ರಾಣೆಬೆನ್ನೂರ

ಎಲ್ಲಾ ಧರ್ಮಗಳ ಸಾರವು ಒಂದೇಯಾಗಿದೆ: ಆಚಾರ್ಯ ಸೋರಿಶ್ವರಜೀ

ಎಲ್ಲಾ ಧರ್ಮಗಳ ಸಾರವು ಒಂದೇಯಾಗಿದೆ: ಆಚಾರ್ಯ ಸೋರಿಶ್ವರಜೀ

ರಾಣೇಬೆನ್ನೂರು: ಸೆ 3 ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ  ಸಂಸ್ಕಾರ  ಪರಂಪರೆಯಲ್ಲಿ ಎಲ್ಲಾ ಧರ್ಮಗಳ ಸಾರವು ಒಂದೇಯಾಗಿದ್ದು, ಅವುಗಳು ವೇದ ಇತಿಹಾಸ ಕಾಲಗಳಿಂದಲೂ ನಡೆದುಕೊಂಡು ಬಂದಿವೆ. ಎಂದು ಆಚಾರ್ಯ ಮಹೇಂದ್ರ ಸಾಗರ್ ಸೋರೀಶ್ವರಜೀ ಮಹಾರಾಜ್ ಹೇಳಿದರು. ಅವರು ವಾಣಿಜ್ಯ ನಗರದಲ್ಲಿ  ಜೈನ್ ಶ್ವೇತಾಂಬರ ಸಂಘವು ವಾರ್ಷಿಕ ಸಂಪ್ರದಾಯದಂತೆ ಆಯೋಜಿಸಿದ್ದ, ಆರಾಧನಾ ಸಾಧನ ಉಪವಾಸ ಧಾರ್ಮಿಕ ಆಚರನಾ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಭಾರತೀಯ ಪರಂಪರೆಯಲ್ಲಿ ಯಾವುದೇ ಜಾತಿ ಮತ ಭೇದ ಭಾವವಿಲ್ಲಾ, ಅವರವರ  ಧರ್ಮ ಆಚರಣೆಗೆ ಅನುಗುಣವಾಗಿ ಶ್ರಾವಣ ಮಾಸದಲ್ಲಿ ತಿಂಗಳ ಕಾಲ ಆರಾಧನೆ ನಡೆಸುವುದರ ಮೂಲಕ ಧರ್ಮ ಸಂಸ್ಕೃತಿಯನ್ನು ಅಳವಡಿಸಿಕೊಂಡು ಬಂದವರಾಗಿದ್ದಾರೆ ಪ್ರತಿಯೊಬ್ಬರು ಇಂತಹ ಧರ್ಮಚರಣೆಯಲ್ಲಿ ಪಾಲ್ಗೊಂಡು ಪುಣ್ಯ ವಿಶೇಷ ಭಾಗ್ಯಶಾಲಿಗಳಾಗಬೇಕು ಎಂದು ಮಹಾರಾಜರು ಕರೆ ನೀಡಿದರು.           

ನಗರದಲ್ಲಿ ಜೈನ್ ಸಮುದಾಯದ 12 ಮಹಿಳೆಯರು, ಸೇರಿ ಒಟ್ಟು 45 ಕ್ಕೂ ಹೆಚ್ಚು ಯುವಕರು, ಹಿರಿಯರು ಸೇರಿ  ಅತ್ಯಂತ ಶ್ರದ್ದಾ  ಭಕ್ತಿಯಿಂದ ಯಾವುದೇ ಆಹಾರ ಸೇವಿಸದೆ ಸಂಧ್ಯಾ ಕಾಲದಲ್ಲಿ, ಒಂದು ಹೊತ್ತುನೀರನ್ನು ಮಾತ್ರ  ಸೇವಿಸಿ ಉಪವಾಸ ವೃಥವನ್ನು, ಆಚರಿಸಿ ತಿಂಗಳು ಪರಿಪೂರ್ಣಗೊಳಿಸಿದ್ದಾರೆ, ಎಂದು ಜೈನ ಸಂಪ್ರದಾಯದ ಶ್ರೇಷ್ಠ ಆಚರಣೆ ಕುರಿತು ವಿವರಿಸಿ ಮಾತನಾಡಿದರು. ಭಾರತ ಶ್ರೇಷ್ಠ ಭೂಮಿ ಇಂತಹ ಪವಿತ್ರ ಭೂಮಿಯಲ್ಲಿ ಜನ್ಮ ತಾಳುವುದೇ ಪುಣ್ಯ ವಿಶೇಷವಾಗಿದೆ. ಧರ್ಮದ ಅನುಯಾಯಿಗಳಾಗಿ, ಭಾರತದ ಶ್ರೇಷ್ಠತೆಗೆ  ಮತ್ತಷ್ಟು ಕೀರ್ತಿಗೆ ನಾವೆಲ್ಲರೂ ಒಂದಾಗಿ ಒಗ್ಗಟ್ಟಾಗಿ ಭಾವೈಕ್ಯತೆಯೊಂದಿಗೆ ಬದುಕಿ ಬಾಳಿ ಜನ್ಮ ಶ್ರೇಷ್ಠತೆಯ ಪುಣ್ಯವನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು.      

ಜೈನ ಮುನಿಗಳಾದ, ಅರಹಂ ಪದ್ಮಸಾಗರ ವಿಜಯಜೀ,   ಮೇರು ಪದ್ಮಸಾಗರ  ವಿಜಯಜೀ ಸೇರಿದಂತೆ ಮತ್ತಿತರೆ ಮುನಿಗಳು, ತಮ್ಮ ದಿವ್ಯ ಸಂದೇಶಾಮೃತ ನುಡಿಯಾಡಿದರು.ಜೈನ್ ಶ್ವೇತಾಂಬರ ಸಂಘದ ಅಧ್ಯಕ್ಷ , ಪ್ರಕಾಶ್ ಜೈನ್, ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರಾದ,ಹೆಚ್‌.ಆರ್‌.ಜೈನ್, ಅಶೋಕ್ ಜೈನ್, ಬಾಬುಲಾಲ್ ಜೈನ್, ಪ್ರೀತಂ ಜೈನ್,ರಾಕೇಶ್ ಕುಮಾರ್, ಚಂದುಲಾಲ್ ಜೈನ್,ಮಹೇಶ್ ಕುಮಾರ್, ಮನಿಲಾಲ್ ಜೈನ್, ಚೇತನ್ ಕುಮಾರ್, ರೋಷನ್, ರಾಜೇಶ್ ಜೈನ್, ರಾಕೇಶ್, ನೀತೀಶ್, ರಿತೇಶ್  ಜೈನ್, ಅಮಿತ್ ಚಂದ್, ಸೇರಿದಂತೆ ಮತ್ತಿತರ ಗಣ್ಯರು, ಮುಖಂಡರು, ಉಪಸ್ಥಿತರಿದ್ದರು.  

ಜೈನ ಧರ್ಮಶಾಲಾ ಸಭಾಂಗಣದಿಂದ ಹೊರಟ ಭವ್ಯ ಅಲಂಕೃತ ರಥ ಯಾತ್ರೆಯ ಮೆರವಣಿಗೆಯೋ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಂತರ ಮಧ್ಯಾಹ್ನ ಧರ್ಮ ಜಾಗೃತಿ ಸಭಾ ವೇದಿಕೆಗೆ ಸಾಂಗತ್ಯಗೊಂಡಿತು. ಅಂದು ಕಾರ್ಯಕ್ರಮದ ನಿಮಿತ್ತ ಸಮುದಾಯದ ತಮ್ಮ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದಗೂಳಿಸಿದ್ದರು. ಸಾರ್ವಜನಿಕವಾಗಿ ಹತ್ತಾರು ಸಾವಿರ ನಾಗರಿಕರಿಗೆ ಮಹಾಪ್ರಸಾದ ವಿತರಿಸಲಾಯಿತು. 


ಸುದ್ದಿ ಓದಿ