ಆರೋಪಿ ನಾಪತ್ತೆ
ಲೋಕದರ್ಶನ ವರದಿ
ಬೈಲಹೊಂಗಲ 09: ಮಹಾರಾಷ್ರ್ಟ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಇಚಲಕರಂಜಿಯ ಶಾಹುನಗರದ ಚಂದೂರ ಗಲ್ಲಿಯ ನಿವಾಸಿ ಗಜಾನನ ಬಂಡುಪಂತ ತಾಂಬಾಟ(36) ಈತನು ಕಳೆದ 5 ವರ್ಷಗಳ ಹಿಂದೆ ಬೈಲಹೊಂಗಲ ಜೆಎಂಎಫ್‌ಸಿ ನ್ಯಾಯಾಲಯದಿಂದ ಜಾಮೀನು ಮೇಲೆ ಬಿಡುಗಡೆಗೊಂಡ ಆರೋಪಿಯಾಗಿದ್ದು, ಈತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನನ್ನು ಬೈಲಹೊಂಗಲ ಪಟ್ಟಣದಲ್ಲಿ ಕಳ್ಳತನ ಆರೋಪದಡಿಯಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಈ ಚಹರೆಯುಳ್ಳ ವ್ಯಕ್ತಿ ಯಾರಿಗಾದರೂ ಗುರುತು ಸಿಕ್ಕಲ್ಲಿ ಠಾಣೆಯ ದೂರವಾಣಿ ಸಂಖ್ಯೆ 08288-233133 ಸಂಪರ್ಕಿಸಲು ಕೋರಲಾಗಿದೆ.