ದಿ.ಕೆ. ಎಫ್. ಪಾಟೀಲ್ ಪುಣ್ಯಸ್ಮರಣೆ
ರಾಣೆಬೆನ್ನೂರು 29: ಧನ,ಕನಕ, ಆಸ್ತಿ ಅಂತಸ್ತು ಎಲ್ಲವನ್ನು ಗಳಿಸಬಹುದು ಆದರೆ ವಿದ್ಯೆ ಗಳಿಸುವುದು ಸುಲಭವಲ್ಲ,, ಒಂದು ಸಾರಿ ಪರಿಪೂರ್ಣ ವಿದ್ಯೆ ಕಲಿತರೆ ಅದು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಕೆ. ಎಫ್.ಪಾಟೀಲ್ ಚಾರಿಟೇಬಲ್ ಟ್ರಸ್ಟ್ ಸದಸ್ಯ ಡಾ : ರವಿ ಗುತ್ತಲ ಹೇಳಿದರು. ಅವರು ಸ್ಥಳಿಯ ರಾಜರಾಜೇಶ್ವರಿ ಕಾಲೇಜು ಭವನದಲ್ಲಿ ನಡೆದ ಲಿಂ, ಪಾಟೀಲ್ ಜಿ ಅವರ 27ನೇ ಪುಣ್ಯಸ್ಮರಣೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರತಿಭಾಸಂಪನ್ನರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಮುದ್ದೆ ಕಲಿಯಲು ಕಷ್ಟ ಪಡುವುದು ಬೇಡ ಆದರೆ ಇಷ್ಟಪಟ್ಟು ದೂರದೃಷ್ಟಿ ಇಟ್ಟುಕೊಂಡು ಸತತ ಪರಿಶ್ರಮದಿಂದ ವಿದ್ಯೆ ಕಲಿತರೆ ಅದು ಶಾಶ್ವತವಾಗಿ ನಿಮ್ಮೊಂದಿಗೆ ಇರುತ್ತದೆ ವಿದ್ಯೆ ಯಾರು ಕಸಿದುಕೊಳ್ಳುವ ವಸ್ತುವಲ್ಲ. ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಆಡಳಿತ ಮಂಡಳಿಯ ಉಪಾಧ್ಯಕ್ಷ, ವಿ.ಪಿ. ಲಿಂಗನಗೌಡ್ರ ಮಾತನಾಡಿ, ಅಂದಿನ ಸ್ವಾತಂತ್ರ್ಯಯೂಧರಾಗಿದ್ದ, ಪಾಟೀಲ್ ಜಿ ಯವರು ತಮ್ಮ ಜೀವನದುದ್ದಕ್ಕೂ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿಯೇ ತ್ಯಾಗ ಮಾಡಿದ ಮಹಾನ್ ವ್ಯಕ್ತಿ. ಅಂದು ಅವರು ಕಂಡ ಶಿಕ್ಷಣದ ಕನಸು ಇಂದು ಸಂಪೂರ್ಣವಾಗಿ ನನಸಾಗಿದೆ. ಅವರ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ, ಮತ್ತು ವಿದ್ಯಾಥರ್ಿ ಶಿಕ್ಷಣ ಸಹಾಯಧನ ನೀಡುವ ಯೋಜನೆಯನ್ನು ರೂಪಿಸಲಾಗಿದ್ದು ಅರ್ಹರಿಗೆ ಮತ್ತು ಅಗತ್ಯವುಳ್ಳವರಿಗೆ ನೀಡಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಪಾಟೀಲ್ ಜಿ ಅವರ ಪ್ರಬಂಧ ಸ್ಪಧರ್ೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸದಸ್ಯರಾದ ವೀರಣ್ಣ ಅಂಗಡಿ, ಬಸವರಾಜಪ್ಪ ಪಟ್ಟಣಶೆಟ್ಟಿ, ಪ್ರಾಚಾರ್ಯ ನಾರಾಯಣ ನಾಯಕ ಎ, ಎಫ್ಎನ್.ಗುಡಿಕಟ್ಟಿ, ಪಿ. ಪ್ರಹ್ಲಾದ್, ಅನಿಲ್ ದಂಡಗಿ, ಸುಧಾ ಕೋಟಿಹಾಳ, ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು, ಶಿಕ್ಷಕರು ಶಿಕ್ಷಕಿಯರು ಸಿಬ್ಬಂದಿ ಉಪಸ್ಥಿತರಿದ್ದರು. ನಂದಾ ಚೋಳೇನಹಳ್ಳಿ ಪ್ರಾರ್ಥಿಸಿದರು, ಪ್ರೊ : ವೀರೇಶ್ ಕುರಹಟ್ಟಿ ಸ್ವಾಗತಿಸಿದರು. ಪ್ರೂ : ಕೃಷ್ಣ ಎಲ್. ಹೆಚ್. ನಿರೂಪಿಸಿದರು. ಪ್ರೊ : ಶೋಭಾ ದೊಡ್ಡನಹಳ್ಳಿ ವಂದಿಸಿದರ