ತಾಳಿಕೋಟಿ

ಶಿಕ್ಷಕರು ವೃತ್ತಿ ಪಾವಿತ್ರ್ಯ ಕಾಪಾಡಿ: ಶಾಸಕ ಪರಮೇಶ್ವರನಾಯ್ಕ

ಶಿಕ್ಷಕರು ವೃತ್ತಿ ಪಾವಿತ್ರ್ಯ ಕಾಪಾಡಿ: ಶಾಸಕ ಪರಮೇಶ್ವರನಾಯ್ಕ

ಹೂವಿನ ಹಡಗಲಿ 10: ಮಕ್ಕಳು ಭವಿಷ್ಯ ರೂಪಿಸುವ ಶಿಕ್ಷಕರು ಶಿಸ್ತು, ಸಂಯಮ,ಪ್ರಾಮಾಣಿಕತೆ ರೂಢಿಸಿಕೊಳ್ಳಬೇಕು ಜತೆಗೆ ವೃತ್ತಿ ಪಾವಿತ್ರ್ಯ ಕಾಪಾಡಿಕೊಳ್ಳಿ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು. 

ಹೂವಿನ ಹಡಗಲಿ ಶಾಂತವೀರ ಸಮುದಾಯ ಭವನದಲ್ಲಿ ಸೋಮವಾರ ನಡೆದ ಶಿಕ್ಷಕ ದಿನಾಚರಣೆ ಕಾರ‌್ಯಕ್ರಮ ಉದ್ಘಾಟಿಸಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಸಾವಿತ್ರಿಬಾಯಿ ಫುಲೆ ಅವರ ಆಧರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದ ಅವರು ಮಕ್ಕಳಿಗೆ ಪಾಠದ ಜತೆಗೆ ಬದುಕಿನ ಜೀವನದ ನೀತಿಪಾಠ,ಮೌಲ್ಯ ಶಿಕ್ಷಣವನ್ನು ಹೇಳಿ ಕೊಡಿರಿ ಎಂದರು. 

ಪಟ್ಟಣದಲ್ಲಿ 1ಎಕರೆ ಜಾಗದಲ್ಲಿ ಗುರುಭವನ ಕಟ್ಟಡ ನಿರ್ಮಾಣಕ್ಕೆ 1ಕೋಟಿ ರೂ.ಅನುದಾನ ನೀಡುವುದಾಗಿ ಹೇಳಿದ ಅವರು ಮೊದಲ ಕಂತಿನಲ್ಲಿ 25ಲಕ್ಷ ರೂ.ಕೊಡುವುದಾಗಿ ಶಾಸಕರು ಭರವಸೆ ನೀಡಿದರು. 

ಕಾರ‌್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷ ಶ್ರೀನಿವಾಸ ಆರ್‌.ಹಿರೇಗೌಡ ವಹಿಸಿದ್ದರು. ಸಾನಿದ್ಯವಹಿಸಿದ್ದ ಗವಿಮಠದ ಡಾ.ಹಿರಿಶಾಂರವೀರಸ್ವಾಮೀಜಿ ಆಶೀರ್ವಾಚನ ನೀಡಿದರು. ಪುರಸಭೆ ಅಧ್ಯಕ್ಷ ಜ್ಯೋತಿಮಲ್ಲಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಪಾಟೀಲ ಬಸವನಗೌಡ ಬ್ಯಾಲಹುಣ್ಸಿ, ಬ್ಲಾಕ್ ಅಧ್ಯಕ್ಷ ಎಂ.ಪರಮೇಶ್ವರ​‍್ಪ,ಅರವಳ್ಳಿ ವೀರಣ್ಣ, ಅಟವಾಳಗಿ ಕೊಟ್ರೇಶ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಬಿ.ಜಗದೀಶ, ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಪ್ರಕಾಶ ಸೇರಿದಂತೆ ಶಿಕ್ಷಕರ ನಾನಾ ಸಂಘಟನೆಯ ಅಧ್ಯಕ್ಷರು,ಪದಾಧಿಕಾರಿಗಳು, ತಾಲೂಕಿನ ಶಿಕ್ಷಕ,ಶಿಕ್ಷಕಿಯರು ಭಾಗವಹಿಸಿದ್ದರು. 

ಈ ವೇಳೆ ಶಿಕ್ಷಕರ ದಿನಾಚರಣೆ ನಿಮಿತ್ತ ಜೇಸಿಯಿಂದ ಆರೋಗ್ಯಶಿಬಿರ, ನೇತ್ರಾದಾನ ಶಿಬಿರವನ್ನು ಆಯೋಜಿಸಲಾಗಿತ್ತು ಹಾಗೂ ನಿವೃತ್ತ  ಪ್ರಸಕ್ತ ಸಾಲಿನ ತಾಲೂಕಿನ ಉತ್ತಮ ಶಿಕ್ಷಕರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. 


ಸುದ್ದಿ ಓದಿ