ಶಾಲೆಯಿಂದ ಹೊರಗುಳಿದ ಮಕ್ಕಳು ಮರುಳಿ ಶಾಲೆಗೆ : ಕ್ಷೇತ್ರಸಮನ್ವಯಾಧಿಕಾರಿ ಅವರ ಕಾರ್ಯ ಶ್ಲಾಘನೀಯ
ಸಿಂದಗಿ: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮಾರ್ಗ ಸೂಚಿಯಂತೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮನೆ-ಮನೆ ಸಮೀಕ್ಷೆ ನಡೆಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ದಾಖಲಿಸುವ ಕಾರ್ಯ ತಾಲೂಕಿನಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳು, ಕ್ಷೇತ್ರಸಮನ್ವಯಾಧಿಕಾರಿಗಳು, ಮುಖ್ಯಗುರುಗಳು ಹಾಗೂ ಶಿಕ್ಷಕರು ಕೈಕೊಂಡಿದ್ದಾರೆ.
6 ರಿಂದ 16 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಶಿಕ್ಷಣವನ್ನು ಕಡ್ಡಾಯವಾಗಿ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಆ ದಿಸೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವುದು, ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯ ಪುಸ್ತಕ, ಬಿಸಿಯೂಟ, ಬೈಸಿಕಲ್, ಶಿಷ್ಯವೇತನ ಹೀಗೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಯೊಬ್ಬರೂ ಶಿಕ್ಷಣ ಪಡೆಯುವಂತಾಗಲು ಶ್ರಮಿಸುತ್ತಿದೆ. ಆದರೂ ನಾನಾ ಕಾರಣಗಳಿಂದಾಗಿ ಶಾಲೆಯಿಂದ ಮಕ್ಕಳು ಹೊರಗುಳಿಯುವುದು ಕಂಡುಬರುತ್ತಿದೆ. ಇಂತಹ ಪ್ರಕರಣವನ್ನು ಗುರ್ತಿಸಲು ಪಟ್ಟಣ ಪ್ರದೇಶಗಳಲ್ಲಿನ ಕೊಳಗೇರಿ, ಸಂಕೀರ್ಣ ಕಟ್ಟಡಗಳು ನಿರ್ಮಾಣಗೊಳ್ಳುತ್ತಿರುವ ಪ್ರದೇಶಗಳು, ಬಸ್ ನಿಲ್ದಾಣಗಳು, ಹೊಟೇಲ್, ಗಣಿಗಾರಿಕೆ ಮತ್ತು ಬಂಡೆಗಾರಿಕೆ ಪ್ರದೇಶಗಳು, ಹೆದ್ದಾರಿ ಅಕ್ಕ ಪಕ್ಕದ ಪ್ರದೇಶಗಳು. ಗ್ರಾಮಾಂತರ ಪ್ರದೇಶಗಳಲ್ಲಿನ ಪ್ರವಾಹ ಪೀಡಿತ, ಬರಪೀಡಿತ ಪ್ರದೇಶಗಳು, ವಲಸೆ ಕುಟುಂಬಗಳಿರುವ ಸ್ಥಳಗಳು, ನೀರಾವರಿ, ತೋಟಗಾರಿಕೆ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ.
ಈ ನಿಟ್ಟಿನಲ್ಲಿ ಕ್ಷೇತ್ರಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಅವರು ಪಂಚಾಯತ್ ವ್ಯಾಪ್ತಿಯಲ್ಲಿ ಶಾಲೆಗೆ ಸೇರದ ಮಕ್ಕಳು, ಗೈರು ಹಾಜರಾಗುತ್ತಿರುವ ಮಕ್ಕಳ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸಲು ತಂಡ ರಚನೆ ಮಾಡಿಕೊಂಡು ಸಂಚರಿಸುತ್ತಿದ್ದಾರೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮಕ್ಕಳಿಗೆ ಹಾಗೂ ಪಾಲಕರಿಗೆ ಮನವರಿಕೆ ಮಾಡಿ ಅವರನ್ನು ಶಾಲೆಗೆ ದಾಖಲಿಸಿ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದಾರೆ.
ಕ್ಷೇತ್ರಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಅವರು ಸ್ವತಃ ತಮ್ಮ ಸಿಬ್ಬಂದಿಯೊಂದಿಗೆ ದೇವರಹಿಪ್ಪರಗಿ ಪಟ್ಟಣದಲ್ಲಿ ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಿಂದ ಕಳೇದ ಎರಡು ವರ್ಷಗಳಿಂದ ಕಲಿಯಲು ಆಗದೇ ಇರುವ ಕಾವೇರಿ ಪ್ರಭು ಡಾಲೆರ ವಿದ್ಯಾರ್ಥಿಯನ್ನು ಗುರುತಿಸಿದ್ದಾರೆ.
ಶಾಲೆಯಂದ ದೂರುಳಿದ ವಿದ್ಯಾರ್ಥಿನಿ ಕಾವೇರಿ ಪ್ರಭು ಡಾಲೆರ ಅವರ ತಂದೆ ಪ್ರಭು ಡಾಲೆರ ಕಡುಬಡತನ. ದುಡಿಯಲಿಕ್ಕೆ ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದರು. ಅವರ ಆರ್ಥಿಕ ಸಂಕಷ್ಟದಿಂದ ಮಗಳ ಕಲಿಕೆಯನ್ನು ನಿಲ್ಲಿಸಿದ್ದಾರೆ. ಈ ವಿಷಯ ತಿಳಿದ ಕ್ಷೇತ್ರಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಅವರು ಡಾಲೆರ ಅವರ ಮನೆಗೆ ಹೋಗಿ ಬೇಟಿ ನೀಡಿದರು. ನಂತರ ಪಾಲಕರಿಗೆ ಮನವರಿಕೆ ಮಾಡಿ ಮನವಲಿಸಲು ಯಶಸ್ವಿಯಾಗಿದ್ದಾರೆ. ಕಾವೇರಿ ಡಾಲೆರ ವಿದ್ಯಾರ್ಥಿಯನ್ನು ದೇವರಹಿಪ್ಪರಗಿ ಪಟ್ಟಣದ ಅನುದಾನಿತ ಸುಭಾಷ್ಚಂದ್ರ ಬೋಸ್ ಪ್ರೌಢಶಾಲೆಯಲ್ಲಿ 8ನೇ ವರ್ಗಕ್ಕೆ ಹೆಸರು ದಾಖಲಿಸಿದ್ದಾರೆ. ಅಲ್ಲದೇ ಅವರು ವಿದ್ಯಾರ್ಥಿನಿಗೆ ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕವನ್ನು ನೀಡಿಸಿದ್ದಾರೆ.
ಮಕ್ಕಳೊಂದಿಗೆ ಆಪ್ತಸಮಾಲೋಚನೆ ನಡೆಸಿ, ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ಕೆಲಸಕ್ಕೆ ಸೇರಿಸುವುದು ಅಥವಾ ಮನೆಯಲ್ಲಿಯೇ ಕುಡ್ರಿಸುವುದು ಅಪರಾಧ. ಕೂಲಿ ಹಣ ಉಳಿತಾಯವಾಗುತ್ತದೆ ಎಂದು ಶಾಲಾಮಕ್ಕಳನ್ನು ಕೆಸಲಕ್ಕೆ ಇಟ್ಟುಕೊಳ್ಳುವುದು ಅಪರಾಧ. ಕುಟುಂಬದ ಆರ್ಥಿಕ ಸಮಸ್ಯೆಯಿದ್ದಲ್ಲಿ ಪಾಲಕರು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಮಾಡಿ ಕೆಲಸಕ್ಕೆ ಸೇರಿಸಬೇಡಿ ಮಕ್ಕಳ ಪಾಲಕರಿಗೆ ಸಲಹೆ ನೀಡಿದ್ದಾರೆ.
ಓಓಎಸ್ಸಿ ನೋಡಲ್ ಎಸ್.ಎಂ. ಪಾಟೀಲ, ಶಾಲೆಯ ಮುಖ್ಯೋಧ್ಯಾಪಕ ಬಸವರಾಜ ತೇಲಿ ಹಾಗೂ ಶಿಕ್ಷರು ಇದ್ದರು.
ಕೋಟ್ :
2021-22 ನೇ ಸಾಲಿನ ದಾಖಲಾತಿ ಪ್ರಾರಂಭವಾಗಿದ್ದು ಜು.1 ರಿಂದಲೇ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಿದ್ದು ಅರ್ಹ ವಯಸ್ಸಿನ ಎಲ್ಲ ಮಕ್ಕಳನ್ನು ಶಾಲೆಗೆ ದಾಖಲಿಸಲು ತಿಳಿಸಲಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅಂಥ ಮಕ್ಕಳ ಹೆಸರುಗಳನ್ನು ದಾಖಲಿಸಿಕೊಳ್ಳ ಬೇಕು. ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗಾಗಿ ಸರಕಾರ ಹಮ್ಮಿಕೊಂಡ ಯೋಜನೆಗಳ ಮಾಹಿತಿ ನೀಡಿ ಸಂಬಂಧಿಸಿದ ಪಾಲಕರಿಗೆ ಮತ್ತು ಮಕ್ಕಳಿಗೆ ಅರಿವು ಮೂಡಿಸುವಲ್ಲಿ ಮುಖ್ಯಗುರುಗಳು ಹಾಗೂ ಶಿಕ್ಷಕರು ಕಾರ್ಯೋನ್ಮುಖರಾಗಬೇಕು.
-ಸಂತೋಷಕುಮಾರ ಬೀಳಗಿ, ಕ್ಷೇತ್ರಸಮನ್ವಯಾಧಿಕಾರಿಗಳು, ಸಿಂದಗಿ.
ಶಾಲೆಯಿಂದ ದೂರುಳಿದ ಮಕ್ಕಳನ್ನು ಗುರುತಿಸಿ ಮರುಳಿ ಶಾಲೆಗೆ ಮರುಳಿ ಕಳುಹಿಸುವ ಕಾರ್ಯದಲ್ಲಿ ಸ್ವತಃ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಕ್ಷೇತ್ರಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಅವರ ಕಾರ್ಯ ಶ್ಲಾಘನೀಯ. ಶಾಲೆಯಿಂದ ದೂರುಳಿದ ಮಕ್ಕಳನ್ನು ಶಾಲೆ ಮರುಳಿ ಕಳುಹಿಸಿದ್ದಾರೆ.
-ಜ್ಯೋತಿ ರಮೇಶ ಪೂಜಾರ, ಕಾರ್ಯದರ್ಶಿ, ಮಕ್ಕಳ ಕಲ್ಯಾಣ ಪ್ರತಿಷ್ಠಾನ, ಸಿಂದಗಿ.
ಮನೆಯಲ್ಲಿ ಬಹಳ ಕಷ್ಟವಿದೆ. ನನಗೆ ಶಾಲೆಕಲಿಯಲು ಇಷ್ಟ ಆದರೆ ಬಡತನಕ್ಕಾಗಿ ಶಾಲೆಗೆ ಹೋಗಿಲ್ಲ. ಸಾಹೇಬರು ನೀವು ಮೊದಲು ಶಾಲೆಕಲಿಯಿರಿ ಉಜ್ವಲ ಭವಿಷ್ಯ ನಿಮಗಿದೆ ಎಂದಿದ್ದಾರೆ. ನಾನು ಇಂದಿನಿಂದ ಶಾಲೆಗೆ ಹೋಗುತ್ತೇನೆ.
-ಕಾವೇರಿ ಪ್ರಭು ಡಾಲೆರ, ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿನಿ.