ಕಲೆಗೆ ಸಾವಿಲ್ಲ ಕಲಾವಿದನಿಗೆ ಸುಖವಿಲ್ಲ -ಟಿ.ಹೆಚ್.ಎಂ.ಬಸವರಾಜ

ಕಲೆಗೆ ಸಾವಿಲ್ಲ ಕಲಾವಿದನಿಗೆ ಸುಖವಿಲ್ಲ -ಟಿ.ಹೆಚ್.ಎಂ.ಬಸವರಾಜ

ಬಳ್ಳಾರಿ 19: ಕನಸು ಮಲಗಿದ್ದಾಗ ನೋಡುವ ಒಂದು ನಾಟಕ, ನಾಟಕ ಎಚ್ಚರವಿದ್ದಾಗ ಕಾಣುವ ಒಂದು ಕನಸು, ನಾಟಕಗಳು ಭಾವನೆಗಳನ್ನು ಮತ್ತು ಬದುಕಿನ ಮಜಲುಗಳನ್ನು ತಿಳಿಸುವಂತಹ ಪ್ರಯೋಗಗಳು ಎಂದು ಕನರ್ಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷರಾದ ಟಿ.ಹೆಚ್.ಎಂ.ಬಸವರಾಜ ರವರು ತಿಳಿಸಿದರು. 

ನಗರದ ಡಾ|| ಜೋಳದರಾಶಿ ದೊಡ್ಡನಗೌಡರ ರಂಗಮಂದಿರದಲ್ಲಿ ಸಂಜೆ ಮೈಸೂರಿನ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಕಲಾವೃಂದದವರು ಹಮ್ಮಿಕೊಂಡ ದ್ರೌಪದಿ ವಸ್ತಾಪಹರಣ ಹಾಸ್ಯ ನಾಟಕದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದಕ್ಕೂ ಮೊದಲು ಹಾಮರ್ೋನಿಯಂ ನುಡಿಸುತ್ತಾ ಲಂಬೋದರ ಲಕುಮಿಕರ ಎಂಬ ವಿನಾಯಕನ ಸ್ತುತಿಯನ್ನು ನುಡಿಸಿ ಎಲ್ಲರನ್ನು ಚಕಿತಗೊಳಿಸಿದರು. ಮುಂದುವರೆದು ಮಾತನಾಡುತ್ತ ಕಲೆಗಳ ತವರೂರಾದ ಬಳ್ಳಾರಿಯಲ್ಲಿ ಹೊರಗಡೆಯವರು ಬಂದರೂ ಸಹಿತ ಅವರನ್ನು ಸ್ವಾಗತಿಸಿ ಅವರ ಕಾರ್ಯಕ್ರಮಗಳಿಗೆ ಸಹಕಾರ ಕೊಟ್ಟು ಎಲ್ಲರ ಮನಗಳಲ್ಲಿ ಮನೆ ಮಾಡಿಕೊಳ್ಳುವವರು ಬಳ್ಳಾರಿಯವರು. ಕಲೆಗೆ ಸಾವಿಲ್ಲ ಕಲಾವಿದನಿಗೆ ಸುಖವಿಲ್ಲ. ಸಕರ್ಾರದವರು ಕೊಡುವ ಮಾಸಾಶನವನ್ನು ಕನಿಷ್ಠ ಪಕ್ಷ ಹಿರಿಯ ಕಲಾವಿದರಿಗೆ ತಿಂಗಳಿಗೆ ರೂ.5000/- ಕೊಟ್ಟರೆ ದುಸ್ಥರವಾದ ಅವನ ಜೀವನ ಹಸನಾಗುವುದೆಂದು ಹೇಳಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ಮೋಹನ್ರೆಡ್ಡಿಯವರು ನಾಟಕವನ್ನು ಉದ್ಘಾಟಿಸಿ ಮಾತನಾಡುತ್ತ ಕಲೆ ಎಲ್ಲರನ್ನೂ ಆರಿಸಿಕೊಳ್ಳುತ್ತದೆ, ಕೆಲವರನ್ನು ಮಾತ್ರ ಅಪ್ಪಿಕೊಳ್ಳುತ್ತದೆ. ಏಕೆಂದರೆ ಕಲೆಯು ಒಂದು ತಪಸ್ಸು, ಇದು ನಿರಂತರವಾಗಿ ಸಾಧನೆ ಮಾಡುವವರಿಗೆ ಮಾತ್ರ ಒಲಿಯುತ್ತದೆ ಎಂದು ತಿಳಿಸಿದರು. 

ಆರಂಭದಲ್ಲಿ ಮೈಸೂರಿನ ಬಿ.ಲೀಲಾವತಿಯವರು ಚಲನಚಿತ್ರ ನಟರಾದ ದಿ|| ರಾಜಾನಂದರವರ ನೆನಪು ಮಾಡುತ್ತ ಕಲಾವಿದೆಯಾದ ತಮ್ಮ ಮಗಳ ಮದುವೆಯ ಸಹಾಯಾರ್ಥವಾಗಿ ಡಿ.ಆರ್.ಕೆ.ರಂಗಸಿರಿ ಟ್ರಸ್ಟ್ವತಿಯಿಂದ ಡಿ.ಶಂಕರನಾಯ್ಡು ರಚನೆ ಮತ್ತು ನಿದರ್ೇಶನದಿಂದ ಕೂಡಿದ ದ್ರೌಪತಿ ವಸ್ತ್ರಾಪಹರಣ ಎಂಬ ಹಾಸ್ಯ ನಾಟಕವನ್ನು ಪ್ರದಶರ್ಿಸಲು ತಾವುಗಳೆಲ್ಲಾ ಸಹಕಾರ ಕೊಟ್ಟಿದ್ದಕ್ಕೆ ವಂದಿಸಿದರು. ರಾಘವೇಂದ್ರ ಗುಡುದೂರು ರವರು ವಚನ ಗಾಯನ ಮಾಡಿ ಪ್ರಾಥರ್ಿಸಿದರು. ರಂಗಕಮರ್ಿ ಅಣ್ಣಾಜಿ ಕೃಷ್ಣಾರೆಡ್ಡಿಯವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಶ್ರೀಮತಿ ವೀಣಾ ಎರ್ರೆಗೌಡ, ಪಲ್ಲೇದ ನಾಗರಾಜ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಾಸ್ಯಮಯ ನಾಟಕ ಎಲ್ಲರನ್ನು ಮಂತ್ರಮುಗ್ಧರನ್ನಾಗಿ ಮಾಡಿತು.

ಸುದ್ದಿ ಓದಿ