ಇಂಡಿ

ವಿದ್ಯುತ್ ಸಮಸ್ಯೆಗೆ ಅಧಿಕಾರಿಗಳೆ ಹೊಣೆ

ವಿದ್ಯುತ್ ಸಮಸ್ಯೆಗೆ ಅಧಿಕಾರಿಗಳೆ ಹೊಣೆ

ಇಂಡಿ 11: ಜಿಲ್ಲಾದÀ್ಯಂತ ವಿದ್ಯುತ್ ಸಮಸ್ಯೆ ಉಲ್ಬಣಿಸುವುದಕ್ಕೆ ಅಧಿಕಾರಿಗಳೇ ನೇರ ಕಾರಣರಾಗಿದ್ದು ಸರಕಾರದ ಹೆಸರು ಕೆಡಿಸುವ ಉದ್ದೇಶದಿಂದಲೇ ವಿದ್ಯುತ್ ಸರಿಯಾಗಿ ಪೂರೈಕೆ ಮಾಡುತ್ತಿಲ್ಲ ಎಂದು ಬಿಜೆಪಿ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಆರೋಪಿಸಿದರು.ಶನಿವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಕಳೆದ 10-12 ದಿನಗಳಿಂದ ಜಿಲ್ಲಾದ್ಯಂತ ವಿದ್ಯುತ್ತ ಸಮಸ್ಯೆ ಇದೆ. ರೈತರು ಹೊಲದಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಹಗಲು-ರಾತ್ರಿ ಥ್ರೀ ಫೇಸ್ ವಿದ್ಯುತ್ ಸರಿಯಾಗಿ ನೀಡುತ್ತಿಲ್ಲ. ಪ್ರತೀ ದಿನ ಕೇವಲ-1-2 ಘಂಟೆ ಮಾತ್ರ ವಿದ್ಯುಯತ್ ನೀಡುತ್ತಿದ್ದಾರೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದ್ದು ಅಧಿಕಾರಿಗಳು ಕೂಡಲೆ ಸರಿಯಾಗಿ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು.


ಸುದ್ದಿ ಓದಿ