ಕಾರವಾರ

ಸಮಾಜ ಸುಧಾರಣೆಯಲ್ಲಿ ಇಟ್ಟ ಹೆಜ್ಜೆ ದೊಡ್ಡದು: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ಸಮಾಜ ಸುಧಾರಣೆಯಲ್ಲಿ ಇಟ್ಟ ಹೆಜ್ಜೆ ದೊಡ್ಡದು: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ಕಾರವಾರ : ಮಹಿಳೆಗೆ ಸಾಮಾಜಿಕ ಸಮಾನತೆ ನೀಡುವಲ್ಲಿ,  ದೇವರನ್ನು ಹಿಂದು ವರ್ಗಗಳಿಗೆ ಮುಟ್ಟಿಸುವಲ್ಲಿ ಭಿನ್ನ ಆಯಾಮದಲ್ಲಿ ನೀಡಿದರು ನಾರಾಯಣ ಗುರು. ದಕ್ಷಿಣ ಭಾರತದ ಸಾಮಾಜಿಕ ಸುಧಾರಣೆಯಲ್ಲಿ ನಾರಾಯಣ ಗುರುಗಳು  ಮಹತ್ವ ಕಾರ್ಯ ನಿರ್ವಹಿಸಿದರು  ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಭಿಪ್ರಾಯಪಟ್ಟರು.  

ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ  ನಾರಾಯಣ ಗುರುಗಳ ಜಯಂತಿಯ ನಿಮಿತ್ತ ಏರ​‍್ಪಟಟ ಸರಳ ಸಮಾರಂಭದಲ್ಲಿ ಅವರು ಮಾತನಾಡಿದರು. ಮಹಿಳೆಯನ್ನು ಅತ್ಯಂತ ಕೀಳಾಗಿ ಕಂಡ ಸಮಾಜದಲ್ಲಿ  

ಮಹಿಳೆಗೆ ಸಮಾನತೆ ದಕ್ಕಿಸುವಲ್ಲಿ ನಾರಾಯಣ ಗುರುಗಳ ದಾರ್ಶನಿಕತೆ ದೊಡ್ಡದು. ಅವರು ಕನ್ನಡಿಯನ್ನು ದೇವರಾಗಿ ಪ್ರತಿಷ್ಠಾಪಿಸುವ ಮೂಲಕ ಮೇಲ್ವರ್ಗದ ದೇವರ ಕಲ್ಪನೆಗೆ ಬಹು ದೊಡ್ಡ ಹಿನ್ನೆಡೆಯನ್ನು ತಂದರು. ಅಲ್ಲದೇ  ಹಿಂದುಗಳಿದ ವರ್ಗಗಳಿಗೆ ದೇವಾಲಯಗಳನ್ನು ನೀವೇ ನಿರ್ಮಿಸಿಕೊಂಡು, ಅಲ್ಲಿ ಕನ್ನಡಿಯನ್ನಿಟ್ಟು ಪೂಜಿಸುವ ಮೂಲಕ ನಿಮ್ಮಲ್ಲೇ ದೇವರನ್ನು ಕಾಣಿ. ಮನುಷ್ಯರ  ಪ್ರತಿರೂಪವೇ ದೇವರು. ನೀವೇ ಪೂಜಾರಿಗಳು, ದೇವರ ಮಧ್ಯೆ ಮನುಷ್ಯನ ಮಧ್ಯಸ್ಥಿಕೆ ಅಗತ್ಯ ಇಲ್ಲ. ನಿಮಗೆ ನೀವೇ ದೇವರು ಎಂಬ ತಾತ್ವಿಕ ದರ್ಶನದ ಮೂಲಕ ಸಮಾಜದಲ್ಲಿದ್ದ ಮೌಢ್ಯ ಬದಲಾವಣೆಗೆ ಕ್ರಾಂತ್ರಿಕಾರಕ ಬದಲಾವಣೆ ನೀಡದರು ಎಂದು ಹೇಳಿದರು. ಇದು ಸಮಾಜದಲ್ಲಿ ದೊಡ್ಡ ಸಂಚಲನ ತಂದಿತಲ್ಲದೇ ಮನುಷ್ಯರಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ ಎಂಬ ನಿಲುವಿಗೆ ಮನುಷ್ಯರು ಆಲೋಚನೆ ಮಾಡುವಂತಾಯಿತು ಎಂದರು. ಸಮಾಜವು ಉತ್ತಮ ಶಿಕ್ಷಣ ಹಾಗೂ ಸುಧಾರಣೆಯಿಂದ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಅದಕ್ಕೆ 50 ವರ್ಷಗಳ ಹಿಂದಿನ ಆಭಿವೃದ್ಧಿ ರಹಿತ  ದಕ್ಷಿಣ ಭಾರತ ಹಾಗೂ ಇಂದಿನ ಆಭಿವೃದ್ಧಿಯುತ ದಕ್ಷಿಣ ಭಾರತವನ್ನ ಉದಾಹರಣೆ ನೀಡಿದರು. 

ಅಪರ ಜಿಲ್ಲಾಧಿಕಾರಿ ಹೆಚ್ ಕೆ ಕೃಷ್ಣಮೂರ್ತಿ ಮಾತನಾಡಿ ನಾರಾಯಣ ಗುರುಗಳಂತಹ ದಾರ್ಶನಿಕರಿಂದಲೇ ಭಾರತ, ಅದರಿಂದಲೇ ಸಂಸ್ಕೃತಿ ಉಳಿದಿದೆ. ಮಹಿಳೆಯನ್ನು ಅತ್ಯಂತ ಕೀಳಾಗಿ ನಡೆಸಿಕೊಂಡ ಮತ್ತು ದೌರ್ಜನ್ಯದ ಪರಮಾವಧಿ ಎಂಬ ನಾಡಿನಲ್ಲಿ ಹಿಂದುಳಿದ ವರ್ಗದ ಮಹಿಳೆಯರಿಗೆ ಸಮಾನತೆಯನ್ನು ನೀಡಿದವರು ನಾರಾಯಣ ಗುರು. ಅವರು 12 ನೇ ಶತಮಾನದಲ್ಲಿ ಮಾಡಿದ ಬಸವಣ್ಣನ ಕ್ರಾಂತಿಯ ನಡೆಯನ್ನು ನಾವು ನಾರಾಯಣ ಗುರುಗಳಲ್ಲಿ ಕಾಣಬಹುದು ಎಂದರು. ಅವರು ಕೇರಳದಲ್ಲಿ ಮಾಡಿದ ಸಾಮಾಜಿಕ ಪರಿವರ್ತನೆಗೆ ಬಹುದೊಡ್ಡ ಇತಿಹಾಸವಿದೆ ಎಂದು  ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.  ಶಿಕ್ಷಣ ಮತ್ತು ದುಡಿಮೆಯ  ಮೂಲಕ ಸ್ವತಂತ್ರರಾಗುತ್ತೀರಿ ಎಂದ ಅವರು  ಸಂಘಟಿತ ಬಲದಿಂದ ಎಲ್ಲಾ ವರ್ಗದವರಿಗೂ ದೇವಾಲಯಗಳಿಗೆ ಪ್ರವೇಶ ಒದಗಿಸಿದ ನಾರಾಯಣ ಗುರುಗಳ ಚಿಂತನೆಗಳನ್ನು ಅರಿಯುವುದು ಮುಖ್ಯ ಎಂದರು.  

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕಚೇರಿಯ ವಿವಿಧ ಇಲಾಖೆಯಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ  ಸಹಾಯಕ ನಿರ್ದೇಶಕ ಎನ್‌.ಜಿ.ನಾಯ್ಕ್‌ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ