ರಾಣೆಬೆನ್ನೂರ

ವಿಶ್ವಕರ್ಮ ಸಮಾಜದ ಬಾಂಧವರು ಅತ್ಯಂತ ಬಡವ ಸಮುದಾಯ

ವಿಶ್ವಕರ್ಮ ಸಮಾಜದ ಬಾಂಧವರು ಅತ್ಯಂತ ಬಡವ ಸಮುದಾಯ

ರಾಣೇಬೆನ್ನೂರು 20: ವಿಶ್ವಕರ್ಮ ಸಮಾಜದ ಬಾಂಧವರು ಅತ್ಯಂತ ಬಡವ ಸಮುದಾಯವಾಗಿದೆ. ರಾಜ್ಯದ ಯಾವುದೇ ಭಾಗಕ್ಕೆ ಹೋದರೂ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಶ್ರೀಮಂತರಿದ್ದಾರೆ. ನಮ್ಮ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ಬಂದು ತಲೆ ಎತ್ತಿ ನಿಲ್ಲುವಂತಾಗಬೇಕು ಎಂದು ಹುಲಗೂರ ಜೀವನ್ ಮುಕ್ತಾಲಯ ಕ್ಷೇತ್ರದ ಜಗದ್ಗುರು ಮೌನೇಶ್ವರ ಮಠದ ಮೌನೇಶ್ವರ ಸ್ವಾಮೀಜಿ ಹೇಳಿದರು.

ಅವರು ನಗರದ ಕುರುಬಗೇರಿ ರಸ್ತೆಯಲ್ಲಿರುವ ಮೌನೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಜರುಗಿದ ಜಗದ್ಗುರು ಮೌನೇಶ್ವರರ ಮಹೋತ್ಸವದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ಸಮಾಜದ ಬಾಂಧವರೆಲ್ಲರೂ ಧರ್ಮದ ಹಾದಿಯಲ್ಲಿ ನಡೆಯಬೇಕು. ಧರ್ಮವೇ ಸ್ವರ್ಗ, ಅಧರ್ಮವೇ ನರಕ. ಆದ್ದರಿಂದ ಇತರ ಸಮಾಜದವರೆಲ್ಲರೊಡಗೂಡಿ ಬಾಂಧವ್ಯದಿಂದ ಬದುಕಬೇಕು ಎಂದರು.

ಸಾನಿಧ್ಯ ವಹಿಸಿ ಮಾತನಾಡಿದ ಇನ್ನೋರ್ವ ಅಂತರವಳ್ಳಿಯ ಮೂರುಝಾವಧೀಶ್ವರ ಮಹಾಸ್ವಾಮಿಗಳ ಮಠದ ಮಠಾಧೀಶರಾದ ನಿರಂಜನ ಸ್ವಾಮೀಜಿ, ನಮ್ಮ ನಮ್ಮಲ್ಲಿನ ಒಳ ಜಗಳವನ್ನು ಬಿಟ್ಟು ಎಲ್ಲರೂ ಒಂದಾಗಿ ಬಾಳಬೇಕು. ‘ಒಗ್ಗಟ್ಟಿನಲ್ಲಿ ಬಲವಿದೆ’ ಎನ್ನುವ ಹಾಗೆ ಒಗ್ಗಟ್ಟಿದ್ದರೆ ಏನನ್ನಾದರೂ ಸಾಧಿಸಬಹುದು. ಸಮಾಜದ ಎಲ್ಲ ಮಕ್ಕಳನ್ನು ಶಿಕ್ಷಣವಂತರನ್ನಾಗಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಎಲ್ಲ ರಂಗಗಳಲ್ಲಿಯೂ ಮುಂದೆ ಬರಬೇಕಾದರೆ ಶಿಕ್ಷಣದ ಅವಶ್ಯಕತೆ ಇದೆ ಎಂದರು.

ವೇದಿಕೆಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ದೇವೇಂದ್ರಪ್ಪ ಅರ್ಕಾಚ್ಯಾರಿ, ಗಣೇಶ ಬಡಿಗೇರ, ಹನುಮಂತಪ್ಪ ಬಡಿಗೇರ, ವೀರಣ್ಣ ಚಿಕ್ಕುರವತ್ತಿ, ಮೌನೇಶ ಚೌಡದಾನಪುರ, ರಾಘವೇಂದ್ರ ಕಮ್ಮಾರ, ಕೃಷ್ಣ ಕಮ್ಮಾರ, ನಾಗರಾಜ ಬಡಿಗೇರ, ಓಂಕಾರಾಚ್ಯಾರಿ, ಬಸವರಾಜ ಬಡಿಗೇರ, ಮಾರ್ತಾಂಡಪ್ಪ ಕಮ್ಮಾರ, ರಮೇಶ ಅರ್ಕಾಚ್ಯಾರಿ, ಚಂದ್ರು ಹುಲ್ಲತ್ತಿ, ಹೇಮಾಚ್ಯಾರಿ, ಪರಮೇಶ್ವರಾಚ್ಯಾರಿ, ಈರಪ್ಪ ಬೆಳವಡಿ,  ಸೇರಿದಂತೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಸುದ್ದಿ ಓದಿ