ಅಭಿವೃದ್ಧಿ ಪಥದತ್ತ ದೇವರ ಹಿಪ್ಪರಗಿ ಮತಕ್ಷೇತ್ರ : ನಳ ಜೋಡಣೆ ಕಾಮಗಾರಿಗೆ ಮುಖಂಡ ಸಾಹೇಬಗೌಡ ಪಾಟೀಲ ಭೂಮಿ ಪೂಜೆ
ತಾಳಿಕೋಟಿ: ದೇ. ಹಿಪ್ಪರಗಿ ಮತಕ್ಷೇತ್ರದಲ್ಲಿ ಬರುವ ಎಲ್ಲ ಗ್ರಾಮಗಳ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶ ಶಾಸಕ ಸೋಮನಗೌಡ ಪಾಟೀಲ ಅವರದ್ದಾಗಿದೆ ಇದಕ್ಕಾಗಿ ಜಲ್ ಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನದಲ್ಲಿ ತರಲಾಗುತ್ತಿದೆ ಎಂದು ಶಾಸಕ ಸಹೋದರ ಸಾಹೇಬಗೌಡ ಪಾಟೀಲ ತಿಳಿಸಿದರು.
ತಾಲೂಕಿನ ಸಾಸನೂರ, ಚಬನೂರ ಹಾಗೂ ಶರಣಸೋಮನಾಳ ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ 2021-22ನೇ ಸಾಲಿನ ಜಲ್ ಜೀವನ್ ಮಿಷನ್ ಯೊಜನೆಯಡಿಯಲ್ಲಿ ಸಾಸನೂರ ಗ್ರಾಮದಲ್ಲಿ ರೂ. 181.00ಲಕ್ಷ, ಚಬನೂರದಲ್ಲಿ ರೂ. 78.91ಲಕ್ಷ ಹಾಗೂ ಶರಣಸೋಮನಾಳದಲ್ಲಿ ರೂ. 71.00ಲಕ್ಷ ವೆಚ್ಚದಲ್ಲಿ ನಳ ಜೋಡಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬೇಸಿಗೆ ಕಾಲ ಆರಂಭವಾಗಿದ್ದು ಯಾವ ಕಾರಣಕ್ಕು ಕ್ಷೇತ್ರದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗಬಾರದೆಂಬುದು ಶಾಸಕರ ಕಳಕಳಿಯಾಗಿದೆ, ಈ ಕಾರಣಕ್ಕಾಗಿ ಕ್ಷೇತ್ರದ ಎಲ್ಲ ಹಳ್ಳಿಗಳಿಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದರ ಜೋತೆಗೆ ಅನೇಕ ಯೋಜನೆಗಳನ್ನು ಕ್ಷೇತ್ರದಲ್ಲಿ ಕೈಗೊಳ್ಳಲಾಗಿದೆ. ಈ ಎಲ್ಲ ಕಾರ್ಯಗಳಿಗೆ ಕ್ಷೇತ್ರದ ಜನರ ಸಹಕಾರ ಅವರಿಗೆ ಬೇಕು ಎಂದರು.
ಪರಮ ಪೂಜ್ಯ ಡಾ. ಶಿವಪುತ್ರ ಮಹಾಸ್ವಾಮೀಜಿ ಭೂಮಿ ಪೂಜಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು.
ಮುಖಂಡರಾದ ಆರ್. ಎನ್. ದೇಸಾಯಿ, ಬಸನಗೌಡ ಪಾಟೀಲ್(ಚಬನೂರ), ಸಾಸನೂರ ಗ್ರಾ. ಪಂ. ಅಧ್ಯಕ್ಷ ರವಿಗೌಡ ಹಯ್ಯಾಳ, ಎಚ್. ಎಸ್. ಬಿರಾದಾರ, ಶಾಂತಗೌಡ ಯರಲಡ್ಡಿ, ಬಿ. ಎಸ್. ಚಿಂಚೋಳಿ, ಬಿ. ಟಿ. ವಜ್ಜಲ್, ಗುತ್ತಿಗೆದಾರ ಸೋಮನಗೌಡ ಪಾಟೀಲ, ಸಂಗನಗೌಡ ಧನ್ನೂರ, ಶಂಕರ ರಾಠೋಡ, ಶೇಖರಗೌಡ ಪಾಟೀಲ, ಬಾಪೂಗೌಡ ಬಿರದಾರ, ಎಸ್. ಎಂ. ಜಲಪೂರ, ಅಮಿಥಗೌಡ ಪಾಟೀಲ, ಮಂಜುನಾಥ ಕವಡಿಮಟ್ಟಿ, ಮಲ್ಲು ತಳವಾರ, ಮಂಜುನಾಥಗೌಡ ವಡವಡಗಿ, ಎಸ್. ಬಿ. ಪಾಟೀಲ ಎಇಇ. ಎಚ್. ಎಸ್. ಮುದ್ದೇಬಿಹಾಳ ಎಇ, ಗ್ರಾ ಪಂ. ಸದಸ್ಯ ಅಪ್ಪುಗೌಡ ಏವೂರ, ಗೀರಿಶ ಜಲಪೂರ, ಶಿವನಗೌಡ ದೊಡಮನಿ, ಮಲ್ಲನಗೌಡ ಹರನಾಳ, ಶಿವನಗೌಡ ಗುಡಗುಂಟಿ, ಇದ್ದರು.