ಇಂಡಿ

ಗ್ರಾಮೀಣ ಪ್ರತಿಭೆ ಹೊರಹೊಮ್ಮಲು ಕ್ರೀಡಾಕೂಟ ಒಂದು ಪ್ರಯತ್ನ

ಗ್ರಾಮೀಣ ಪ್ರತಿಭೆ ಹೊರಹೊಮ್ಮಲು ಕ್ರೀಡಾಕೂಟ ಒಂದು ಪ್ರಯತ್ನ

ಕ್ಷೇತ್ರ ಸಮನ್ವಯಾಧಿಕಾರಿ ಎಸ್‌.ಆರ್ ನಡಗಡ್ಡಿ ಹೇಳಿಕೆ: ಲಚ್ಯಾಣ ವಲಯ ಮಟ್ಟದ ಪ್ರಾ.ಶಾಲೆಗಳ ಕ್ರೀಡಾಕೂಟ 

ಇಂಡಿ 07: ಗ್ರಾಮೀಣ ಪ್ರತಿಭೆ ಹೊರಹೊಮ್ಮಲು ವಲಯ ಮಟ್ಟದ ಗ್ರಾಮೀಣ  ಕ್ರೀಡಾಕೂಟ ಒಂದು ಪ್ರಯತ್ನವಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಸ್‌.ಆರ್ ನಡಗಡ್ಡಿ ಹೇಳಿದರು. 

ಶನಿವಾರ ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ ನಡೆದ 2022-23 ಸಾಲಿನ ಲಚ್ಯಾಣ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಕಾರ‌್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಮಕ್ಕಳ ಆಸಕ್ತಿ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಕ್ರಿಡೆಗಳಿಗೆ ಆದ್ಯತೆ ನೀಡಬೇಕು, ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಿಂಚಲಿ ಎಂದರು.  

ಶಿಕ್ಷಕ ಎ.ಎಸ್ ಲಾಳಸೇರಿ ಮಾತನಾಡಿ, ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಎಂಬಂತೆ ಮೊದಲು ಶರೀರ ಸದೃಢವಾಗಿದ್ದರೆ ಮಾತ್ರ ಮನಸ್ಸು ಸದೃಢವಾಗುತ್ತದೆ. ಎರಡು ವರ್ಷಗಳಿಂದ ಕರೋನ ರೋಗದ ಪರಿಣಾಮ ಯಾವುದೇ ಕ್ರೀಡೆಗಳು ನಡೆಯದೆ ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿ ತೋರುತ್ತಿರಲಿಲ್ಲ. ಇಂದು ಅದೇ ಮಕ್ಕಳು ಅತ್ಯಂತ ಉತ್ಸುಕರಾಗಿದ್ದು, ಕ್ರೀಡೆಯಲ್ಲಿ ನಿಮ್ಮ ಪ್ರತಿಭೆಯನ್ನು ಹೊರಹಾಕಿ ಮುಂದೆ ತಾಲುಕಾ, ಜಿಲ್ಲಾ, ರಾಜ್ಯ ಮಟ್ಟಕ್ಕೂ ಆಯ್ಕೆಯಾಗಿ ನಿಮ್ಮ ಪಾಲಕರ, ಶಿಕ್ಷಕರ, ತಾಲೂಕು, ಜಿಲ್ಲೆಯ ಹೆಸರನ್ನು ತರುತ್ತೀರಿ ಎಂದು ನನಗೆ ವಿಶ್ವಾಸವಿದೆ ಎಂದರು. 

ಕಾರ‌್ಯಕ್ರಮದ ದಿವ್ಯ ಸಾನಿಧ್ಯವನ್ನು ಹಿರೇಬೇವನೂರ ಗ್ರಾಮದ ದಯಾನಂದ ಹಿರೇಮಠ ವಹಿಸಿಕೊಂಡು ಮಕ್ಕಳಿಗೆ ಆಶೀರ್ವಚನ ನೀಡಿದರು. 

ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ವಿ.ಜಿ. ಕಲ್ಮನಿ ವಹಿಸಿದ್ದರು. 

ಕಾರ‌್ಯಕ್ರಮದಲ್ಲಿ ಅಂತರಾಷ್ಟ್ರೀಯ ಅಥ್ಲೇಟಿಕ್ ಕ್ರೀಡಾಪಟು ರಾಜೇಶ ಪವಾರ, ಪಿ.ಜಿ ಕಲ್ಮನಿ, ಸಾಹೇಬಗೌಡ ಬಿರಾದಾರ, ರಮೇಶ ತಮಶೆಟ್ಟಿ, ಎಸ್‌.ಬಿ. ಕಲ್ಲೊಳ್ಳಿ, ಧಶರಥ ಕೋರೆ, ತುಕಾರಾಮ ಹೊಸಮನಿ, ಶಾಂತಪ್ಪ ಸೋಲಾಪೂರ, ಬಿ.ಆರ್‌.ಪಿ. ಎಸ್‌.ಎ. ಹಿಪ್ಪಳಿ, ಆರ್‌.ಸಿ. ಮೇತ್ರಿ, ಆರ್‌.ಆರ್‌. ಬಗಲೂರ, ಪ್ರವೀಣ ಉಪ್ಪಿನ, ರಾಜು ಪಡನೂರ, ಮಾಯಪ್ಪ ಪರಗೊಂಡ, ನಿಂಗಪ್ಪ ತಾಂಬೆ, ಗ್ರಾ.ಪಂ ಸದಸ್ಯ  ಧರೆಪ್ಪ ಕಲ್ಮನಿ, ಪರಶುರಾಮ ಶಿವಶರಣ, ಮಂಜು ಜಮಾದಾರ, ಜಯರಾಮ ಚವ್ಹಾಣ, ರವಿ ನಾರಾಯಣಪೂರ, ಅರವಿಂದ ಮೈದರಗಿ, ಅಯ್ಯಣಗೌಡ ಬಿರಾದಾರ, ಶ್ರೀದೇವಿ ಕಲ್ಮನಿ, ವಿ.ಜಿ. ಚವ್ಹಾಣ, ಶಿವಚಾನಂದ ಕಲ್ಮನಿ, ವಿ.ಆರ್ ತುಕಾರಾಮ, ಸಚಿನ್ ಅಡಿಗುಂಡಿ, ಪ್ರಕಾಶ ಕಲ್ಮನಿ, ಕಿರಣ ಗೌಡ, ಪವನ ಕಾಂಬಳೆ, ಸಾಬಲಾಲಸಾಹೇಬ ಮಕಾಂದಾರ, ಲಕ್ಕಪ ಕರಜಗಿ, ಬೀರು ಸಂಗೋಗಿ, ಜೆ.ಎ. ಬಿರಾದಾರ, ಎಸ್‌.ಎಮ್‌. ಭಾಷಗಿ, ಬಿ.ಕೆ. ಉಕಲಿ, ನಯನತಾರಾ ಸುನೀಲ, ಬಿ.ಎಸ್‌. ನಾಟೀಕಾರ, ಅನಿತಾ ಗೌಡ, ರಾಜೇಶ್ವರಿ ಗೌಡ, ರಾಜಶ್ರೀ ಸಂಗಮ್, ಫೆಬಾ ಶ್ಯಾಮ್, ಪುಷ್ಪಾ ಬಾಬಳಗಾಂವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ