ಅಕ್ರಮ ಮರಳು ವಶಪಡಿಸಿಕೊಂಡ ಪೊಲೀಸರು
ರಾಣಿಬೆನ್ನೂರ ಫೆ 23: ತಾಲೂಕಿನ ಚಿಕ್ಕಕುರವತ್ತಿ ಗ್ರಾಮದ ತುಂಗಭದ್ರಾ ನದಿ ತಟದಲ್ಲಿ ಆಕ್ರಮವಾಗಿ ಸಂಗ್ರ ಹಣೆ ಮಾಡಿದ್ದ ಮರಳಿನ ಅಡ್ಡೆಯ ಮೇಲೆ ತಹಶೀಲ್ದಾರ ಶಂಕರ ಜಿ.ಎಸ್, ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ದಾಳಿ ಮಾಡಿ 20 ಮೆಟ್ಟಿಕ್ ಟನ್ ಮರಳನ್ನು ವಶಪಡಿಸಿಕೊಂಡಿದ್ದಾರೆ. ವಾಗೀಶ ಮಳೆಮಠ, ಗ್ರಾಮ ಲೆಕ್ಕಾಧಿಕಾರಿ ಚೇತನಕುಮಾರ ನಾಯಕ್ ಹಾಗೂ ಪೊಲೀಸರು ಮತ್ತಿತರರು ದಾಳಿಯಲ್ಲಿ ಇದ್ದರು.