ಸಿಎಂ ಕಾರ್ಯಕ್ರಮ ಸಿದ್ಧತೆ ಪರೀಶೀಲಿಸಿದ ಜಿಲ್ಲಾಧಿಕಾರಿ: ವಿಜಯಮಹಾಂತೇಶ
ಲೋಕದರ್ಶನ ವರದಿ
ತಾಳಿಕೋಟಿ 24: ತಾಲೂಕಿನ ಕೊಡಗಾನೂರದಲ್ಲಿ ಬೂದಿಹಾಳ-ಪೀರಾಪೂರ ಏತ ನೀರಾವರಿಯ ಯೋಜನೆಯ ಹಂತ -01 ಪೈಪ್ ವಿತರಣಾ ಜಾಲದ ಕಾಮಗಾರಿ ಭೂಮಿ ಪೂಜೆ ಸಮಾರಂಬಕ್ಕೆ ಎಪ್ರೀಲ 26ರಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಿದ್ದು, ಇದರ ಪೂರ್ವ ಸಿದ್ಧತೆಯನ್ನು ಜಿಲ್ಲಾಧಿಕಾರಿಗಳಾದ ವಿಜಯಮಹಾಂತೇಶ ದಾನಮ್ಮನವರ ಪರೀಶೀಲಿಸಿದರು.
ಕಾರ್ಯಕ್ರಮ ಸ್ಥಳಕ್ಕೆ ಇಂದು ಭೇಟಿ ನೀಡಿದ ಅವರು ಸಮಾವೇಶದ ವೇದಿಕೆ, ಹೆಲಿಪ್ಯಾಡ ಸ್ಥಳ, ಭೋಜನದ ವ್ಯವಸ್ಥೆ, ಪಾರ್ಕಿಂಗ ವ್ಯವಸ್ಥೆ, ಇತ್ಯಾದಿಗಳ ಸಿದ್ಧತೆ ಕುರಿತು ಸಂಭಧಿಸಿದ ಅಧಿಕಾರಿಗಳಿಂದ ಸಂಪೂರ್ಣ ವಿವರಗಳನ್ನು ಪಡೆದುಕೊಂಡರು.
ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಈ ಸಮಾವೇಶಕ್ಕೆ ಮಾನ್ಯ ಮುಖ್ಯ ಮಂತ್ರಿಗಳು ಆಗಮಿಸುತ್ತಿದ್ದು ಕಾರ್ಯಕ್ರಮದಲ್ಲಿ ಯಾವುದೆ ರೀತಿಯ ಲೋಪಗಳು ಆಗದಂತೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಎಲ್ಲಾ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಇನ್ನೂ ಕೇಲವು ನಡೆಯಬೇಕಾಗಿದೆ. ಆದಷ್ಟು ಬೇಗ ಪೂರ್ಣಗೋಳಿಸಲು ಆದೇಶಿಸಿದ್ದೆನೆ.
ಶಾಸಕ ಸೋಮನಗೌಡ ಪಾಟೀಲ ಮಾತನಾಡಿ ಈ ಭಾಗದ ರೈತರ ಬಹು ದಿನಗಳ ಕನಸಿನ ಯೊಜನೆಯಾದ ಬೂದಿಹಾಳ-ಪೀರಾಪೂರ ಯೋಜನೆ ಕಾಮಗಾರಿಗೆ ಮಾನ್ಯ ಮುಖ್ಯ ಮಂತ್ರಿಗಳು ಶಂಕು ಸ್ಥಾಪನೆ ನೇರವೇರಿಸಲಿದ್ದಾರೆ, ಈ ಕಾರ್ಯಕ್ರಮ ಈ ಭಾಗದ ಒಂದು ಐತಿಹಾಸಿಕ ಕಾರ್ಯಕ್ರಮ ವಾಗಲಿದೆ. ಸಮಾವೇಶಕ್ಕೆ ಸೂಮಾರು 25 ಸಾವಿರ ರೈತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್. ಡಿ. ಆನಂದಕುಮಾರ ಅವರು ಈ ಸಮಾವೇಶದ ಭದ್ರತೆಗಾಗಿ ಈ ಸಧ್ಯಕ್ಕೆ 5 ಡಿವೈ.ಎಸ್ಪಿ , 10 ಸಿಪಿಐ, 25 ಎಸ್ಐ, ಹಾಗೂ 500 ಜನ ಸಿಬ್ಬಂಧಿಗಳನ್ನು ಆಯೋಜಿಸುತ್ತಿದ್ದೇವೆ. ಯಾವುದೆ ರೀತಿಯ ಅಡೆತಡೆಗಳು ಆಗದಂತೆ ಸೂಕ್ತ ಬಂದೋಬಸ್ತ ಒದಗಿಸುತ್ತೇವೆ ಎಂದರು.
ಈ ಸಂಧರ್ಬದಲ್ಲಿ ಹೆಚ್ಚುವರಿ ಜಿಲ್ಲಾ ಪೋಲೀಸ ಅಧಿಕಾರಿ ಡಾಽಽ ರಾಮ ಅರಸಿದ್ಧಿ, ಜಿ. ಪಂ. ಸಿಓ, ರಾಹುಲ ಸಿಂಧೆ, ತಹಶೀಲ್ದಾರ ಅನೀಲಕುಮಾರ ಢವಳಗಿ, ಇಓ ಬಸನಗೌಡ ಬಿರಾದಾರ, ಡಿವೈ ಎಸ್ಪಿ ಅರುಣಕುಮಾರ ಕೊಳೂರು, ಕೆಬಿಜೆಎನ್ಎಲ್ ಇಇಬಿಜಿ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಸಿಪಿಐ ಆನಂದ ವಾಗ್ಮೋಡೆ, ಪಿಎಸ್ಐ ವಿನೋದ ದೊಡಮನಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ), ಸಂಗನಗೌಡ ಹೆಗರೆಡ್ಡಿ, ಪ್ರಶಾಂತ ಹಾವರಗಿ, ಮುತ್ತುಗೌಡ ಮಾಳಿ, ಮೋಹನಗೌಡ ಹಿರೇಗೌಡರ, ಎಇಇ ಆರ್ ಎಂ ಹುಂಡೇಕಾರ, , ಕೊಡಗಾನೂರ ಗ್ರಾ. ಪಂ. ಅದ್ಯಕ್ಷ ಬಸನಗೌಡ, ನಿಂಗನಗೌಡ ಬಿರಾದಾರ, ಜಿ.ಪಂ ಮಾಜಿ ಸದಸ್ಯ ಸಾಹೇಬಣ್ಣ ಆಲ್ಯಾಳ, ಹಣಂತ್ರಾಯ ಢವಳಗಿ, ಇದ್ದರು.