ಭಕ್ತನ ಮನೆ ಅಂಗಳವೇ ಭೂ ಕೈಲಾಸ : ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ
ಲೋಕದರ್ಶನ ವರದಿ
ವಿಜಯಪುರ 26 : ಬಸವಾದಿ ಶರಣರ ವಾಣಿಯಂತೆ ಭಕ್ತನ ಮನೆ ಅಂಗಳವೇ ಭೂ ಕೈಲಾಸ, ಬಾಗಿಲೇ ವಾರಾಣಸಿ, ಮನೆಯೂ ಶಿವಾಲಯವಾದರೆ, ನುಡಿಯೇ ವೇದ ವಾಕ್ಯ, ಕಾಯಕವೇ ಕೈಲಾಸವೆಂದು ಭಕ್ತನನ್ನು ಕೊಂಡಾಡಿದ್ದಾರೆ ಕಾರಣ ಗುರುಪಡೇಶ ಪಡೆದ ಭಕ್ತ ಸಾಧನೆಯ ಮೂಲಕ ಶಿವನ ಸಾಕ್ಷಾತ್ಕರಿಸಿಕೊಳ್ಳಬಲ್ಲ ಎಂದು ಧರ್ಮಕ್ಷೇತ್ರ ಕೂಡಲಸಂಗಮ ಪಂಚಮ ಸಾಲಿ ಪೀಠದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಅನೇಕ ಸಾಧಕರನ್ನು ಉದಾಹರಿಸಿದರು.
ಸೋಮವಾರ ಸಂಜೆ ಶಿವಗಿರಿ ಹತ್ತಿರ ಸುರೇಶ, ಕಲ್ಲನಗೌಡ, ಪಾಟೀಲ ಅವರ ನಿವಾಸದಲ್ಲಿ ನೂತನ ದಂಪತಿಗಳಾದ ಚಿ.ಸಿದ್ದನಗೌಡ, ಮಲ್ಲಿಕಾರ್ಜುನ, ಬಿರಾದಾರ (ಕುಮಸಗಿ), ಭಾಗ್ಯಲಕ್ಷ್ಮೀ ಸಿದ್ದನಗೌಡ ಬಿರಾದಾರ ಇವರಿಗೆ ಗುರು ಶ್ರೀರಕ್ಷೆ ನೀಡಿ ಆಶೀರ್ವದಿಸಿ ಮಾತನಾಡಿದ ಅವರು ಮಾನವನ ಜೀವನದಲ್ಲಿ ಗುರುವಿನ ಸ್ಥಾನ ಮಾನ ಹಿರಿದಾಗಿದ್ದೂ, ಕಾಯದ ದುಡಿಮೆಯಿಂದ ಬಂದ ಸ್ವಲ್ಪ ಆದಾಯವನ್ನು ಜಂಗಮರಿಗೆ, ಸಮಾಜಕ್ಕೂ ಸಮರ್ಿಸಿ ಪ್ರಸಾದ ಸೇವನೆ ಮಾಡಬೇಕು. ಕಾಯಕ ಮತ್ತು ದಾಸೋಹ ಲಿಂಗಾಯತ ಧರ್ಮ ಜಗತ್ತಿಗೆ ನೀಡಿದ ಬಹುದೊಡ್ಡ ಮಾನವೀಯ ಮೌಲ್ಯಗಳು ಎಂದು ಬಣ್ಣಿಸಿದರು.