ಸಾಹಿತ್ಯ ಬಳಗದ ಜಿಲ್ಲಾಧ್ಯಕ್ಷ ಸಂತೋಷ ಬಿದರಗಡ್ಡಿ ಈ ನೆಲದಲ್ಲಿ ಇಂದು ಪಾಟೀಲ ಪುಟ್ಟಪ್ಪನವರ ಸ್ಮಾರಕ ನಿರ್ಮಾಣವಾಗದೆ ಇರುವುದು ಅತ್ಯಂತ ವಿಷಾಧಕರ ಸಂಗತಿಯಾಗಿದೆ. ಕೂಡಲೇ ಸಂಸ್ಕೃತಿ ಇಲಾಖೆ ಕಾಮಗಾರಿ ಕೈಗೆತ್ತಿಕೊಂಡು ಗೌರವ ನೀಡಬೇಕು. ಮತ್ತು ನಾಡಿನ ಜನರ ಆಸೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷೆ ಎ.ಬಿ.ರತ್ನಮ್ಮ, ದೇವರಾಜ ಹುಣಸಿಕಟ್ಟಿ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಹೆಚ್.ಮೇಟಿ, ಶಿಕ್ಷಕರಾದ ಎನ್.ಎಂ.ಬಣಕಾರ, ಪ್ರಕಾಶ್ ಹೊಸಳ್ಳಿ, ಸಿ.ಎಫ್.ಕಡೇಮನಿ, ಕೆ.ವಿ.ಕಾಟೇಣ್ಣನವರ, ಬಸವರಾಜ ಪಾಟೀಲ, ಹೆಚ್.ಎಂ.ಸುತಾರ, ಶರೀಫ್ ಬಿಳಿಎಲೆ, ಬಸವರಾಜಪ್ಪ ಹಲಗೇರಿ, ರವಿ ಗೋಣೆಪ್ಪನವರ, ನಂಧೀಶ್ ಲಮಾಣಿ, ಲಕ್ಷ್ಮೀ ಅಡಕಿ, ಪ್ರಭಾಕರ ಶಿಗ್ಲಿ, ದ್ರಾಕ್ಷಾಯಣಿ ಉದಗಟ್ಟಿ, ರೇಷ್ಮಾ ಪಿ.ಕೆ, ರಮೇಶ ಬಡಿಗೇರ, ಜಗದೀಶ ಉಲ್ಯಾಣ, ತುಕ್ಕಪ್ಪನವರ ಸೇರಿದಂತೆ ಮತ್ತಿತರ ಗಣ್ಯರು, ಸಾಹಿತಿಗಳು, ಕಲಾವಿದರು ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ ಸ್ಮರಣಾರ್ಥವಾಗಿ ಅವರ ಪುತ್ರ ಮಂಜುನಾಥ ಕೊರವರ, ರಾಮಕೃಷ್ಣ ಕೊರವರ ಆಯೋಜಿಸಿದ್ದ ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ 30ಕ್ಕೂ ಹೆಚ್ಚು ಹಿರಿಯ ಕಿರಿಯ ಕವಿಗಳು ಪಾಲ್ಗೊಂಡಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇವರ ಹೊಸಪೇಟೆಯ ಶಹನಾಯಿ ಕಲಾವಿದ ಮಂಜುನಾಥ ಭಜಂತ್ರಿ ಸಂಗಡಿಗರ ಶಹನಾಯಿ ವಾದನವು ಗಮನ ಸೆಳೆಯಿತು. ಮಂಜುನಾಥ್ ಕೊರವರ, ಪ್ರಾರ್ಥಿಸಿದರು. ಸಾಹಿತಿ ಶಿವಾನಂದ ಬುಳ್ಳಮ್ಮನವರ ಸ್ವಾಗತಿಸಿದರು. ಶಿಕ್ಷಕಿ ಇಂದಿರಾ ಕೊಪ್ಪದ ನಿರೂಪಿಸಿ, ಶಿಕ್ಷಕ ಡಿ.ಕೆ.ಆಂಜನೇಯ ವಂದಿಸಿದರು.