ಬೆಂಬಲ ಬೆಲೆ ಯೋಜನೆ ಅಡಿ ತೊಗರಿ ಕೇಂದ್ರ ಸ್ಥಾಪನೆ
ಬಳ್ಳಾರಿ 25: ಬಳ್ಳಾರಿ ಜಿಲ್ಲೆಯಲ್ಲಿ ತೊಗರಿಯನ್ನು ಕನರ್ಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯಿಂದ ಎಫ್.ಎ.ಕ್ಯೂ ಗುಣಮಟ್ಟದ ತೊಗರಿಯನ್ನು 2018-19ನೇ ಸಾಲಿಗೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೇಂದ್ರ ಸಕರ್ಾರ ನಿಗಧಿಪಡಿಸಿದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ಗೆ 5675 ರೂ. ರಂತೆ ರೈತರಿಂದ ಖರೀದಿಸಲಾಗುವ ತೊಗರಿಗೆ ರಾಜ್ಯ ಸಕರ್ಾರದ ಪ್ರೋತ್ಸಾಹಧನ ಪ್ರತಿ ಕ್ವಿಂಟಾಲ್ಗೆ 425 ರೂ. ರಂತೆ ಪ್ರತಿ ಕ್ವಿಂಟಾಲ್ಗೆ ಒಟ್ಟು 6100 ರೂ.ಗಳು ರಂತೆ ಖರೀದಿಗಾಗಿ ಕೇಂದ್ರವನ್ನು ತೆರೆಯಲಾಗಿದೆ ಎಂದು ಜಿಲ್ಲಾ ಟಾಸ್ಕ್ಫೋಸರ್್ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ. ವಾಲ್ಮೀಕಿವೃತ್ತ(ಎಸ್ಪಿ ಸರ್ಕಲ್)ದಲ್ಲಿರುವ ರೈತ ಸೇವಾ ಸಹಕಾರ ಸಂಘ ನಿಯಮಿತದಲ್ಲಿ ಕೇಂದ್ರ ತೆರೆಯಲಾಗಿದೆ. 2018-19ನೇ ಸಾಲಿನ ಪಹಣಿ ಪತ್ರ, ತೊಗರಿ ಬೆಳೆಯ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಂದ ಪಡೆದ ಬೆಳೆ ದೃಢೀಕರಣ ಪತ್ರ, ಆಧಾರ್ ಕಾಡರ್್ (ಮೂಲ), ಬ್ಯಾಂಕ್ ಖಾತೆ (ಆಧಾರದ ಕಾಡರ್್ನೊಂದಿಗೆ ಜೋಡಣೆಗೊಂಡ) ಪುಸ್ತಕದ ನಕಲು ಪ್ರತಿ, ಒಣಗಿದ ಹಾಗೂ ಸ್ವಚ್ಛ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಕೇಂದ್ರಕ್ಕೆ ಮಾರಲು ತರಬೇಕು. ತೊಗರಿ ಖರೀದಿ ಕೇಂದ್ರಗಳಲ್ಲಿ ರೈತರು ತಮ್ಮ ಹೆಸರನ್ನು ಜನವರಿ 07 ರೊಳಗಾಗಿ ನೊಂದಣಿ ಮಾಡಿಸಿ ನೊಂದಣಿ ಚೀಟಿ ಪಡೆಯಬೇಕು. ನಿಗಧಿತ ಅವಧಿಯೊಳಗೆ ನೊಂದಣಿಗೊಂಡ ರೈತರಿಂದ ಗರಿಷ್ಠ 10 ಕ್ವಿಂಟಾಲ್ ಮಾತ್ರ ಖರೀದಿಸಲಾಗುವುದು. ಬೆಳಿಗ್ಗೆ 08 ಗಂಟೆಯಿಂದ ರಾತ್ರಿ 08 ಗಂಟೆಯವರೆಗೆ ಮಾತ್ರ ಖರೀದಿಸಲಾಗುವುದು. ಸಕರ್ಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಖರೀದಿಸಲಾಗುತ್ತದೆ. ರೈತರು ಮಧ್ಯವತರ್ಿಗಳ ಮೊರೆ ಹೋಗದೇ ಈ ತೊಗರಿ ಬೆಂಬಲ ಬೆಲೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಕನರ್ಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯ ಶಾಖಾ ವ್ಯವಸ್ಥಾಪಕರ ದೂ.ಸಂ. 9449864453 ಸಂಪಕರ್ಿಸಬಹುದು ಎಂದು ತಿಳಿಸಿದ್ದಾರೆ.