ಮನರಂಜನೆ

ಟೆನ್ನೆಸ್ಸಿಯಲ್ಲಿ ವಿಮಾನ ಪತನ: ಟಾರ್ಜನ್ ಖ್ಯಾತಿಯ ನಟ ಜೋ ಲಾರಾ ಸಾವು

ಟೆನ್ನೆಸ್ಸಿಯಲ್ಲಿ ವಿಮಾನ ಪತನ: ಟಾರ್ಜನ್ ಖ್ಯಾತಿಯ ನಟ ಜೋ ಲಾರಾ ಸಾವು

ಮಾಸ್ಕೋ, ಮೇ 31 (ಸ್ಪುಟ್ನಿಕ್) ‘ಟಾರ್ಜನ್: ದಿ ಎಪಿಕ್ ಅಡ್ವೆಂಚರ್ಸ್" ನ ಅಮೆರಿಕದ ತಾರಾ ನಟ ಜೋ ಲಾರಾ, ಆತನ ಪತ್ನಿ ಮತ್ತು ಹಲವರು ಟೆನ್ನೆಸ್ಸಿಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು  ಅಲ್ಲಿನ ಮಾಧ್ಯಮ ವರದಿ ಮಾಡಿದೆ.

ಶನಿವಾರ ಸಂಭವಿಸಿದ ವಿಮಾನ ದುರಂತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ  58 ವರ್ಷದ ಲಾರಾ, ಆತನ ಪತ್ನಿ ಗ್ವೆನ್ ಲಾರಾ(66), ಮತ್ತು ಒಂದೇ ಚರ್ಚ್‌ನ ಐವರು ಸದಸ್ಯರು ಸೇರಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ‘ದಿ ಟೆನ್ನೆಸ್ಸಿಯನ್‍’ ಪತ್ರಿಕೆ ತಿಳಿಸಿದೆ.

ಸ್ಮಿರ್ನಾ ರುದರ್ಫೋರ್ಡ್ ಕೌಂಟಿ ವಿಮಾನ ನಿಲ್ದಾಣದಿಂದ ನಿರ್ಗಮಿಸಿದ ನಂತರ ಶನಿವಾರ ಬೆಳಿಗ್ಗೆ ಟೆನ್ನೆಸ್ಸೀಯ ರುದರ್ಫೋರ್ಡ್ ಕೌಂಟಿಯ ಸ್ಮಿರ್ನಾ ಎಂಬ ಪಟ್ಟಣದ ಪರ್ಸಿ ಪ್ರೀಸ್ಟ್ ಸರೋವರದಲ್ಲಿ ಸೆಸ್ನಾ ಸಿ -501 ಜೆಟ್ ವಿಮಾನ ಅಪಘಾತಕ್ಕೀಡಾಗಿದೆ. 

ವಿಮಾನವು ಫ್ಲೋರಿಡಾದ ಪಾಮ್ ಬೀಚ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು ಎಂದು ತುರ್ತು ಸೇವೆಅಧಿಕಾರಿಗಳು ತಿಳಿಸಿದ್ದಾರೆ.

ರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಎಲ್ಲಾ ಏಳು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. 

ವಿಮಾನ ಅಪಘಾತದ ಬಗ್ಗೆ ಅಮೆರಿಕ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್‌ಟಿಎಸ್ ಬಿ) ತನಿಖೆ ನಡೆಸುತ್ತಿದೆ. ಅಪಘಾತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಸುದ್ದಿ ಓದಿ