ತಾಲೂಕಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ
ಯರಗಟ್ಟಿ 22: ಸಮೀಪದ ಮುನವಳ್ಳಿ ಪಟ್ಟಣದ ಎಸ್.ಪಿ.ಜೆ.ಜಿ. ಪ್ರೌಢಶಾಲೆಯಲ್ಲಿ ಸವದತ್ತಿ ತಾಲೂಕಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಜರುಗಿತು.
ಶಾಸಕ ವಿಶ್ವಾಸ ವಸಂತ ವೈದ್ಯ ಉದ್ಘಾಟಿಸಿ ಮಾತನಾಡುತ್ತ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ವೈಜ್ಞಾನಿಕ ಮನೋಭಾವದಿಂದ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ವಿದ್ಯಾರ್ಥಿಗಳು ವಿಜ್ಞಾನವನ್ನು ಆಳವಾಗಿ ಅಭ್ಯಸಿಸಬೇಕು. ವಿಜ್ಞಾನ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದರು.
ಮುರುಘೇಂದ್ರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಜೆ.ಎಸ್.ಪಿ. ಸಂಘದ ಅಧ್ಯಕ್ಷ ಎಂ.ಆರ್.ಗೋಪಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸವದತ್ತಿ ಟಿ.ಎ.ಪಿ.ಎಂ.ಎಸ್.ಅಧ್ಯಕ್ಷ ರವೀಂದ್ರ ಯಲಿಗಾರ, ಎ.ಪಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ ಪೂಜೇರ(ಜಂಬ್ರಿ), ಮಹಾರಾಜಗೌಡ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ, ಕ್ಷೇತ್ರ ಸಮನ್ವಯಾಧಿಕಾರಿ ಬಿ. ಎನ್. ಬ್ಯಾಳಿ, ಕಾರ್ಯಕ್ರಮದ ಪ್ರಾಯೋಜಕರಾದ ವೀರೇಶ ಬ್ಯಾಹಟ್ಟಿ, ಶುಭಾ ಬ್ಯಾಹಟ್ಟಿ, ಸುಧಾಕರ ರೇಣಕೆ, ಅಮಿತ ಕರೀಕಟ್ಟಿ, ಪ್ರಧಾನ ಗುರು ಬಿ. ಬಿ. ನಾವಲಗಟ್ಟಿ, ಅನ್ನಪೂರ್ಣ ಲಂಬೂನವರ, ಡಾ. ಎ. ಎಸ್. ಅಮೋಘಿಮಠ, ಡಾ. ಎಂ. ಎಸ್. ಬಾಗೇವಾಡಿ, ವಿ. ಎಂ. ಸೂರ್ಯವಂಶಿ, ಎಂ. ಜಿ. ಹೊಸಮಠ, ತರುಣಕುಮಾರ ಮಳಗಲಿ, ಎಸ್. ಎಚ್. ಸುಗತೆ, ಎಂ. ಎ. ಕಮತಗಿ, ಎಸ್. ಬಿ. ಹಿರಲಿಂಗಣ್ಣವರ, ಅನಿತಾ ಯಲಿಗಾರ, ರಾಘವೇಂದ್ರ ಬಂಡಿವಡ್ಡರ ಸೇರಿದಂತೆ ಇತರರು ಇದ್ದರು. ಎಸ್.ಪಿ.ಜೆ.ಜಿ. ಪ್ರೌಢಶಾಲೆ, ನೂತನ ವಿಜ್ಞಾನ ವೇದಿಕೆ, ಡಾ.ಸ.ಜ.ನಾಗಲೋಟಿಮಠ ವಿಜ್ಞಾನ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.