ವಿಶ್ವ ಏಡ್ಸ ದಿನಾಚರಣೆ ಪ್ರಯುಕ್ತ ಜಾಥಾ ಕಾರ್ಯಕ್ರಮಕ್ಕೆ ಚಾಲನೆ
ಲೋಕದರ್ಶನ ವರದಿ
ಶಿಗ್ಗಾವಿ 04: ಹೆಚ್ಐವ್ಹಿ ಏಡ್ಸ ಬಗ್ಗೆ ಸಾರ್ವಜನಿಕರಲ್ಲಿ ಇರುವ ತಪ್ಪು ಕಲ್ಪನೆ ಹಾಗೂ ಮೂಡನಂಬಿಕೆಗಳನ್ನು ಹೊಡೆದೋಡಿಸಿದಾಗ ಏಡ್ಸ ರೋಗದ ಸಂಪೂರ್ಣ ನಿಯಂತ್ರಣವನ್ನು ಮಾಡಬಹುದು ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಹನುಮಂತಪ್ಪ ಹೇಳಿದರು.
ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ತಾಲೂಕ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಆರೋಗ್ಯ ಇಲಾಖೆ, ರಂಭಾಪುರಿ ಪಿ.ಯು.ಕಾಲೇಜ ಹಾಗೂ ಎನ್.ಎಸ್.ಎಸ್ ಘಟಕ, ಸ್ಪಂದನಾ ಸಂಸ್ಥೆ, ಸಂಜೀವಿನಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿಶ್ವ ಏಡ್ಸ ದಿನಾಚರಣೆ ಪ್ರಯುಕ್ತ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಏಡ್ಸ ರೋಗವನ್ನು ಸಂಪೂರ್ಣ ಗುಣಮುಖ ಮಾಡಲು ಸದ್ಯ ಚಿಕಿತ್ಸೆ ಲಭ್ಯವಿಲ್ಲ ಆದರೆ ಹೆಚ್.ಐ.ವ್ಹಿ ಏಡ್ಸ ನೊಂದಿಗೆ ಉತ್ತಮ ಜೀವನ ನಿರ್ವಹಣೆ ಮಾಡಿ 20-25 ವರ್ಷಗಳ ಕಾಲ ಯಾವುದೇ ಭಯವಿಲ್ಲದೇ ಪ್ರತಿನಿತ್ಯ ಮಾತ್ರೆ ಸೇವನೆ ಮಾಡುತ್ತಾ, ಆರೈಕೆ ಬೆಂಬಲದೊಂದಿಗೆ ಚಿಕಿತ್ಸೆ ಪಡೆದು ಇತರರಂತೆ ಬದುಕಬಹುದು ಎಂದರು.
ತಾಲೂಕ ಆಸ್ಪತ್ರೆ ಆಪ್ತಸಮಾಲೋಚಕಿ ರೇಣುಕಾ ಹೊಸಮನಿ ಮಾತನಾಡಿ ಹೆಚ್.ಐ.ವ್ಹಿ ಏಡ್ಸ ಬಗ್ಗೆ ಕರ್ನಾಟಕ ರಾಜ್ಯದಲ್ಲಿ ಎ.ಆರ್.ಟಿ ಯ ಉತ್ತಮ ಚಿಕಿತ್ಸೆ ಲಭ್ಯವಿದ್ದು ಅದನ್ನು ಪ್ರತಿನಿತ್ಯ ಸೇವಿಸಿ ಜೀವನದ ಕ್ರಮ ಭದ್ದತೆ ಬಗ್ಗೆ ರೂಪರೇಷೆಗಳನ್ನು ಹೊಂದಿ ಜೀವನ ಮಾಡಿದರೆ ನಾವು ಇತರರಂತೆ ಬದುಕುಬಹುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಹಿರಿಯ ಆಪ್ತಸಮಾಲೋಚಕ ಸುಧಾಕರ ದೈವಜ್ಞ, ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಶ್ರೀಕಾಂತ ಸರ್ಜಾಪೂರ, ಅಶೋಕ ಅಮಾತ್ಯಣ್ಣವರ, ಮಲ್ಲಿಕಾರ್ಜುನ ಸ್ವಾಮಿ, ಜಗನ್ನಾತ ಕಮತರ, ಸರೋಜಾ ಹರಿಜನ, ಪಕ್ಕಿರೇಶ ಹಿರೇಮಠ, ನ್ಯಾಯವಾದಿ ಬಸವರಾಜ ಜೇಕಿನಕಟ್ಟಿ, ಶಮ್ಸ ತಬರೀಜ್, ಸ್ಪಂದನಾ ಸಂಸ್ಥೆಯ ಪರಮೇಶ, ಶಾಂತಾ ಮತ್ತೂರ, ಸಂಜೀವಿನಿ ಸಂಸ್ಥೆಯ ಹನುಮಂತ, ಚಂದ್ರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ರೇಣುಕಾ ಹೊಸಮನಿ ಸ್ವಾಗತಿಸಿದರು, ಶಮ್ಸ ತಬರಿಜ್ ವಂದಿಸಿದರು.