ಇಂದು ತುಂಗಭದ್ರ ಜಲಾಶಯಕ್ಕೆ 75ರ ಸಂಭ್ರಮಾಚರಣೆ: ಪುರುಷೋತ್ತಮಗೌಡ
ಬಳ್ಳಾರಿ 27:ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ರೈತರ ಜೀವನಾಡಿ ತುಂಗಭದ್ರ ಜಲಾಶಯಕ್ಕೆ ಗುರುವಾರ 75ರ ಸಂಭ್ರಮ ನಡೆಯಲಿದೆ. ರಾಜ್ಯದ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಯ ಹಾಗೂ ಆಂಧ್ರಪ್ರದೇಶದ ಅನಂತಪುರಂ, ಕನರ್ೂಲು ಜಿಲ್ಲೆಯ ಕೆಲಭಾಗಕ್ಕೆ ನೀರುಣಿಸುವ ತುಂಗಭದ್ರ ಜಲಾಶಯ ನಿರ್ಮಿಸಿ 74 ವಸಂತಗಳನ್ನು ಕಳೆದು ಗುರುವಾರಕ್ಕೆ 75ನೇ ವರ್ಷಕ್ಕೆ ಪಾದರ್ಪಣೆ ಮಾಡಲಿದೆ.
ಈ ಸಂದರ್ಭದಲ್ಲಿ ಜಲಾಶಯ ನಿಮರ್ಾಣಕ್ಕೆ ಶ್ರಮಿಸಿದ ಇಂಜಿನೀಯರ್ ಅಯ್ಯಂಗಾರವರ ಪ್ರಥಿಮೆಗೆ ಹೂಮಾಲೆಯನ್ನು ಹಾಕಿ ಪೂಜೆಸಲ್ಲಿಸಿ ಗೌರವಿಸಲಿದ್ದೇವೆ ಎಂದು ತುಂಗಭದ್ರ ರೈತಸಂಘದ ಅಧ್ಯಕ್ಷ ಪುರುಷೋತ್ತಮಗೌಡ ದರೂರು ತಿಳಿಸಿದರು. ಅವರು ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ ಆಂಧ್ರ ಮತ್ತು ಕನರ್ಾಟಕ ರಾಜ್ಯಗಳ ಜೀವನಾಡಿಯಾದ ತುಂಗಭದ್ರ ಜಲಾಶಯಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸಿ ಅಯ್ಯಂಗಾರ ಪ್ರಥಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಾವಿರಾರು ರೈತರು ಗೌರವ ಸಲ್ಲಿಸಲಿದ್ದಾರೆ. ಈ ಕುರಿತಂತೆ ಆಂಧ್ರ, ಕನರ್ಾಟಕ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಹಾಗೂ ಸಂಸದ ಮತ್ತು ಸಚಿವರೊಂದಿಗೆ 75ರ ಸಂಭ್ರಮದ ಬಗ್ಗೆ ವಿವರಿಸಿ ಹೂಳಿನ ಸಮಸ್ಯ ನಿವಾರಣೆ ಬಗ್ಗೆ ಸಮಾಲೋಚೆನೆ ನಡೆಸಲಿದ್ದೇನೆ ಜೊತೆಗೆ ಇಲ್ಲಿಯವರೆಗೆ ತುಂಗಭದ್ರ ಜಲಾಶಯದಲ್ಲಿ ಕಾರ್ಯನಿರ್ವಹಿಸಿದ ಇಂಜಿನೀಯರ್ ಗಳಿಗೂ ಸಹ ಸನ್ಮಾನಿಸುವ ಉದ್ದೇಶವಿದೆ.
ಈ ಕಾರ್ಯಕ್ರಮದ ರೂಪರೇಷೆಗಳನ್ನು ಅತೀ ಶೀಘ್ರದಲ್ಲೇ ಕಾರ್ಯಕ್ರಮವನ್ನು ರೂಪಿಸಲಿದ್ದೇನೆ ಎಂದು ಕೇಳಿದ ಪ್ರಶ್ನೆಗೆ ಉತ್ತಿರಿಸಿದರು. ಈ ಸಂದರ್ಭದಲ್ಲಿ ರೈತಸಂಘದ ಹಲವಾರು ಮುಖಂಡರುಗಳು ಈ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.