ಸತ್ತಿಗೇರಿ ಮಾರ್ಗವಾಗಿ ಹೋಗುವ ಯಾದವಾಡ ರಸ್ತೆ ಕೆಸರು ಗದ್ದೆ
ಯರಗಟ್ಟಿ,24 : ಯರಗಟ್ಟಿ ಸಮೀಪದ ಸತ್ತಿಗೇರಿ ಗ್ರಾಮದ ಮಾರ್ಗವಾಗಿ ಯಾದವಾಡಕ್ಕೆ ಹೋಗುವ ರಸ್ತೆ ಕೆಸರು ಗದ್ದೆ ಯಾಗಿದೆ. ಇದರಲ್ಲಿ ರಸ್ತೆ ಯಾವುದು, ಕೆಸರು ಯಾವುದು ಎಂಬುದು ತಿಳಿಯದಂತಾಗಿದೆ. ಕಳೆದ ವರ್ಷವೆ ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೋಟಿಗಟ್ಟಲೆ ಹಣ ಖರ್ಚು ಮಾಡಿ ರಸ್ತೆ ನಿರ್ಮಾಣ ಮಾಡಿದ್ದಾರೆ ಆದರೂ ಪ್ರಯೋಜನವಾಗುತ್ತಿಲ್ಲ ಲೋಕೋಪಯೋಗಿ ಇಲಾಖೆ ರಸ್ತೆ ಬದಿ ಚರಂಡಿ ನಿರ್ಮಾಣ ಮಾಡದ ಕಾರಣ ಮಳೆ ನೀರು ಮೇಲೆ ನಿಲ್ಲುತ್ತಿದೆ.
ರಸ್ತೆ ನೋಡಿ ಜನರು ದಂಗಾಗುತ್ತಿದ್ದಾರೆ. ಗ್ರಾಮದ ಸತ್ತಿಗೇರಿಯಿಂದ ಕೊಡ್ಲಿವಾಡ, ಕೊರಕೋಪ್ಪ ರಸ್ತೆ ಮತ್ತು ಗ್ರಾಮದ ಕೆಲವುಕಡೆ ರಸ್ತೆ ಕೆಸರು ಗದ್ದೆಯಾಗಿರುವುದರಿಂದ ಪ್ರಯಾಣಿಕಗೆ ತೊಂದರೆ ಆಗುತ್ತಿದೆ ಆದರಿಂದ ಸಂಬಂಧಪಟ್ಟ ರಸ್ತೆ ದುರಸ್ತಿಗೆ ಕ್ರಮ ಕೈಗೊಂಡು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕಿದೆ.