ಇಡೀ ದೇಶಕ್ಕೆ ರಾಮನನ್ನು ತೋರಿಸಿದ ಕೊಡುಗೆ ರಾಜೀವಗಾಂಧಿ ನೇತೃತ್ವದ ಸರ್ಕಾರಕ್ಕೆ ಸಲ್ಲುತ್ತದೆ
ಶಿಗ್ಗಾವಿ 07: ರಾಮಾಯಣವನ್ನು ದೂರದರ್ಶನದ ದಾರಾವಾಹಿಯ ಮೂಲಕ ಪ್ರಸ್ತುತ ಪಡೆಸಿ, ಇಡೀ ದೇಶಕ್ಕೆ ರಾಮನನ್ನು ತೋರಿಸಿದ ಕೊಡುಗೆ ಅಂದಿನ ನಮ್ಮ ರಾಜೀವಗಾಂಧಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ, ಬಿಜೆಪಿಯವರಿಗೆ ಚುನಾವಣೆ ಬಂದಾಗ ಮಾತ್ರ ರಾಮ, ಲಕ್ಷ್ಮಣ, ಸೀತೆ ನೆನಪಾಗುತ್ತಾರೆ ಎಂದು ರಜತ ಉಳಾಗಡ್ಡಿಮಠ ಹೇಳಿದರು.
ಪಟ್ಟಣದ ವರದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಮೂಲೆ ಮೂಲೆಗೂ ಹಾಲನ್ನು ತಲುಪಿಸುವ ವ್ಯವಸ್ತೆಯನ್ನು ಇಂದಿರಾಗಾಂಧಿ ಮಾಡಿ, ಅಪೌಷ್ಠಿಕತೆಯಿಂದ ಬಳಲುತಿದ್ದವರನ್ನು ರಕ್ಷಿಸಿದರು, ಮೊದಲಬಾರಿಗೆ ಏ.ಟಿ.ಎಂ ಅನ್ನು ಸಂವಸತ್ತಿನಲ್ಲಿ ಅಳವಡಿಸುವ ಮೂಲಕ ರಾಜು ಗಾಂಧಿಯವರು ಟೆಕ್ನಾಲಜಿಗೆ ಮುನ್ನುಡಿಯನ್ನು ಬರೆದು, ದೇಶದ ಅಭಿವೃದ್ದಿಗೆ ಕಾಂಗ್ರೇಸ್ ಅಪಾರ ಕೊಡುಗೆಯನ್ನು ನೀಡಿದೆ.
ಕರ್ನಾಟಕದ ಈ ಧಾರವಾಡ ಭಾಗ ಅಭಿವೃದ್ದಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದರೂ, ಮೂರು ಮುಖ್ಯಮಂತ್ರಿಗಳನ್ನು ಕಂಡರೂ, ಏನೂ ಅಭಿವೃದ್ದಿಯನ್ನು ಕಾಣದೆ ಹಿಂದುಳಿದಿದೆ. ಇಲ್ಲಿಯ ಯುವಕರು ಬೇರೆ ಕಡೆಗೆ ದುಡಿಯಲು ಹೋಗುವ ಪರಿಸ್ಥಿತಿ ಇದೆ. ಮಾಡಿದ ಕೆಲಸದಮೇಲೆ ರಾಜಕಾರಣ ಮಾಡಬೇಕು, ಜ್ಯಾತಿಯಮೇಲೆ ರಾಜಕಾರಣ ಮಾಡುವ ಕಾಲ ಮುಗಿದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ಬ್ಲಾಕ್ ಕಾಂಗ್ರೇಸ್ ಕಾರ್ಯಾಧ್ಯಕ್ಷ ಬಿ.ಸಿ.ಪಾಟೀಲ, ಮಾಲತೇಶ ಸಾಲಿಮಠ, ಗುಡ್ಡಪ್ಪಾ ಜಲದಿ, ಗೌಸಖಾನ ಮುನಸಿ, ಎಂ.ಜೆ.ಮುಲ್ಲಾ, ಬಾಬಾರ ಬಾವುಜಿ, ಸುಭಾಸ, ಮುನ್ನಾ ಲಕ್ಷ್ಮೇಶ್ವರ, ಸುಲೇಮಾನ ಖಾಜಿಖಾನ, ಕರೀಂಸಾಭ ಮೊಗಲಲ್ಲಿ, ವಿಜಯ ಪಾಟೀಲ, ಚಂದ್ರು ಕೊಡ್ಲಿವಾಡ, ಗದಿಗೆಪ್ಪಾ ಬಳ್ಳಾರಿ ಸೇರಿದಂತೆ ಮತ್ತಿತರರು ಉಪಸ್ತಿತರಿದ್ದರು.