ಶಿಗ್ಗಾವ್

ತಹಶೀಲ್ದಾರ ಸಂತೋಷ ಹಿರೇಮಠ ವರ್ಗಾವಣೆ ರದ್ದುಗೊಳಿಸಿ: ದಲಿತ ಸಂಘರ್ಷ ಸಮೀತಿ

ತಹಶೀಲ್ದಾರ ಸಂತೋಷ ಹಿರೇಮಠ ವರ್ಗಾವಣೆ ರದ್ದುಗೊಳಿಸಿ: ದಲಿತ ಸಂಘರ್ಷ ಸಮೀತಿ

ಶಿಗ್ಗಾವಿ 15: ಶಿಗ್ಗಾವಿ ತಹಶೀಲ್ದಾರ ಸಂತೋಷ ಹಿರೇಮಠ ಅವರು ದಕ್ಷ ಅಧಿಕಾರಿಯಾಗಿದ್ದು ಅವರ ವರ್ಗಾವಣೆಯನ್ನು ರದ್ದುಗೊಳಿಸಿ ಮರಳಿ ಅವರನ್ನೆ ಮುಂದುವರೆಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮೀತಿ ತಾಲೂಕಾ ಸಮೀತಿ ವತಿಯಿಂದ ಸಿಎಂ ಸಿದ್ದರಾಮಯ್ಯನವರಿಗೆ ಶುಕ್ರವಾರ ಮನವಿ ನೀಡಿ ಒತ್ತಾಯಿಸಲಾಯಿತು.  

ಸಂತೋಷ ಹಿರೇಮಠ ಅವರು ಯಾವುದೇ ಒಂದು ಪಕ್ಷಕ್ಕೆ ಅಂಟಿಕೊಂಡು ಕೆಲಸ ನಿರ್ವಹಿಸುತ್ತಿಲ್ಲ, ಪಕ್ಷಾತೀತವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಹೀಗಾಗಿ ಅವರನ್ನೆ ಮುಂದುವರೆಸಿ ಇಲ್ಲವಾದರೆ ಪಟ್ಟಣದ ನೂತನ ಡಾ. ಬಿ ಆರ್ ಅಂಬೇಡ್ಕರ್ ಆಡಳಿತ ಭವನದ ಎದುರು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಮನವಿಯಲ್ಲಿ ಒತ್ತಾಯಿಸಲಾಗಿದೆ. 

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಕರಿಯಪ್ಪ ಕಟ್ಟಿಮನಿ, ತಾಲೂಕಾದ್ಯಕ್ಷ ಹನುಮಂತಪ್ಪ ಮಾದರ, ಡಾ. ಮಲ್ಲೇಶಪ್ಪ ಹರಿಜನ, ಸುರೇಶ ಹರಿಜನ, ಸುರೇಶ ಮುಡೆಣ್ಣವರ, ಪರಶುರಾಮ್ ಹರಿಜನ, ಫಕ್ಕೀರ​‍್ಪ ಕುಂದೂರ, ಮಂಜುನಾಥ ಕಂಕನವಾಡ, ರಮೇಶ ಹರಿಜನ, ಶಂಕ್ರ​‍್ಪ ತೊಂಡೂರ, ಕರಿಯಪ್ಪ ಮಾದರ, ಬಸವರಾಜ ಹರಿಜನ, ನಿಂಗನಗೌಡ ಪಾಟೀಲ ಸೇರಿದಂತೆ ಇತರ ಮುಖಂಡರೂ ಇದ್ದರು. 


ಸುದ್ದಿ ಓದಿ