ಸ್ವಾಮಿ ವಿವೇಕಾನಂದರ 159ನೇ ಜಯಂತಿ ಆಚರಣೆ
ಲೋಕದರ್ಶನ ವರದಿ
ಶಿಗ್ಗಾವಿ 12: ಸ್ವಾಮಿ ವಿವೇಕಾನಂದರೂ ಬಹುಷಃ ಬೇರಾವ ಸಾಧು, ಸನ್ಯಾಸಿಯೂ ಕೂಡಾ ವಿವೇಕಾನಂದರಂತೆ ತಮ್ಮ ಸಾಧನಾ ಪಥದಲ್ಲಿ ರಾಷ್ಟ್ರಭಕ್ತಿಯನ್ನು ವ್ಯಕ್ತಪಡಿಸಿಲ್ಲ ಎಂದು ತಾಲೂಕ ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.
ಪಟ್ಟಣದ ಮುಖ್ಯಮಂತ್ರಿಗಳ ಸಂಪರ್ಕ ಕಾರ್ಯಾಲಯದಲ್ಲಿ ಕೋವಿಡ್ 19 ರ ಹಿನ್ನಲೆಯಲ್ಲಿ ಸರಳವಾಗಿ ಸ್ವಾಮಿ ವಿವೇಕಾನಂದರ 159 ನೇ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಭಾರತೀಯರು ನಮ್ಮ ಸಹೋದರರು, ಭಾರತೀಯರು ನಮ್ಮ ಪ್ರಾಣ, ಭಾರತದ ಶುಭವೇ ನಮ್ಮ ಶುಭ ಎಂದು ಅಂತರಾಳದಿಂದ ಹೇಳಿದ ಮೇಧಾವಿ ವಿವೇಕಾನಂದರು ಎಂದರು.
ಪುರಸಭೆ ಸದಸ್ಯ ಸಿದ್ದಾರ್ಥಗೌಡ ಪಾಟೀಲ ಮಾತನಾಡಿ ಅತಿ ಹೆಚ್ಚು ಯುವ ಜನತೆಯನ್ನು ಹೊಂದಿದ ದೇಶ ಭಾರತ ಆದರೆ ಮುಂದಿನ ದಿನಮಾನಗಳಲ್ಲಿ ಭಾರತದ ಭವಿಷ್ಯ ಯುವಜನತೆಯ ಮೇಲಿದೇ ಎಂದರು.
ಯುವ ಮೋರ್ಚಾ ಅಧ್ಯಕ್ಷ ಶಿವರಾಜ ರಾಯಣ್ಣವರ ಮಾತನಾಡಿ ನಮ್ಮ ಯುವಜನತೆಗೆ ರಾಷ್ಟ್ರೇ್ರಮ, ರಾಷ್ಟ್ರಭಕ್ತಿಯನ್ನು ಮೂಡಿಸುವಂತಹ ಕಾರ್ಯಾಗಾರಗಳು ಅಥವಾ ತರಬೇತಿಗಳು ಹೆಚ್ಚು ಹೆಚ್ಚು ಆಗಬೇಕು ಎಂದರು.
ಡಾ. ಮಲ್ಲೇಶಪ್ಪ ಹರಿಜನ ಮಾತನಾಡಿ ಯುವ ಜನಾಂಗ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರು, ವೀರ ಯೋಧರ ಜೀವನವನ್ನು ಅಧ್ಯಯನ ಮಾಡುವ ಶಿಕ್ಷಣ ವ್ಯವಸ್ಥೆ ನಿರ್ಮಾಣವಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಹನುಮಂತಪ್ಪ ಮಾದರ, ಸಂಜನಾ ರಾಯ್ಕರ್, ಪ್ರತೀಕ ಕೊಳೇಕರ, ವಿನಯ ಮುಂಡಗೋಡ, ಕಾಶೀನಾಥ ಕಳ್ಳೀಮನಿ, ಚೇತನ ಕಲಾಲ, ಚಂದ್ರು ರಾಂಪೂರಮಠ, ನಂದೀಶ ಲಂಡೆತ್ತಿನವರ, ಸಚಿನ ಮಡಿವಾಳರ, ಮಲ್ಲಿಕಾರ್ಜುನ ಹಡಪದ, ಮುನ್ನಾ ಬಿಸ್ತಿ, ಸುರೇಶ ಮೂಡಣ್ಣವರ, ಎನ್.ಆರ್.ಪಾಟೀಲ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.