ಶಿಗ್ಗಾವ್

ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯ: ಚಿಕ್ಕಮಠ

ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯ: ಚಿಕ್ಕಮಠ

ಶಿಗ್ಗಾವಿ 05: ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದ್ದು, ತಾಲೂಕಿನ ಶಿಕ್ಷಕರು ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ಶ್ರಮಿಸಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಯ್ಯ ಚಿಕ್ಕಮಠ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಾಲೆಗಳು ನಾಳೆಯಿಂದ ಪ್ರಾರಂಭವಾಗಲಿವೆ, ಶಿಕ್ಷಕರು ಜವಾಬ್ದಾರಿ ಮೆರೆಯಬೇಕಿದೆ, ಶಿಕ್ಷಣ ಸಚಿವರು ತಾಲೂಕಿಗೆ ಬೇಟಿ ನೀಡಿದ್ದಾಗ ಶೈಕ್ಷಣಿಕ ವಿಷಯದ ಕುರಿತು ಉತ್ತಮ ಪ್ರತಿಕ್ರಿಯೇ ನೀಡಿದ್ದಾರೆ ಎಂದರು.

ತಹಶೀಲ್ದಾರ ಮಂಜುನಾಥ ಮುನ್ನೋಳ್ಳಿ ಮಾತನಾಡಿ ಹೊಸ ಶಿಕ್ಷಣ ನೀತಿಯನ್ನು ಸರಕಾರ ಜಾರಿಗೆ ತಂದಿದ್ದು ಅದರ ಅನುಷ್ಟಾನ ನೀತಿ ಎಲ್ಲ ಶಿಕ್ಷಕರ ಮೇಲಿದೆ ಎಂದರು.

ಪುರಸಭೆ ಅದ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಮಾತನಾಡಿ ಈ ಕೋರೋನಾ ಮಹಾಮಾರಿಯಿಂದ ಶಿಕ್ಷಕರ ಮತ್ತು ಮಕ್ಕಳ ಬಾಂಧವ್ಯ ದೂರವಾಗಿದೆ, ಬೊಮ್ಮಾಯಿಯವರು ಸಿಎಂ ಆಗಲು ಶಿಕ್ಷಕರ ಪಾತ್ರವೂ ದೊಡ್ಡದಿದ್ದು ನಂ 1 ತಾಲೂಕಾಗಲು ತಾಲೂಕಿನ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಶ್ರಮಿಸಬೇಕಿದ್ದು ಶಿಕ್ಷಕರ ಸಮಸ್ಯೆಗಳಿದ್ದರೆ ಬೊಮ್ಮಾಯಿಯವರ ಗಮನಕ್ಕೆ ತರಲಾಗುವುದು ಜೊತೆಗೆ ಗುರುಭವನದ ಪುನರ್‍ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು ಎಂದರು.

ತಾಲೂಕಾ ಇಓ ಪ್ರಶಾಂತ ತುರುಕಾಣಿ ಮಾತನಾಡಿ ಒಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಶಿಕ್ಷಕರ ಪಾತ್ರ ಬಹಳಷ್ಟಿರುತ್ತದೆ, ಶಿಕ್ಷಕರ ವೃತ್ತಿಗೆ ಬೆಲೆ ಕಟ್ಟಲು ಸಾದ್ಯವಿಲ್ಲ ಎಂದರು.

ತಾಲೂಕಾ ಸರಕಾರಿ ಶಿಕ್ಷಕರ ಸಂಘದ ಅದ್ಯಕ್ಷ ಅರುಣ್ ಹುಡೇದಗೌಡ್ರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಎ ಎಫ್ ಹೊಸಮನಿ, ಪ್ರೌಢ ಸಾಲಾ ಶಿಕ್ಷಕರ ಸಂಘದ ಅದ್ಯಕ್ಷ ಬಿ ಶ್ರೀನಿವಾಸ, ಎಸ್ ಎನ್ ಮುಗುಳಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕೋರೋನಾದಿಂದ ನಿಧನರಾದ ಶಿಕ್ಷಕರ ಕುಟುಂಬದ ಸದಸ್ಯರಿಗೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು.

ವಾಯ್ ಬಿ ಹುಚ್ಚಣ್ಣವರ, ಎಫ್ ಎಸ್ ನಾಗನೂರಮಠ, ರಮೇಶ, ಅಶೋಕ ಕುಂಬಾರ, ಎಚ್ ಎಚ್ ರಟ್ಟಿಹಳ್ಳಿ ಸೇರಿದಂತೆ ತಾಲೂಕಿನ ಶಿಕ್ಷಕರು, ನಿವೃತ್ತ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿಗಳು ಇದ್ದರು.

ಸುದ್ದಿ ಓದಿ