ರಾಣೆಬೆನ್ನೂರ

ದೇಶದ ಸಂವಿದಾನ ಮೌಲ್ಯದಿಂದ ಕೊಡಿದೆ: ಮಾಲತೇಶ

ದೇಶದ ಸಂವಿದಾನ ಮೌಲ್ಯದಿಂದ ಕೊಡಿದೆ:  ಮಾಲತೇಶ

ರಾಣೇಬೆನ್ನೂರು 26: ದೇಶದ ಮೌಲ್ಯಯುತವಾತವಾದ ಸಂವಿಧಾನದ ಮಹತ್ವ, ಕಾನೂನುಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವ ಮೂಲಕ ದೇಶದ ಸಂವಿಧಾನಕ್ಕೆ ಗೌರವ ಕೊಡಬೇಕು ಎಂದು ಬಿ.ಎ.ಜೆ.ಎಸ್.ಎಸ್. ಕಾಲೇಜು ಪ್ರಾಧ್ಯಪಕ ಮಾಲತೇಶ ಹೊನ್ನಮ್ಮನವರ ಹೇಳಿದರು.

ಅವರು ಶುಕ್ರವಾರ ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ಸ. ಶಿ. ಸಂ. ಪ.ಪೂ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ  ಪಾಲ್ಗೊಂಡು  ಮಾತನಾಡಿದರು.  ವಿಶ್ವದ ಎಲ್ಲಾ ರಾಷ್ಟ್ರಗಳಿಗಿಂತಲೂ ಭಾರತ  ದೇಶದ ಸಂವಿಧಾನ ಅತ್ಯಂತ ಶ್ರೇಷ್ಟತೆಯಿಂದ ಕೊಡಿದೆ ಎಂದ ಅವರು ಇದನ್ನು ಸೃಷ್ಟಿಸಿದ ಶ್ರೇಯಸ್ಸು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಸಂವಿಧಾನವನ್ನು ಗೌರವಿಸಿ ಅದರಂತೆ ನಡೆದುಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು. 

 ಕಾಲೇಜು ಪ್ರಾಚಾರ್ಯ ಪಿ. ಮುನಿಯಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಯೋಜನಾಧಿಕಾರಿ ಹೆಚ್.ಶಿವಾನಂದ ಅವರು  ಪ್ರತಿಜ್ಞಾ ವಿಧಿ ಭೋಧಿಸಿದರು. 

ವೇದಿಕೆಯಲ್ಲಿ ಉಪನ್ಯಾಸಕರಾದ ಎಂ. ಶಿವಕುಮಾರ, ಶಶಿಕುಮಾರ.ಕೆ ಆರ್.ಪ್ರವೀಣ್‍ಕುಮಾರ. ಜಗದೀಶ್.ಬಿ ಸೇರಿದಂತೆ ಮತ್ತಿತರೆ ಉಪನ್ಯಾಸಕರು ಗಣ್ಯರು ಉಪಸ್ಥಿತರಿದ್ದರು.

ಸುದ್ದಿ ಓದಿ