ಕಾರವಾರ

ದೇವಸ್ಥಾನ ಕಳ್ಳತನ: ವ್ಯಕ್ತಿ ಕಳ್ಳತನ

ದೇವಸ್ಥಾನ ಕಳ್ಳತನ: ವ್ಯಕ್ತಿ ಕಳ್ಳತನ

ಬನವಾಸಿ 30: ರಾತ್ರಿ ವೇಳೆ ದೇವಸ್ಥಾನ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಬನವಾಸಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ನನ್ನು ಹಾನಗಲ್ ತಾಲೂಕು ಶೃಂಗೇರಿಯ ಶ್ರೀಧರ ಯಲ್ಲಪ್ಪ ಬಂಡಿವಡ್ಡರ್ ಎಂದು ಗುರುತಿಸಲಾಗಿದೆ.   

ಇತ್ತೀಚೆಗೆ ಭಾಶಿಯ ಶ್ರೀ ಕಾಳಿಕಾಂಬಾ ದೇವಸ್ಥಾನ ಹಾಗೂ ಬದನಗೋಡ್‌ದ ಶ್ರೀ ಕಾನೇಶ್ವರ ದೇವಸ್ಥಾನದ  ಕಳ್ಳತನ ನಡೆಸಿದ್ದ. ಈ ಕುರಿತು ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತನಿಂದ ಬಂಗಾರದ ತಾಳಿಸರ, ಬಂಗಾರದ ಗುಂಡಿನ ಸರ ಹಾಗೂ ಇನ್ನಿತರ ವಸ್ತುಗಳನ್ನು ಸೇರಿದಂತೆ ? 23000 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಿರಸಿ ವೃತ್ತನೀರೀಕ್ಷಕ ರಾಮಚಂದ್ರ ನಾಯ್ಕ್‌ ಅವರ ನೇತೃತ್ವದಲ್ಲಿ ಬನವಾಸಿ ಠಾಣೆಯ ಪಿ.ಎಸ್‌.ಐ ಗಳಾದ ಹನುಮಂತ ಬಿರಾದರ, ಬಾಲಕೃಷ್ಣ ಪಾಲೇಕರ, ಸಿಬ್ಬಂದಿಗಳಾದ ಸಂತೋಷ ತಳವಾರ,ಮಂಜುನಾಥ. ಬಿ, ಶಿವರಾಜ್‌.ಎಸ್, ವಿನಾಯಕ ನಾಯ್ಕ್‌ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.ಪೋಟೊ: 30ಬನವಾಸಿ1: ದೇವಸ್ಥಾನಗಳ ಕಳ್ಳತನ ನಡೆಸುತ್ತಿದ್ದ ವ್ಯಕ್ತಿಯನ್ನು ಬನವಾಸಿ ಪೊಲೀಸರು ಬಂಧಿಸಿರುವುದು. 


ಸುದ್ದಿ ಓದಿ