ಶ್ರದ್ಧಾಭಕ್ತಿಯಿಂದ ನಡೆದ ದ್ಯಾವಮ್ಮ, ಹುಲಿಗೆಮ್ಮ ದೇವಿಯ ಗಂಗೆಸ್ಥಳ ಮೆರವಣಿಗೆ
ಲೋಕದರ್ಶನ ವರದಿ
ಕಂಪ್ಲಿ, ಆ.25: ಕಂಪ್ಲಿ-ಕೋಟೆಯಲ್ಲಿ ಗಂಗಾಮತ ಸಮಾಜ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಆರಾಧ್ಯ ದೇವರಾದ ಶ್ರೀ ಗ್ರಾಮ ದೇವತೆ ದ್ಯಾವಮ್ಮ ಹಾಗೂ ಹುಲಿಗೆಮ್ಮ ದೇವಿಯ ಗಂಗೆಸ್ಥಳ ಮೆರವಣಿಗೆ ಮಂಗಳವಾರ ಶ್ರದ್ಧಾಭಕ್ತಿಯಿಂದ ನಡೆಯಿತು.
ಕೋಟೆಯ ತುಂಗಭದ್ರಾ ನದಿ ತೀರದಲ್ಲಿ ಗಂಗೆ ಪೂಜೆ ನೆರವೇರಿಸಿದ ಬಳಿಕ ವೆಂಕಟರಮಣ ದೇವಸ್ಥಾನದಿಂದ ಮೆರವಣಿಗೆ ಆರಂಭವಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ಬಳಿಕ ದೇವಸ್ಥಾನಕ್ಕೆ ತಲುಪಿ ಸಂಪನ್ನಗೊಂಡಿತು.
ಮೆರವಣಿಗೆಯಲ್ಲಿ ತಾಷಾ, ಡೊಳ್ಳು ಕುಣಿತ, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಗಮನ ಸೆಳೆದವು. ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗಂಗಾಮತ ಸಮಾಜದ ಗೌರವಾಧ್ಯಕ್ಷ ಗಂಜಿ ಹನುಮಂತಪ್ಪ, ಕಂಬತ್ ಕೃಷ್ಣ, ದೇವಸ್ಥಾನ ಸಮಿತಿ ಅಧ್ಯಕ್ಷ ಅಡ್ಡಪ್ಪ ತಿಮ್ಮಪ್ಪ, ಸದಸ್ಯ ರಮೇಶ್ ಕಂಬತ್, ಮುಖಂಡರಾದ ಸೆರೆಗಾರ ನಾಗರಾಜ, ಕಟ್ಟೆ ಸಣ್ಣ ದುರುಗಪ್ಪ, ಕಟ್ಟೆ ವೀರಣ್ಣ ಸೂಗೂರ್, ಕಟ್ಟೆ ವೀರೇಶ್, ಸೆರೆಗಾರ ಕೃಷ್ಣ, ಬಿ. ರಮೇಶ್, ಬಾಗಿಲೆ ಮಂಜು, ಕಂಬತ್ ಧನರಾಜ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.