ತಾಳಿಕೋಟಿ

ನ್ಯಾಯ ಸಿಗುವ ತನಕ ಹೋರಾಟ ನಿಲ್ಲದು

ನ್ಯಾಯ ಸಿಗುವ ತನಕ ಹೋರಾಟ ನಿಲ್ಲದು


ತಾಳಿಕೋಟೆ11: ಪಟ್ಟಣದಿಂದ ಹಡಗಿನಾಳ ರಸ್ತೆಯಲ್ಲಿರುವ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಿಲಾಗುತ್ತಿರುವ ಮೇಲ್ಸೇತುವೆಯ ರಸ್ತೆ ಕಾಮಗಾರಿ ಅಂಕುಡೊಂಕಾಗಿಸದೇ ನೇರವಾಗಿ ನಿರ್ಮಿಸಬೇಕು. ಪುರಸಭೆಯಲ್ಲಿ ನಡೆದ  ಅವ್ಯವಹಾರಗಳ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಾಳಿಕೋಟೆ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹವನ್ನು ಆರಂಭಿಸಲಾಯಿತು. 

ತಾಳಿಕೋಟೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ, ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೇಟ್ಟಿ ನೇತೃತ್ವದಲ್ಲಿ ಪಟ್ಟಣದ ಮಹಾರಾಣಾಪ್ರತಾಪಸಿಂಹ ವೃತ್ತದದಲ್ಲಿ ಧರಣಿ ಸತ್ಯಾಗ್ರಹವನ್ನು ಆರಂಭಿಸಲಾಯಿತು. 

ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ ವೃತ್ತದಲ್ಲಿ ಅಂಬೇಡ್ಕರ ಮೂರ್ತಿಗೆ ಮಾಲಾರೆ​‍್ಣ ನಡೆಸಿ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಮಹಾತ್ಮಾ ಗಾಂಧಿ, ಡಾ.ಬಿ.ಆರ್‌.ಆರ್‌.ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧರಣಿಯನ್ನು ಆರಂಭಿಸಲಾಯಿತು.  

ಧರಣಿಯನ್ನುದ್ದೇಸಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಶೇಟ್ಟಿ, ನಡೆಸುತ್ತಿರುವ ಸರಣಿ ಸತ್ಯಾಗ್ರಹವು ಯಾವ ಬಾಹ್ಯಶಕ್ತಿಗಳ ಒತ್ತಡಕ್ಕೂ ಮಣಿಯದೇ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಯುತ್ತದೆ. ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ, ಆದರೆ ಕೇವಲ ನ್ಯಾಯಕ್ಕಾಗಿ ಹಾಗೂ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಕೂಡಿದೆ ಇದರಲ್ಲಿ ರಾಜಕೀಯ ಮಾಡುವ ಅಗತ್ಯ ನಮಗಿಲ್ಲ.  ಕಳೆದ ಎಂಟು ತಿಂಗಳಿಂದ ನಮ್ಮ ಹೋರಾಟ ನಡೆದಿದೆ. ಜಿಲ್ಲಾಧಿಕಾರಿಗಳಿಂದ ಹಿಡಿದು ಮುಖ್ಯಮಂತ್ರಿಗಳವರೆಗೆ ಈ ವಿಷಯವನ್ನು ಮುಟ್ಟಿಸಿದ್ದೇವೆ. ಸೂಕ್ತ ಸ್ಪಂದನೆ ಸಿಗದ್ದರಿಂದ ಬೇಸತ್ತು ಸಾರ್ವಜನಿಕವಾಗಿ ಹೋರಾಟಕ್ಕೆ ಇಳಿಯಬೇಕಾಯಿತು. ಈ ಹೋರಾಟಕ್ಕೆ ಪಟ್ಟಣದ ಹಿತ ಬಯಸುವೆಲ್ಲರೂ ಸಹಕರಿಸಬೇಕು. ನನ್ನ ಹೋರಾಟ ಪುರಸಭೆ ಸದಸ್ಯನಾಗಿ ಮಾತ್ರವಲ್ಲ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿಯೂ ಇದೆ. ಸೇತುವೆ ರಸ್ತೆ ಸರ್ಕಾರ ಹೊರಡಿಸಿದ ಡಿಪಿಆರ್‌ದಂತೆ ನಿರ್ಮಾಣವಾಗಲಿ. ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದರು. 

ಹೋರಾಟ ಸಮಿತಿ ಉಪಾಧ್ಯಕ್ಷ ಸುಭಾಸ ಗೌಡಗೇರಿ ಮಾತನಾಡಿ, ನಾವು ಎಲ್ಲ ದಾಖಲೆಗಳೊಂದಿಗೆ ಈ ಹೋರಾಟಕ್ಕೆ ಇಳಿದಿದ್ದೇವೆ. ನಮ್ಮ ನ್ಯಾಯೋಚಿತ ಹೋರಾಟವನ್ನು ಬಲಪ್ರಯೋಗಿಸಿ ಹತ್ತಿಕ್ಕಲು ಪ್ರಯತ್ನಿಸಿದರೆ ಅವರೆಂದೂ ಈ ಕಾರ್ಯದಲ್ಲಿ ಯಶಸ್ವಿಯಾಗರು ನಮ್ಮ ಹೋರಾಟ ಪಟ್ಟಣದ ಒಳಿತಿಗಾಗಿಯೇ ಹೊರತು ಸ್ವಾರ್ಥಕ್ಕಲ್ಲ ಎಂದರು. 

ವೇದಿಕೆಯಲ್ಲಿ ಹೋರಾಟ ಸಮಿತಿ ಕಾರ್ಯದರ್ಶಿ ರವಿ ಕಟ್ಟಿಮನಿ, ಖಜಾಂಚಿ ಸುರೇಶ ಹಜೇರಿ, ಮೂಕಿಹಾಳ ಗ್ರಾಮ ಪಂಚಾಯತಿ ಸದಸ್ಯ ಜಾವೇದ ಪಟೇಲ್, ಅಮರಸಿಂಗ ಹಜೇರಿ ನದೀಂ ಕಡು, ಆಶೀಫ ವಠಾರ, ನಬಿ ಲಾಹೋರಿ, ಸುಭಾಸ ಪತ್ತಾರ, ಆನಂದ ವಡಗೇರಿ, ಬಿ.ಎಂ.ಸಾಲವಾಡಗಿ, ಶರಣಪ್ಪ ಕುಂಬಾರ  ಸೇರಿದಂತೆ ಇತರರಿದ್ದರು.  

ಕೆ.ಆರ್‌.ಎಸ್‌. ಪಕ್ಷದಿಂದ ಬೆಂಬಲ :- 

ಕೆಆರ್‌.ಎಸ್‌. ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಯಡಹಳ್ಳಿ, ತಾಳಿಕೋಟಿ ತಾಲ್ಲೂಕು ಅಧ್ಯಕ್ಷ ಲಕ್ಷ-್ಮಣ ಕಲಾಲ, ಚಡಚಣ ತಾಲೂಕು ಅಧ್ಯಕ್ಷ ರಾಕೇಶ ಇಂಗಳಗಿ, ಸಿಂದಗಿ ತಾಲೂಕು  ಅಧ್ಯಕ್ಷ ಪುಂಡಲೀಕ ಬಿರಾದಾರ, ಪ್ರವೀಣ್ ಕನಸೇ ಹೋರಾಟವನ್ನು ಬೆಂಬಲಿಸಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ