ತಾಳಿಕೋಟಿ

ವಾಲ್ಮೀಕಿ ಸಮಾಜದಿಂದ ತಹಶೀಲ್ದಾರ ಗೋಟೂರಗೆ ಸನ್ಮಾನ

ವಾಲ್ಮೀಕಿ ಸಮಾಜದಿಂದ ತಹಶೀಲ್ದಾರ ಗೋಟೂರಗೆ ಸನ್ಮಾನ

ತಾಳಿಕೋಟಿ :  ತಹಶೀಲ್ದಾರ ಶ್ರೀಧರ ಗೋಟೂರ ಅವರಿಗೆ ಕಲಕೇರಿ-ವಾಲ್ಮೀಕಿ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 

ಇತ್ತೀಚಿಗೆ ವಾಲ್ಮೀಕಿ ಜಯಂತಿ ಅಂಗವಾಗಿ ತಹಶೀಲ್ದಾರ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಸನ್ಮಾನ ನೀಡಿಲಾಯಿತು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಶ್ರೀಧರ ಗೋಟೂರ ಅವರು ರಾಜ್ಯ ಸರಕಾರ ತಮ್ಮ ಸಮಾಜಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಅನಕೂಲ ಮಾಡಿಕೊಟ್ಟಿದೆ ಇದರ ಸದುಪಯೋಗ ಮಾಡಿಕೊಳ್ಳುವಂತಾಗಲು ಸಮಾಜದ ಜವಾಬ್ದಾರರು ಪ್ರಯತ್ನಿಸಬೇಕು ಶಿಕ್ಷಣದಿಂದ ಮಾತ್ರ ಸಮಾಜಗಳು ಉದ್ಧಾರವಾಗಲು ಸಾಧ್ಯ, ತಾವು ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಖುಣಿಯಾಗಿರುವೆ ಎಂದರು. 

ಸಮಾಜಕ್ಕೆ ಸಿಕ್ಕ ಮೀಸಲಾತಿ ಸೌಲಭ್ಯವನ್ನು ಬೇರೆಯವರು ದುರುಪಯೋಗ ಪಡಿಸಿಕೊಳ್ಳದಂತೆ  ತಹಶೀಲ್ದಾರರು ನೋಡಿಕೊಳ್ಳಬೇಕೆಂದು ಸಮಾಜದ ಮುಖಂಡರು ಮನವಿ ಮಾಡಿಕೊಂಡರು. 

ಕಲಕೇರಿ ವಾಲ್ಮೀಕಿ ಸಮಾಜದ ಗಣ್ಯರಾದ ಎಂ. ಬಿ. ಕಾಂಬಳೆ, ಶಿವರಾಜ ಧರಿ, ರಮೇಶ ಹೆಂಡಿ, ತಾಲೂಕಾ ಎಸ್‌.ಸಿ.ಎಸ್‌.ಟಿ. ನೌಕರ ಸಂಘದ ಅಧ್ಯಕ್ಷ ಮಲ್ಲಪ್ಪ ಚಲಾಕರ, ಪ್ರಧಾನ ಕಾರ್ಯದರ್ಶಿ ಬಿ. ಜಿ. ಪತ್ತೇಪೂರ, ಕಾಶಿನಾಥ ಪಾಟೀಲ, ಸಂಜೀವ ಬರದೇನಾಳ ಮತ್ತೀತರರು ಉಪಸ್ಥಿತರಿದ್ದರು. 


ಸುದ್ದಿ ಓದಿ