ದೇಶ ಮೊದಲು ಎಂಬ ಭಾವನೆ ಯುವಕರಲ್ಲಿ ಮೂಡಿಸಬೇಕು: ನಡಹಳ್ಳಿ
ತಾಳಿಕೋಟೆ 29; ದೇಶ ಮೊದಲು ನಂತರ ನಾವೆಲ್ಲಾ ಎಂಬ ಭಾವನೆ ಯುವಕರಲ್ಲಿ ಮೂಡಿದಾಗ ಬಲಿಷ್ಠ ಭಾರತ ನಿರ್ಮಾಣವಾಗಲಿದೆ. ಯುವ ಜನರಲ್ಲಿ ದೇಶಾಭಿಮಾನದ ಕಿಚ್ಚು ಬೆಳೆಸಲು ಯುವಜನರ ಸಂಕಲ್ಪ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುದ್ದೇಬಿಹಾಳ ಶಾಸಕ, ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಅವರು ಪಟ್ಟಣದ ಸಂಗಮೇಶ್ವರ, ಎಸ್.ಕೆ ಪದವಿ ಪೂರ್ವ, ಪದವಿ ಕಾಲೇಜು ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಲ್ಲಿ ಯುವ ಜನರ ಸಂಕಲ್ಪ ನಡಿಗೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನಮ್ಮ ದೇಶಕ್ಕೆ ಸ್ವಾತಂತ್ರ-್ಯ ಸುಮ್ಮನೆ ಸಿಕ್ಕಿಲ್ಲ. ಹೋರಾಟಗಾರರು ಇಡಿ ಜೀವವನ್ನೇ ತ್ಯಾಗ ಬಲಿದಾನದಿಂದ ಸ್ವಾತಂತ್ರ-್ಯ ಸಿಕ್ಕಿದೆ. ದೇಶದಲ್ಲಿಯೇ ಪ್ರಥಮವಾಗಿ ಉತ್ತರ ಕರ್ನಾಟಕ ಭಾಗದಲ್ಲಿಯೇ ಮೊದಲು ಸ್ವಾತಂತ್ರ-್ಯ ಕಿಚ್ಚು ಹಚ್ಚಿತು. ಅಂತಹ ಸ್ವಾತಂತ್ರ್ಯದ ಬಗೆಗ ತಿಳಿದುಕೊಳ್ಳುವದು ನಮ್ಮೇಲ್ಲರ ಕರ್ತವ್ಯವಾಗಿದೆ. ದೇಶದ ವಿಷಯದಲ್ಲಿ ಎಲ್ಲ ತ್ಯಾಗಕ್ಕೂ ಸಿದ್ದರಾಗಬೇಕು. ದೇಶವನ್ನು ರಕ್ಷಣೆ, ಮುನ್ನಡೆಸುವ ಜವಾಬ್ದಾರಿ ಯುವಕರ ಮೇಲಿದೆ. ಯುವಕರೇ ದೇಶದ ಶಕ್ತಿಯಾಗಿದ್ದಾರೆ. 75 ನೇ ಸ್ವಾತಂತ್ರ-್ಯಕ್ಕೆ 75 ಕಿಮಿ ನಡಿಗೆ ನಡೆಯಲಿದೆ. ಯುವಜನರ ಸಂಕಲ್ಪ ನಡಿಗೆಯಲ್ಲಿ ರಾಜಕೀಯ ಭಾಷಣಕ್ಕೆ ಆಸ್ಪದ ಇಲ್ಲಾ. ಇಲ್ಲಿ ದೇಶಕ್ಕಾಗಿ ಮಡಿದ ಮಹಾನ ವ್ಯಕ್ತಿಗಳ ಕಾರ್ಯಕ್ರಮವಾಗಲಿದೆ. ಸಂಕಲ್ಪ ನಡಿಗೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಬಿಳಿ ಸಮವಸ್ತ್ರ, ಮಹಿಳೆಯರಿಗೆ ತಿರಂಗಾ ಒಳಗೊಂಡ ಸಿರೆಯನ್ನು ವಿತರಿಸಲಾಗುವದು. ಒಂದು ವಾರ ಮುಂಚಿತವಾಗಿ ಭಾಗವಹಿಸುವವರಿಗೆ ಸಮವಸ್ತ್ರ ನೀಡಲಾಗುವದು. ಭಾಗವಹಿಸುವವರು ಕಡ್ಡಾಯವಾಗಿ ಆನ್ಲೈನ ನೊಂದಣಿ ಮಾಡಿಕೊಳ್ಳಬೇಕು. ನಡಿಗೆಯಲ್ಲಿ ಶಿಸ್ತು ಮುಖ್ಯವಾಗಿದೆ. ನಡಿಗೆಯಲ್ಲಿ ಪಾಲ್ಗೊಳ್ಳವ ಯುವಕರಿಗೆ ಮಾಜಿ ಸೈನಿಕರಿಂದ ರಾಷ್ಟ್ರ ಧ್ವಜ ಹಿಡಿಯುವ ತರಬೇತಿ ನೀಡಲಾಗುವದು. ಅ.12 ರಂದು ನಡಿಗೆ ತಾಳಿಕೋಟಿ ಆಗಮಿಸಲಿದೆ. ಅಂದು ಪಟ್ಟಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಸಾಂಸ್ಕೃತಿಕ ಕಲಾವಿದರು ಭಾಗವಹಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಶ್ರೀಧರ ಗೋಟೋರ, ಎಸ್.ಎಸ್.ವಿದ್ಯಾ ಸಂಸ್ಥೆಯ ಅದ್ಯಕ್ಷ ಎಚ್.ಎಸ್.ಪಾಟೀಲ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶಾಂತಗೌಡ ಬಿರಾದಾರ, ಮಾಜಿ ಅಧ್ಯಕ್ಷ ಶ್ರೀಪಾಲ ಸಂಗ್ಮೀ, ಪುರಸಭೆ ಸದಸ್ಯ ವಾಸುದೇವ ಹೆಬಸೂರ, ಅಣ್ಣಪ್ಪ ಜಗತಾಪ, ಕಳಕೂಸಾ ರಂಗರೇಜಿ, ಎಸ್.ಕೆ.ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಶಂಕ್ರಗೌಡ ಹಿಪ್ಪರಗಿ, ಕಾಶಿನಾತ ಸಜ್ಜನ, ಎಮ್.ಎಸ್.ಸರೇಟ್ಟಿ, ಅಣ್ಣು ವಾಲಿ, ಪ್ರಾಚಾರ್ಯ ಕೆ.ಕಿಶೋರುಮಾರ ಸೇರಿದಂತೆ ಇತರರು ಇದ್ದರು.