ಆಧುನಿಕ ಭರಾಟೆಯಲ್ಲಿ ಮಾನವೀಯ ಮೌಲ್ಯಗಳ ಕುಸಿತ
ಆಧುನಿಕ ಭರಾಟೆಯಲ್ಲಿ ಮಾನವೀಯ ಮೌಲ್ಯಗಳ ಕುಸಿತ
ಲೋಕದರ್ಶನ ವರದಿ
ಹೂವಿನ ಹಡಗಲಿ 09: ಜಾಲತಾಣಗಳ ಭರಾಟೆಯಲ್ಲಿ ಪ್ರಸ್ತುತ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ ಎಂದು ಕವಿ ಉಪನ್ಯಾಸಕ ಶಂಕರ್ ಬೆಟಗೇರಿ ಅಭಿಮತ ವ್ಯಕ್ತಪಡಿಸಿದರು.ತಾಲೂಕಿನ ಪುರ ಗ್ರಾಮದಲ್ಲಿ ಶನಿವಾರ ಸೀಗಿ ಹುಣ್ಣಿಮೆ ಅಂಗವಾಗಿ 135 ನೇ ಮಾಸಿಕ ಧರ್ಮ ಸಭೆಯಲ್ಲಿ ಧರ್ಮೋಪನ್ಯಾಸ ನೀಡಿ ಅವರು ಮಾತನಾಡಿದರು.ಸಂಸ್ಕಾರ ನಡೆ ನುಡಿ ಆಚಾರ ವಿಚಾರ ಸತ್ಯ ನ್ಯಾಯ ನೀತಿ ಬದುಕುವ ರೀತಿಯ ಅರಿವು ಮೂಡಿಸುವಲ್ಲಿ ಬಹುತೇಕ ಮಠ ಮಾನ್ಯಗಳ ಕೊಡುಗೆ ಅನನ್ಯ ಸೇವೆ ಸಲ್ಲಿಸುತ್ತಿವೆ ಎಂದರು. ಸಾನಿಧ್ಯ ವಹಿಸಿದ್ದ ಅಭಿನವ ಸಿದ್ದವೀರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಾಚನ ನೀಡಿದರು.ಪತ್ರಕರ್ತ ಬಿಚ್ಚುಗತ್ತಿ ಖಾಜಾ ಹುಸೇನ್ ಮಾತನಾಡಿದರು. ಸಾಹಿತಿ ಶಾಂತಮೂರ್ತಿ ಕುಲಕರ್ಣಿ. ಬೇಡ ಜಂಗಮ ತಾಲೂಕು ಅದ್ಯಕ್ಷ ಪಿಕೆಎಂ.ವಿಶ್ವನಂದಸ್ವಾಮಿ, ನಿವೃತ್ತ ಮುಖ್ಯ ಗುರು ಎಂ ಪಿ ಎಂ ಕೊಟ್ರಯ್ಯ , ಎಸ್ ಸುಧಾಕರ್, ಕರಿಶೆಟ್ಪಿ ಬಸವರಾಜ, ಗಡ್ಡಿ ಗುಡ್ಡಪ್ಪ ಇದ್ದರು.ಗ್ರಾಮದೇವತಾ ಭಜನಾ ಸಂಘದ ವತಿಯಿಂದ ಸಂಗೀತ ಕಾರ್ಯಕ್ರಮ ಜರುಗಿತು.ಗೌರೀಶ ಅಂಗಡಿ, ಪ್ರಭು ಸೊಪ್ಪಿನ, ಡಿ ಮೇಘರಾಜ ನಾಯ್ಕ ನಿರೂಪಿಸಿದರು.