ಯರಗಟ್ಟಿ

ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ

ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ

ಯರಗಟ್ಟಿ 22: ಸಮೀಪದ ಗುರು ನಿರುಪಾದೀಶ್ವರ ಕಲ್ಯಾಣ ಮಂಟಪ, ಚಿಕೊಪ್ಪ ಕೆ. ಎಸ್‌. ಗ್ರಾಮದ ಸಮುದಾಯ ಭವನದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಯಿತು. 

ಪ. ಪೂ ಶ್ರೀ ಬ್ರಹ್ಮಶ್ರೀ ವೀರ ಮಹಾಸ್ವಾಮಿಗಳು, ಸಣಪ್ಪ ದುಂಡಪ್ಪ ಸನದಿ, ಲಕ್ಷ್ಮೀ ಗಿ. ಗಣಿ ಕಾರ್ಯಕ್ರಮವನ್ನು ದೀಪ ಬೆಳಗುವುದರ  ಮೂಲಕ ಚಾಲನೆ ನೀಡಿ,  ಪ. ಪೂ ಶ್ರೀ ಬ್ರಹ್ಮಶ್ರೀ ವೀರಭದ್ರ ಮಹಾಸ್ವಾಮಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ, ಜ್ಞಾನವಿಕಾಸ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯನ್ನು  ವ್ಯಕ್ತಪಡಿಸಿದರು.  

ಸಂಪನ್ಮೂಲ ವ್ಯಕ್ತಿಯಾದ ಲಕ್ಷ್ಮಿ ಗಿಣಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಮಹಿಳೆಯ ಪಾತ್ರ, ಮಕ್ಕಳಿಗೆ ನೀಡುವ  ಸಂಸ್ಕಾರಯುತ ಶಿಕ್ಷಣಗಳ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ಶಿಕ್ಷಣದಲ್ಲಿ ಪೋಷಕರು ಗಮನ ಹರಿಸುವ ಬಗ್ಗೆ ಹಾಗೂ ಮಹಿಳೆಯ ಕುಟುಂಬ ನಿರ್ವಹಣೆಯಲ್ಲಿ ಪೋಷಕರ ಪಾತ್ರವನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. 

ಪ್ರಾದೇಶಿಕ ಜ್ಞಾನವಿಕಾಸ ವ್ಯಾಪ್ತಿಯ ಯೋಜನಾಧಿಕಾರಿ ಗಳಾದ  ಮಲ್ಲಿಕಾ ಮೇಡಂ ರವರು ಜ್ಞಾನವಿಕಾಸ ಕಾರ್ಯಕ್ರಮದ ವೈಶಿಷ್ಟ್ಯತೆಗಳು, ಮಾತೃಶ್ರೀ ಅಮ್ಮನವರ ಮಾತೃ ವಾತ್ಸಲ್ಯದ ಕಾರ್ಯಕ್ರಮಗಳಾದ ಮಾಸಾಸನ, ಅಸಹಾಯಕರಿಗೆ ವಾತ್ಸಲ್ಯ ಮನೆ ನಿರ್ಮಾಣ, ಜ್ಞಾನವಿಕಾಸ ಕಾರ್ಯಕ್ರಮದ ಮಹತ್ವ  ಇವುಗಳ ಬಗ್ಗೆ ಪ್ರಸ್ತಾಪಿಸಿದರು. ವಿದ್ಯಾ ಬಿ ಅಂಗಡಿ ರವರು ರವರು  ಮಕ್ಕಳ ಶಿಕ್ಷಣದಲ್ಲಿ ಪೋಷಕರ ಜವಾಬ್ದಾರಿಗಳ ಬಗ್ಗೆ ಮನವರಿಕೆ ಮಾಡಿದರು. 

ಮಾನ್ಯ ಯೋಜನಾಧಿಕಾರಿಗಳಾದ ಸತೀಶ್ ಡಿ ಅವರು ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರು, ಸಮನ್ವಯಾಧಿಕಾರಿ, ಗಣ್ಯರು, ಸೇವಾಪ್ರತಿನಿಧಿಗಳು ಹಾಗೂ  ಸದಸ್ಯರು ಉಪಸ್ಥಿತರಿದ್ದರು.600 ರಿಂದ 700 ಸದಸ್ಯರು ಭಾಗವಹಿಸಿದ್ದು ಕಾರ್ಯಕ್ರಮವನ್ನು ಕೇಂದ್ರದ ಸದಸ್ಯರು ಸಾಂಸ್ಕೃತಿಕ  ಕಾರ್ಯಕ್ರಮವನ್ನು ನೀಡುವ ಮೂಲಕ ಯಶಸ್ವಿಯಾಗಿ ನಡೆಸಲಾಯಿತು. 


ಸುದ್ದಿ ಓದಿ