ಶಿಗ್ಗಾವ್

ದಿ. ಮುತ್ತಪ್ಪ ರೈ ಹುಟ್ಟು ಹಬ್ಬದ ನಿಮಿತ್ತ ಮಾಸ್ಕ್ ಹಂಚಿಕೆ

ದಿ. ಮುತ್ತಪ್ಪ ರೈ ಹುಟ್ಟು ಹಬ್ಬದ ನಿಮಿತ್ತ ಮಾಸ್ಕ್ ಹಂಚಿಕೆ

ಶಿಗ್ಗಾವಿ 04: ಪಟ್ಟಣದಲ್ಲಿ ಜಯಕನರ್ಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ದಿ. ಮುತ್ತಪ್ಪ ರೈ ಅವರ 69ನೇ ಹುಟ್ಟು ಹಬ್ಬವನ್ನು ರಾಜೀವ ನಗರದಲ್ಲಿ ಮಸ್ಕ್ ಹಂಚಿ ನಂತರ ಶಿಗ್ಗಾವಿ ಪದಾಧಿಕಾರಿಗಳು ಸರಳವಾಗಿ ಮನೆಯಲ್ಲಿಯೇ ಕೇಕ್ ಕತ್ತರಿಸಿ ಆಚರಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಜಯಕನರ್ಾಟಕ ಸಂಘಟನೆಯ ಶಿಗ್ಗಾವಿ ತಾಲೂಕಾಧ್ಯಕ್ಷ ದುರಗಪ್ಪ ವಡ್ಡರ, ಅಣ್ಣ ಮುತ್ತಪ್ಪ ರೈ ಅವರ ಹುಟ್ಟು ಹಬ್ಬದ ದಿನದಂದು ಪ್ರತಿವರ್ಷ ಒಂದಿಲ್ಲೋಂದು ಆರೋಗ್ಯ ಶಿಬಿರ, ರಕ್ತದಾನ ಸೇರಿದಂತೆ ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡಲಾಗುತ್ತಿತ್ತು ಆದರೆ ಈಗ ಮಹಾಮಾರಿ ಕೊರೋನಾದಂತಹ ಸೋಂಕು ಹರಡುವಿಕೆಯನ್ನು ತಡೆಯಲು ಸರಕಾರ ಲಾಕ್ಡೌನ್ ಮಾರ್ಗಸೂಚಿ ಪಾಲಿಸಬೇಕಾಗಿದ್ದು ಆದ್ದರಿಂದ ಇಂದು ಮನೆಯಲ್ಲಿಯೇ ಮಾರ್ಗಸೂಚಿಯನ್ವಯ ಮಾಸ್ಕ್ ಹಾಕಿ, ಸರಳವಾಗಿ ಆಚರಿಸಲಾಗಿದೆ ಎಂದರು.  ಪ್ರಧಾನ ಕಾರ್ಯದಶರ್ಿ ಹನುಮಂತ ಬಂಡಿವಡ್ಡರ ಸೇರಿದಂತೆ ಇತರ ಗ್ರಾಮ ಘಟಕಗಳ ಪದಾಧಿಕಾರಿಗಳು ಇದ್ದರು.

ಸುದ್ದಿ ಓದಿ