ಕಲಿಕಾ ಚೇತರಿಕೆ ಕಾರ್ಯಕ್ರಮ ಯಶಸ್ವಿಗೆ ಶಿಕ್ಷಕರು ಶ್ರಮಿಸಿ: ಪ್ಯಾಟಿ
ಲೋಕದರ್ಶನ ವರದಿ
ಬೈಲಹೊಂಗಲ 05: ಕೊರೋನಾದಿಂದ ಕಳೆದ ಎರಡು ವರ್ಷಗಳಲ್ಲಿ ಮಕ್ಕಳಿಗೆ ಆಗಿರುವ ಕಲಿಕಾ ನಷ್ಟವನ್ನು ತುಂಬಿಕೊಡಲು ಕಲಿಕಾ ಚೇತರಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಇಓ ಎ ಎನ್.ಪ್ಯಾಟಿ ಹೇಳಿದರು.
ಅವರು ಬುಧವಾರ ಪಟ್ಟಣದ ಹೊಸೂರ ರಸ್ತೆಯ ಕೆ.ಆರ್.ಸಿ.ಇ.ಎಸ್.ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ, ಕ್ಷೇತ್ರ ಸಂಪನ್ಮೂಲ ಕೇಂದ್ರ ಆಶ್ರಯದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2 ದಿನಗಳ ತರಬೇತಿ ಕಲಿಕಾ ಚೇತರಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಕಲಿಕಾ ಕೊರತೆ ತುಂಬಲು ರಾಜ್ಯ ಸರ್ಕಾರ ವಿಶಿಷ್ಟವಾದ ಕಲಿಕಾ ಚೇತರಿಕೆ'' ಕಾರ್ಯಕ್ರಮ ಜಾರಿಗೊಳಿಸಿದೆ. ಈ ಕಾರ್ಯಕ್ರಮದ ಯಶಸ್ವಿಗೆ ಎಲ್ಲ ಶಿಕ್ಷಕರು ಶ್ರಮಿಸಬೇಕು ಎಂದರು.
ಕ್ಷೇತ್ರ ಸಮನ್ವಯ ಅಧಿಕಾರಿ ಬಿ.ಎನ್.ಕಸಾಳೆ ಮಾತನಾಡಿ, “ಕಲಿಕಾ ಚೇತರಿಕೆ ವರ್ಷ” ರಾಜ್ಯಾದ್ಯಂತ ಏಕರೂಪದ ಶೈಕ್ಷಣಿಕ ಪ್ರಕ್ರಿಯೆ ಜಾರಿಯಾಗುತ್ತಿದೆ. ವಿದ್ಯಾರ್ಥಿಗಳ ಭಾವನಾತ್ಮಕ ಅಗತ್ಯತೆಗಳಿಗೆ ಶಿಕ್ಷಕರ ಬೆಂಬಲ ಅಗತ್ಯವಿದೆ ಎಂದರು.
ಬಿ.ಎಸ್.ಫಕೀರಸ್ವಾಮಿಮಠ, ವ್ಹಿ.ಎಮ್.ಮಗದುಮ, ಎಸ್.ಎಸ್.ಚಳಕೊಪ್ಪ, ಮಲ್ಲಿಕಾರ್ಜುನ ಬಿರಾದಾರ ಸೇರಿದಂತೆ ಬಿಆರ್ ಪಿ, ಸಿಆರ್ಪಿಗಳು, ಬಿಇಓ ಕಾರ್ಯಾಲಯದ ಸಿಬ್ಬಂದಿ ವರ್ಗ ಇದ್ದರು.
ತಾಲೂಕಿನ 202 ಶಿಕ್ಷಕರು ತರಬೇತಿ ಪಡೆದುಕೊಂಡರು.