ಕಾರವಾರ

ಅಗ್ನಿಶಾಮಕ ಕಚೇರಿಗೆ ಡಿಜಿಪಿ ಡಾ. ಅಮರ ಕುಮಾರ ಪಾಂಡೆ ಭೇಟಿ

ಅಗ್ನಿಶಾಮಕ ಕಚೇರಿಗೆ ಡಿಜಿಪಿ ಡಾ. ಅಮರ ಕುಮಾರ ಪಾಂಡೆ ಭೇಟಿ


ಕಾರವಾರ: ರಾಜ್ಯ ಗೃಹರಕ್ಷಕದಳ ಮತ್ತು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಯ ರಾಜ್ಯ ಪೋಲಿಸ್ ಮಹಾನಿರ್ದೇಶಕ ಡಾ. ಅಮರ್ ಕುಮಾರ್ ಪಾಂಡೆಯವರು ಇಲ್ಲಿನ ಅಗ್ನಿಶಾಮಕ ಕಚೇರಿಗೆ ಭೇಟಿ ನೀಡಿದರು. 

 ಅಗ್ನಿಶಾಮಕ ಹಾಗೂ ಗೃಹರಕ್ಷಕದಳದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಡಿಜಿಪಿಯವರು,  ನೆರೆ, ಪ್ರವಾಹ ಹಾಗೂ ಯಾವುದೇ  ಪ್ರಕೃತಿ ವಿಕೋಪಗಳನ್ನು ಎದುರಿಸಲು ಅಗ್ನಿಶಾಮಕ ಪಡೆಯು ಸನ್ನದ್ಧವಾಗಿರಬೇಕು. ಜಿಲ್ಲೆಯಲ್ಲಿ ಅಗ್ನಿಶಾಮಕ ದಳ ಕಾರ್ಯವೈಖರಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಅವರು ಇದಕ್ಕೆ ಸಂಬಂಧಿಸಿದಂತೆ ಕೆಲ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. 

ಇನ್ನು ಜಿಲ್ಲೆಯ ಗೃಹರಕ್ಷಕದಳದ ಬಗ್ಗೆ ಮಾಹಿತಿಯನ್ನು ಪಡೆದ ಡಿಜಿಪಿ ಡಾ. ಅಮರ್ ಕುಮಾರ್ ಪಾಂಡೆ, ಕೊವಿಡ್-19 ಸಂಕಷ್ಟದ ಸಮಯದಲ್ಲಿ ಗೃಹರಕ್ಷಕರ ಕರ್ತವ್ಯವನ್ನು ಪ್ರಶಂಸಿದರು. ಜಿಲ್ಲೆಯಲ್ಲಿ ಖಾಲಿ ಇರುವ ಗೃಹರಕ್ಷಕರ ಹುದ್ದೆಯನ್ನು ಭರ್ತಿ ಮಾಡುವಂತೆ ಸೂಚಿಸಿದರು. ಜಿಲ್ಲಾ ಗೃಹರಕ್ಷಕದಳದ ಕಚೇರಿಯಲ್ಲಿ ಖಾಲಿ ಇರುವ ಖಾಯಂ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದಕ್ಕೂ ಮುಂಚೆ ಅಗ್ನಿಶಾಮಕ ಕಚೇರಿಯಲ್ಲಿದ್ದ ರೆಸ್ಕ್ಯೂ ಇಕ್ಯೂಪಮೆಂಟ್ಸ್, ಲೈಫ್ ಜಾಕೇಟ್, ಬೋಟ್‍ಗಳನ್ನು ಪರಿಶೀಲಿಸಿದರು. 

ಈ ಸಂದರ್ಭದಲ್ಲಿ ಮಂಗಳೂರು ಪ್ರಾಂತ್ಯದ ಮುಖ್ಯ ಅಗ್ನಿಶಾಮಕದಳ ಅಧಿಕಾರಿ ತಿಪ್ಪೇಸ್ವಾಮಿ ಜಿ, ಹೆಚ್ಚುವರಿ ಪೋಲಿಸ್ ಅಧೀಕ್ಷಕ ಎಸ್.ಬದ್ರಿನಾಥ್, ಗೃಹರಕ್ಷಕದಳದ ಜಿಲ್ಲಾ ಕಮಾಂಡೇಂಟ್ ದೀಪಕ ಗೋಕರ್ಣ, ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ಮಂಜುನಾಥ ಸಾಲಿ ಹಾಗೂ ಇನ್ನಿತರರು ಇದ್ದರು.

ಸುದ್ದಿ ಓದಿ