ತಾಳಿಕೋಟಿ

ಪ್ರವಾಹ ಪಿಡಿತ ಗ್ರಾಮಗಳಿಗೆ ತಹಶೀಲ್ದಾರ ಗೋಟೂರ ಭೇಟಿ

ಪ್ರವಾಹ ಪಿಡಿತ ಗ್ರಾಮಗಳಿಗೆ ತಹಶೀಲ್ದಾರ ಗೋಟೂರ ಭೇಟಿ

ತಾಳಿಕೋಟಿ 06:  ಡೋಣಿ ನದಿ ಪ್ರವಾಹದಿಂದಾಗಿ ಪ್ರಭಾವಿತವಾದ ಬೊಮ್ಮನಹಳ್ಳಿ, ಗುತ್ತೀಹಾಳ, ಮಿಣಜಗಿ, ಹರನಾಳ, ಹಡಗಿನಾಳ, ಹಾಗೂ ಬೊಳವಾಡ ಗ್ರಾಮಗಳಿಗೆ ತಹಶೀಲ್ದಾರ ಶ್ರೀಧರ ಗೋಟೂರ ಭೇಟಿ ನೀಡಿದರು.  

ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಡೋಣಿ ನದಿಗೆ ಪ್ರವಾಹ ಬಂದು ತಟದಲ್ಲಿರುವ ಗ್ರಾಮಗಳಾದ ಬೊಮ್ಮನಹಳ್ಳಿ ಗುತ್ತಿಹಾಳ, ಬೊಳವಾಡ, ಮಿಣಜಗಿ, ಹರನಾಳ, ಹಡಗಿನಾಳ, ಗ್ರಾಮಗಳ ರೈತರ ಜಮೀನುಗಳಿಗೆ ದೊಡ್ಡಮಟ್ಟದಲ್ಲಿ ನೀರು ಪ್ರವೇಶಿಸಿ ಇದೀಗ ಬಿತ್ತನೆಗೊಂಡು ಬೆಳೆದು ನಿಂತ ಬೆಳೆ ನೀರಲ್ಲಿ ಕೊಚ್ಚಿಕೊಂಡು ಹೊಗಿ ರೈತರಿಗೆ ಭಾರಿ ನಷ್ಟ ತಂದೊಡ್ಡಿದೆ. ಇದರ ಸೂಕ್ತ ಪರಿಹಾರಕ್ಕಾಗಿ ತಾಲೂಕಾಡಳಿತ ಸ್ಪಂದಿಸಬೇಕೆಂದು ಈ ಗ್ರಾಮಗಳ ರೈತರ ಮನವಿಯಾಗಿತ್ತು.  

ನಿನ್ನೆ ತಹಶೀಲ್ದಾರ ಗೋಟೂರ ಅವರು ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಭಾವಿತ ಈ ಗ್ರಾಮಗಳಿಗೆ ಬೇಟಿ ನೀಡಿ ಪ್ರವಾಹದಿಂದಾಗಿ ರೈತರಿಗೆ ಆದ ಸಂಪೂರ್ಣ ನಷ್ಟದ ವಿವರಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಪಡೆದುಕೊಂಡರು. ಸ್ಥಳದಲ್ಲಿದ್ದ ಗ್ರಾಮಸ್ಥರಿಗೆ ಈ ಗಂಭೀರ ಸಮಸ್ಯೆಯನ್ನು ಸಂಪೂರ್ಣ ವರದಿ ಪಡೆದ ನಂತರ ಪರಿಹರಿಸಲಾಗುವುದು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರ ಪ್ರತಿನಿಧಿ ಸಂಗನಗೌಡ ಬಿರಾದಾರ, ಉಪಾಧ್ಯಕ್ಷ ಶಿವಶಂಕರ ಕಟ್ಟಿಮನಿ, ಪಿಡಿಓ ಎನ್ ಎಸ್ ದೊಡಮನಿ, ಕೃಷಿ ಅಧಿಕಾರಿ ಮಹೇಶ ಜೋಶಿ, ಎಮ್ ಎ ಸಗರಮಠ, ಗ್ರಾಮ ಲೆಕ್ಕಿಗರಾದ ಶಿವಾನಂದ ಅಂಗಡಿ, ಪ್ರಶಾಂತ ಶಾಂತಗೇರಿ, ಸದಾಶಿವ ಮಾದರ, ಜಯರಾಮ ಚೌಹಾಣ, ಹಾಗೂ ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ