ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ
ಬೈಲಹೊಂಗಲ 01: ನ್ಯಾಯವಾದಿಗಳ ಸಂಘಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎಸ್.ಬಿ.ಆನಿಗೋಳ, ಉಪಾಧ್ಯಕ್ಷರಾಗಿ ಮಂಜುನಾಥ ಸೋಮನ್ನವರ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ ಬಾಂವಿ, ಸಹ ಕಾರ್ಯದರ್ಶಿಯಾಗಿ ಎಂ.ಎಂ. ಅಲ್ಲಯ್ಯನವರಮಠ ಚುನಾಯಿತರಾದರು.
ನ್ಯಾಯವಾದಿಗಳ ಸಂಘದ ಚುನಾವಣೆಯ ಇತಿಹಾಸದಲ್ಲೆ ಮೊದಲ ಬಾರಿಗೆ ತೀವ್ರ ಪೈಪೋಟಿ ನಡೆದು ಪ್ರತಿಷ್ಠೆಯ ಕಣವಾಗಿ ಪರಿಣಮಿಸಿ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್.ಬಿ.ಆನಿಗೋಳ 128 ಮತಗಳನ್ನು ಗಳಿಸಿ ಚುನಾಯಿತರಾದರೆ ಶ್ರೀಧರ ಲೋಕೂರ 75, ಎಂ.ಎಂ.ಅಬ್ಬಾಯಿ 60 ಮತಗಳನ್ನು ಪಡೆದು ಪರಾಭವಗೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಜುನಾಥ ಸೋಮನ್ನವರ 145 ಮತ ಪಡೆದು ಜಯಶಾಲಿಯಾದರೆ ಪ್ರತಿಸ್ಪರ್ಧಿ ವಿ.ಜಿ. ಕಟದಾಳ 116 ಮತಗಳನ್ನು ಪಡೆದು ಸೊಲುಂಡರು.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಂತೋಷ ಬಾಂವಿ ಹಾಗೂ ಆಯ್.ಎಫ್. ತಡಸಲ ತಲಾ 130 ಸಮಮತ ಪಡೆದ ಹಿನ್ನಲೆಯಲ್ಲಿ ಟಾಸ್ ಮೂಲಕ ಆಯ್ಕೆ ಮಾಡಿದಾಗ ಬಾಂವಿ ಅವರಿಗೆ ವಿಜಯದ ಮಾಲೆ ಒಲಿಯಿತು.
ಸಹ ಕಾರ್ಯಾದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಂ.ಎಂ. ಅಲ್ಲಯ್ಯನವರಮಠ 137 ಮತ ಪಡೆದು ಚುನಾಯಿತರಾದರೆ ಪ್ರತಿಸ್ಪರ್ಧಿ ಎ.ಜಿ. ಕರಬರನ್ನವರ 122 ಮತ ಪಡೆದು ಸೊಲುಂಡರು.
ವಿಜಯಶಾಲಿಯಾದ ಅಭ್ಯರ್ಥಿಗಳು ಪರಸ್ಪರ ಸಿಹಿ ಹಂಚಿ ಸಂಬ್ರಮಿಸಿದರು. ಚುನಾವಣಾಧಿಕಾರಿಯಾಗಿ ಡಿ.ಎಸ್. ಹೊಗರ್ತಿ ಸಹಾಯಕ ಚುನಾವಣಾಧಿಕಾರಿಗಳಾಗಿ ದೀಪಕ ಸಂಗೊಳ್ಳಿ, ರಮೇಶ ಪತ್ತಾರ ಕಾರ್ಯನಿರ್ವಹಿಸಿದರು.