ರಾಣೆಬೆನ್ನೂರ

ಗಂಗಾರತಿ ಮಾದರಿಯಲ್ಲಿಯೇ ಬಲಭಾಗದ ಪೂರ್ವ ಉತ್ತರಾಭಿಮುಖವಾಗಿ ಹರಿಯುವ ತುಂಗಭದ್ರಾ ನದಿ

ಗಂಗಾರತಿ ಮಾದರಿಯಲ್ಲಿಯೇ ಬಲಭಾಗದ ಪೂರ್ವ ಉತ್ತರಾಭಿಮುಖವಾಗಿ ಹರಿಯುವ ತುಂಗಭದ್ರಾ ನದಿ

ರಾಣಿಬೆನ್ನೂರ 07:  ಬಲಭಾಗದ ಪೂರ್ವ ಉತ್ತರಾಭಿಮುಖವಾಗಿ ಹರಿಯುವ ತುಂಗಭದ್ರಾ ನದಿ ತೀರದ ಗಂಗಾರತಿ ಮಾದರಿಯಲ್ಲಿಯೇ  ಉತ್ತರ ಭಾರತದ ಗಂಗಾನದಿ ತೀರದಲ್ಲಿ ಜರುಗಲಿದೆ ಎಂದು ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಮಹಾಸ್ವಾಮಿಜಿಗಳು ಹೇಳಿದರು.      

ತಾಲೂಕಿನ ಕೋಡಿಯಾಲ ಹೊಸಪೇಟೆಯಲ್ಲಿ ಪುಣ್ಯಕೋಟಿ ಮಠದಲ್ಲಿ 5ನೇ ವರ್ಷದ ಐತಿಹಾಸಿಕ ತುಂಗಾರತಿ ಸಮಾರಂಭವು ಫೆ.11 ರಂದು ಸಂಜೆ 5 ಗಂಟೆಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಈ ಮಠ ಎಲ್ಲ ವರ್ಗದ ಜನರ ಪರಿಶ್ರಮ ಹಾಗೂ ಭಕ್ತರು ನೀಡಿದ ದೇಣಿಗೆಯಿಂದ ಇದೆಲ್ಲಾ ನಿರ್ಮಾಣವಾಗಿದೆ. ನೂತನವಾಗಿ ನಿರ್ಮಾಣಗೊಂಡಿರುವ ತಪೋಮಂದಿರ ಲೋಕಾರ್ಪಣೆ , ಶ್ರೀ ಜಗದ್ಗುರು ರೇಣುಕಾಚಾರ್ಯರ ಮಹಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಜರುಗಲಿದೆ ಎಂದರು. ಮಠ ಮಂದಿರಗಳು ಸಂಸ್ಕಾರ ರೂಪಿಸುವ ಜ್ಞಾನದೇಗುಲಗಳಿದ್ದಂತೆ. ಮನುಷ್ಯನ ಅಂಧಕಾರ, ಅಜ್ಞಾನ, ದುರಾಚಾರ ದೂರಮಾಡುವಲ್ಲಿ ಅದರದೆ Dದ ಮಹತ್ವವನ್ನು ಹೊಂದಿವೆ. ಪುಣ್ಯಕೋಟಿ ಕಥೆಯಲ್ಲಿ ಬರುವ ಗೋವಿನಂತೆ ಮಠ-ಮಂದಿರಗಳು ಜನರನ್ನು ಸನ್ಮಾರ್ಗಕ್ಕೆ ಕೊಂಡೊಯ್ಯುವ ಮುಖ್ಯ ಉದ್ದೇಶವನ್ನು ಹೊಂದಿವೆ. 

ದಾವಣಗೇರಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಹೆಚ್. ವಿಶ್ವನಾಥ ಮಾತನಾಡಿ, 11 ರಂದು ಬೆಳಗ್ಗೆ ಬ್ರಾಹ್ಮಿ ಮೂಹೂರ್ತದಲ್ಲಿ ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಜಿಗಳ ಸಾನಿzsÀåದಲ್ಲಿ ಜಗದ್ಗುರು ರೇಣುಕಾಚಾರ್ಯ ಮಹಾಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ ಎಂದರು. ರಾಣೆಬೆನ್ನೂರು ಹಿರೇಮಠ ಶನೇಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಜಿಗಳ ನೇತೃತ್ವದಲ್ಲಿ ಸಂಜೆ ತುಂಗಾರತಿ ಧಾರ್ಮಿಕ ವಿಧಿ ವಿಧಾನಗಳು ಹರಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ನಡೆಯಲಿವೆ.

ಧರ್ಮಸಭೆಯ ದಿವ್ಯ ಸಾನಿಧ್ಯವನ್ನು ಶಿರಾ ತಾಲೂಕು ಸ್ಪಟಿಕಪುರಿ ಮಹಾಸಂಸ್ಥಾನ ನಂಜಾವಧೂತ  ಮಹಾಸ್ವಾಮಿಗಳು,  ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ ಚಂದ್ರಶೇಖರ ಶಿವಾಚಾರ್ಯರು, ಶಾಕಾಪುರ ವಿಶ್ವಾರಾಧ್ಯ ತಪೋವನಮಠದ ಡಾ| ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳು, ವಿಜಯಪುರ ವೃಷಬೇಂದ್ರ  ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸುವರು ಎಂದರು.     

ಸಂದರ್ಭದಲ್ಲಿ ವಿಜಯಪುರ ಶಾಸಕ ಬಸವನಗೌಡ .ಪಾಟೀಲ. ಯತ್ನಾಳ ಅವರಿಗೆ ವಿಶ್ವಮಾತೆ ಪುಣ್ಯಕೋಟಿ ಪ್ರಶಸ್ತಿಯನ್ನು ಉಪಸಭಾಪತಿ ರುದ್ರಪ್ಪ ಲಮಾಣಿ ಇವರು ಪ್ರಧಾನ ಮಾಡುವರು. ಶಾಸಕ ಪ್ರಕಾಶ ಕೋಳಿವಾಡ,  ಬಿ.ಪಿ. ಹರೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿರುವರು.     

ಗ್ರಾಪಂ ಸದಸ್ಯ ದಿನೇಶ ಬಿ.ಎನ್, ಎನ್. ನಾಗರಾಜ, ಎನ್.ಹೆಚ್. ಹಾವನೂರು, ರೈತ ಮುಖಂಡ ರವೀಂದ್ರಗೌಡ ಪಾಟೀಲ, ಮಂಜುನಾಥ ಜಿಗಳಿ, ವಿರಾಜ ಮತ್ತಿತರರು ಇದ್ದರು.

ಸುದ್ದಿ ಓದಿ