ತಾಂಬಾ ಪ್ರಾ.ಆ. ಕೇಂದ್ರದಲ್ಲಿ ಅನೈತಿಕ ಚಟುವಟಿಕೆ: ಕ್ರಮಕ್ಕೆ ಒತ್ತಾಯ
ಇಂಡಿ 6: ಅನೈತಿಕವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಘಟನೆ ತಾಲೂಕಿನ ತಾಂಬಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ತೆನ್ನಿಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆ ಹಾಗೂ ಅದೇ ಗ್ರಾಮದ ಗ್ರಾಪಂ ಸದಸ್ಯ ಇವರು ಆಸ್ಪತ್ರೆಯಲ್ಲಿ ಅನೈತಿಕವಾಗಿ ಲೈಂಗಿಕ ಚಟುವಟಿಕೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ದೃಶ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೆ ಹರಿ ಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಇಂತಹ ಹೀನ ಕಾರ್ಯವನ್ನು ಸಾರ್ವಜನಿಕರು, ರೊಗಿಗಳು ಬರುವಂತ ಆರೋಗ್ಯ ಕೇಂದ್ರದ ಕೊಣೆಯಲ್ಲಿ ರೋಮ್ಯಾನ್ಸ್ ನಡೆಸಿರುವುದು ನಾಚಿಕೆಗೆಡಿನ ಸಂಗತಿಯಾಗಿದೆ.
ಈ ಕೃತ್ಯಕ್ಕೆ ಅಲ್ಲಿಯ ಸಿಬಂದಿ ಪ್ರಚೋದನೆ ನೀಡುತ್ತಿದ್ದು ಈ ಕೂಡಲೆ ಇಲ್ಲಿಯ ಎಲ್ಲ ಸಿಬ್ಬಂದಿಯ ಮೇಲೆ ಕ್ರಮ ಜರುಗಿಸಿ ಬೇರೆ ಸಿಬ್ಬಂದಿಯನ್ನು ನೇಮಿಸಬೇಕು. ಮತ್ತೆ ಇಂತಹ ಕೃತ್ಯ ನಡೆಯಬಾರದು. ತಪ್ಪು ಮಾಡಿದವರಿಗೆ ಶಿಕ್ಷೆ ನೀಡಬೇಕೆಂದು ಸ್ಥಳಿಯ ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಕುರಿತು ಇಂಡಿ ಗ್ರಾಮಿಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದು ವರೆದಿದೆ ಎಂದು ತಿಳಿದು ಬಂದಿದೆ.