ತಾಳಿಕೋಟಿ

ಸರ್ಕಾರಿ ಬಾಲಕರ ವಸತಿ ನಿಲಯಕ್ಕೆ ತಹಶೀಲ್ದಾರ ಶ್ರೀಧರ ಭೇಟಿ

ಸರ್ಕಾರಿ ಬಾಲಕರ ವಸತಿ ನಿಲಯಕ್ಕೆ ತಹಶೀಲ್ದಾರ ಶ್ರೀಧರ ಭೇಟಿ

ತಾಳಿಕೋಟಿ21: ಸಮೀಪದ ಕೊಡಗಾನೂರ ಗ್ರಾಮದಲ್ಲಿರುವ ಸರ್ಕಾರಿ ಬಾಲಕರ ವಸತಿ ನಿಲಯಕ್ಕೆ ತಹಶೀಲ್ದಾರ ಶ್ರೀಧರ ಗೋಟೂರ ಅವರು ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಯನ್ನು ಪರೀಶೀಲಿಸಿದರು.  

ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂಧರ್ಭದಲ್ಲಿ ಈ ವಸತಿ ನಿಲಯಕ್ಕೆ ಅವರು ಭೇಟಿ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ ನಾನೂಸಹ ವಿದ್ಯಾರ್ಥಿಯಾಗಿದ್ದಾಗ ಇಂಥಹದೆ ಸರ್ಕಾರಿ ವಸತಿ ನಿಲಯದಲ್ಲಿ ಇದ್ದು ವಿದ್ಯಾಭ್ಯಾಸ ಮಾಡಿದ್ದೇನೆ. ನಾನು ನನ್ನ ಇಲ್ಲಿಯವರೆಗಿನ ಸೇವಾ ಅವಧಿಯಲ್ಲಿ ಭೇಟಿ ನೀಡಿದ ವಸತಿ ನಿಲಯಗಳಲ್ಲಿಯೇ ಇಷ್ಟೋಂದು ಶಿಸ್ತು ಬದ್ದವಾದ, ಸಕಲ ಸೌಲಭ್ಯಗಳನ್ನು ಹೊಂದಿದ ಹಾಗೂ ಅತ್ಯುತ್ತಮವಾದ ಪರಿಸರ ಇರುವ ವಸತಿ ನಿಲಯ ಕಂಡಿಲ್ಲ, ಇಲ್ಲಿರುವ ಮಕ್ಕಳು ಅದೃಷ್ಟವಂತರು ನನ್ನ ದೃಷ್ಟಿಯಲ್ಲಿ ಈ ವಸತಿ ನಿಲಯ ಜಿಲ್ಲೆಯ ಒಂದು ಮಾದರಿ ವಸತಿ ನಿಲಯವಾಗಿದೆ. ಇಲ್ಲಿ ಆಸಕ್ತಿಯಿಂದ ಸೇವೆ ಸಲ್ಲಿಸುತ್ತಿರುವ ವಸತಿ ನಿಲಯದ ಸಿಬ್ಬಂಧಿಗಳಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೆನೆ ಎಂದರು. 

ತಹಶೀಲ್ದಾರ ಶ್ರೀಧರ ಗೋಟೂರ, ತಾ.ಪಂ. ಇಓ ಬಲವಂತ್ರಾಯಗೌಡ ಬಿರಾದಾರ, ಗ್ರಾ.ಪಂ ಅಧ್ಯಕ್ಷ ಬಸನಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಉಮೇಶ ಲಮಾಣಿ ಇವರನ್ನು ವಸತಿ ನಿಲಯದ ವತಿಯಿಂದ ಸನ್ಮಾನಿಸಲಾಯಿತು. 

ವಸತಿ ನಿಲಯ ಪಾಲಕರಾದ ಎಸ್ ಎಂ ಕಲಬುರ್ಗಿ, ಎನ್ ವ್ಹಿ ಕೋರಿ, ಎಸ್ ಎಂ ಬಾಸಗಿ, ಸಿಬ್ಬಂಧಿಗಳಾದ ಶ್ರೀನಿವಾಸ ಅಂಗಡಿ, ಗದ್ದೇಪ್ಪ ಜೈನಾಪೂರ, ಮಹಾದೇವಿ ಕೊಣ್ಣುರ ಇದ್ದರು. 


ಸುದ್ದಿ ಓದಿ